Plastic Ban! ಹಂಗದ್ರೆ ಏನ್ ಗುರು? Bidar Republic ‌ನಲ್ಲಿ ಸು.ಕೋರ್ಟ್‌ ಆದೇಶಕ್ಕೆ ಬೆಲೆ ಇಲ್ಲ

ಬೀದರ್‌: ಕರ್ನಾಟಕದ ಮುಕುಟ ಗಡಿಜಿಲ್ಲೆ ಬೀದರ್‌ನಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ದೇಶಾದ್ಯಂತ ಪ್ಲಾಸ್ಟಿಕ್‌ ಬಳಕೆಯ ಮೇಲೆ ನಿಷೇಧ ಹೇರಿದ್ರೂ, ಬೀದರ್‌ನಲ್ಲಿ ಮಾತ್ರ ಅದು ಜಾರಿಯಾಗಿಲ್ಲ. ಕಾನೂನು ಜಾರಿಗೊಳಿಸಬೇಕಾದ ಅಧಿಕಾರಿಗಳು ಮಾತ್ರ ಕಂಡು ಕಾಣದಂತಿದ್ದಾರೆ. ಆಗಾಗ ನೆಪಕ್ಕೆ ಮಾತ್ರ ದಾಳಿ ಮಾಡಿ ಕಣ್ಮುಚ್ಚಿಕುಳಿತಿರುವ ಅಧಿಕಾರಿಗಳ ಧೋರಣೆಗೆ ಸಾರ್ವಜನಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹೌದು, ಬೀದರ್‌ ಜಿಲ್ಲೆಯಲ್ಲಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳು 10 ರಿಂದ 15 ಎಂಎಂ ಮೈಕ್ರೋನ್‌ಗಿಂತ ಕಡಿಮೆ ದರ್ಜೆಯವು. ಇವುಗಳ ಮಾರಾಟ ಮತ್ತು ಬಳಕೆ […]

Plastic Ban! ಹಂಗದ್ರೆ ಏನ್ ಗುರು? Bidar Republic ‌ನಲ್ಲಿ ಸು.ಕೋರ್ಟ್‌ ಆದೇಶಕ್ಕೆ ಬೆಲೆ ಇಲ್ಲ
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 15, 2020 | 10:52 AM

ಬೀದರ್‌: ಕರ್ನಾಟಕದ ಮುಕುಟ ಗಡಿಜಿಲ್ಲೆ ಬೀದರ್‌ನಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ದೇಶಾದ್ಯಂತ ಪ್ಲಾಸ್ಟಿಕ್‌ ಬಳಕೆಯ ಮೇಲೆ ನಿಷೇಧ ಹೇರಿದ್ರೂ, ಬೀದರ್‌ನಲ್ಲಿ ಮಾತ್ರ ಅದು ಜಾರಿಯಾಗಿಲ್ಲ. ಕಾನೂನು ಜಾರಿಗೊಳಿಸಬೇಕಾದ ಅಧಿಕಾರಿಗಳು ಮಾತ್ರ ಕಂಡು ಕಾಣದಂತಿದ್ದಾರೆ. ಆಗಾಗ ನೆಪಕ್ಕೆ ಮಾತ್ರ ದಾಳಿ ಮಾಡಿ ಕಣ್ಮುಚ್ಚಿಕುಳಿತಿರುವ ಅಧಿಕಾರಿಗಳ ಧೋರಣೆಗೆ ಸಾರ್ವಜನಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಹೌದು, ಬೀದರ್‌ ಜಿಲ್ಲೆಯಲ್ಲಿ ಬಳಕೆಯಾಗುತ್ತಿರುವ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳು 10 ರಿಂದ 15 ಎಂಎಂ ಮೈಕ್ರೋನ್‌ಗಿಂತ ಕಡಿಮೆ ದರ್ಜೆಯವು. ಇವುಗಳ ಮಾರಾಟ ಮತ್ತು ಬಳಕೆ ಜಿಲ್ಲೆಯಲ್ಲಿ ಸರ್ವೇಸಾಮಾನ್ಯವಾಗಿದೆ. ಇದು ಪರಿಸರವಾದಿಗಳು ಮತ್ತು ಪ್ರಜ್ಞಾವಂತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸುಪ್ರೀಂ‌ ಕೋರ್ಟ್‌ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು! ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ 45 ಎಂಎಂ ಮೈಕ್ರೋನ್‌ಗಿಂತ ಕಡಿಮೆ ಇರೋ ಬ್ಯಾಗ್‌ಗಳನ್ನ ತಯಾರಿಸುವಂತಿಲ್ಲ. ಹಾಗೇನೇ ಮಾರಾಟ ಮತ್ತು ಬಳಕೆ ಕೂಡಾ ಮಾಡೋ ಹಾಗಿಲ್ಲ. ಹಾಗೆ ಮಾಡಿದ್ರೆ ಅದು ಅಪರಾಧ. ಆದ್ರೆ ಇದಕ್ಕೆಲ್ಲಾ ಬೀದರ್‌ ರಿಪಬ್ಲಿಕ್‌ನಲ್ಲಿ ಬೆಲೆ ಇಲ್ಲಾ. ಸುಪ್ರೀ‌ಂ ಕೋರ್ಟ್ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಬೆಲೆಯೂ ಇಲ್ಲ.

ಪ್ಸಾಸ್ಟಿಕ್‌ ಬ್ಯಾಗ್‌ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆ ಎಗ್ಗಿಲ್ಲದೇ ಸಾಗುತ್ತಿದೆ. ಇನ್ನು ಇಂತಹ ಕ್ಯಾರಿ ಬ್ಯಾಗ್‌ಗಳನ್ನ ಬಳಸೋ ಸಾರ್ವಜನಿಕರು ನಂತರ ಅವನ್ನ ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಇದನ್ನ ತಿನ್ನೋ ಜಾನುವಾರುಗಳಲ್ಲಿ ಕೆಲವು ಸಾವನ್ನಪ್ಪಿವೆ. ಇನ್ನುಳಿದವು ಮೂಕವೇದನೆ ಅನುಭವಿಸುತ್ತಿವೆ. ಇದೆಲ್ಲಕ್ಕೂ ಮಿಗಿಲಾಗಿ ಪರಿಸರದ ಮೇಲಾಗುತ್ತಿರುವ ಪರಿಣಾಮ ಮಾತ್ರ ಗಂಭೀರ.

ಬೀದರ್‌ನಲ್ಲಿ ಜೀವನವೇ ಪ್ಲಾಸ್ಟಿಕ್‌ಮಯ! ಬೀದರ್‌ ಜಿಲ್ಲೆಯಲ್ಲಿ ಪ್ರತಿ ದಿನ ಸಾವಿರಾರು ಕ್ಯಾರಿ ಬ್ಯಾಗ್‌ಗಳು ಕಿರಾಣಿ ಅಂಗಡಿ, ಶಾಪಿಂಗ್ ಮಾಲ್‌ಗಳಲ್ಲಿ ಬಳಕೆಯಾಗುತ್ತಿವೆ. ಸಾರ್ವಜನಿಕರು ಕೂಡಾ ತರಕಾರಿ, ದಿನಸಿಯಂಥ ಪದಾರ್ಥಗಳಿಗೆ ಪ್ಲಾಸ್ಟಿಕ್ ಬ್ಯಾಗ್‌ಗಳನ್ನೇ ಬಳಸ್ತಿದ್ದಾರೆ. ಪ್ರತಿದಿನ ತಿಂಡಿ, ಉಪಾಹಾರ, ಊಟದ ಪ್ಲೇಟ್‌ಗಳಲ್ಲಿ ತೆಳ್ಳಗಿನ ಪ್ಲಾಸ್ಟಿಕ್‌ ಬಳಸ್ತಾರೆ. ಪಾರ್ಸಲ್‌ ತೆಗೆದುಕೊಂಡು ಹೋಗುವ ಗ್ರಾಹಕರಿಗೂ ತೆಳ್ಳನೆಯ ಪ್ಲಾಸ್ಟಿಕ್‌ ಹಾಳೆಯಲ್ಲಿಯೇ ಕೊಡುತ್ತಾರೆ. ಪ್ಲಾಸ್ಟಿಕ್‌ ನಿಷೇಧ ಎನ್ನುವ ಪದವೇ ಇಲ್ಲಿ ನಿಷೇಧವಾಗಿದೆ.

ನಿದ್ರಿಸುತ್ತಿದೆ ಬೀದರ್‌ ನಗರಸಭೆ ಇಷ್ಟೆಲ್ಲಾ ಕಾನೂನಿನ ಉಲ್ಲಂಘನೆಯಾಗುತ್ತಿದ್ರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಪ್ಲಾಸ್ಟಿಕ್ ಬಳಕೆ ವಿಚಾರದಲ್ಲಿ ನಗರ ಸಭೆ ಅಧಿಕಾರಿಗಳು ಮತ್ತು ವ್ಯಾಪಾರಿಗಳ ನಡುವೆ ಗುಪ್ತ ಒಪ್ಪಂದವಿದೆ. ಹೀಗಾಗಿ ಸುಪ್ರಿಂಕೋರ್ಟ್ ಆದೇಶ ಮೀರಿ ಪ್ಲಾಸ್ಟಿಕ್ ಬ್ಯಾಗ್‌ಗಳ ತಯಾರಿಕೆ ಹಾಗೂ ಅಕ್ರಮ ಮಾರಾಟ ಭರ್ಜರಿಯಾಗಿಯೇ ನಡೆಯುತ್ತಿದೆ ಅನ್ನೋ ಆರೋಪ ಸಾರ್ವಜನಿಕರದ್ದು.

ಅಧಿಕಾರಿಗಳು ಕೇವಲ ಸರ್ಕಾರದ ಸುತ್ತೋಲೆ ಬಂದಾಗ ಸಾರ್ವಜನಿಕರಿಗೆ, ಅಂಗಡಿ, ಹೋಟೆಲ್‌, ತರಕಾರಿ ವ್ಯಾಪಾರಿಗಳಿಗೆ ಪ್ಲಾಸ್ಟಿಕ್‌ ಬಳಸಿದರೆ ದಂಡ ಮತ್ತು ಕೇಸ್‌ ದಾಖಲಿಸುವುದಾಗಿ ಕರಪತ್ರ ಹಂಚುತ್ತಾರೆ. ನಂತರದ ದಿನಗಳಲ್ಲಿ ಈ ಬಗ್ಗೆ ಗಮನವನ್ನೇ ಹರಿಸೋದಿಲ್ಲ. ಇದರಿಂದಗಿ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ತಗ್ಗಿಸಲು ಸಾಧ್ಯವಾಗಿಲ್ಲ. ಹೀಗಾಗಿ ನಗರ ಸಭೆ ಪ್ಲಾಸ್ಟಿಕ್ ಬಳಕೆ ನಿಷೇಧವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಪರಿಸರವನ್ನ ಕಾಪಾಡಬೇಕು ಅನ್ನೋದು ಬೀದರ್‌ ಜನತೆಯ ಆಗ್ರಹ.

Published On - 11:55 am, Sun, 14 June 20