ಬಿಜೆಪಿಗರಿಂದ ಸರ್ವೇ: ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಿಸಿಗರ ಜಾಲ ಪತ್ತೆ
ಮಹದೇವಪುರ ಬಿಜೆಪಿ ಮಂಡಲವು ನಡೆಸಿದ ಸರ್ವೇಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಐದು ತಂಡಗಳು ನಡೆಸಿದ ಈ ಸರ್ವೆಯಲ್ಲಿ, ನಕಲಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಗಳನ್ನು ಬಳಸಿ ವಾಸಿಸುತ್ತಿರುವ ವಲಸಿಗರು ಪತ್ತೆಯಾಗಿದ್ದಾರೆ. ಬಾಂಗ್ಲಾದೇಶಕ್ಕೆ ಹಣ ಕಳುಹಿಸುವುದು ಕೂಡ ಪತ್ತೆಯಾಗಿದೆ.

ಬೆಂಗಳೂರು, ಜುಲೈ 13: ಮಹದೇವಪುರ ಬಿಜೆಪಿ (bjp) ಮಂಡಲದಿಂದ ಒಟ್ಟು 5 ತಂಡದಿಂದ ಅಕ್ರಮ ಬಾಂಗ್ಲಾ ವಲಸಿಗರ (illegal Bangladeshi immigrants) ಕುರಿತು ಸರ್ವೆ ಮಾಡಲಾಗಿದ್ದು, ಏಜೆಂಟ್ ಮೂಲಕ ನಕಲಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಪಡೆದು ಅಕ್ರಮವಾಗಿ ಬಾಂಗ್ಲಾ ವಲಸಿಗರು ವಾಸ್ತವ್ಯ ಹೂಡಿರುವುದು ಪತ್ತೆ ಆಗಿದೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಮಹದೇವಪುರದ ವರದಿ ತಯಾರಿಸಲಾಗಿದ್ದು, ಕೇಂದ್ರದ ನಾಯಕರಿಗೆ ರೆಬೆಲ್ಸ್ ಟೀಂ ವರದಿ ಸಲ್ಲಿಕೆ ಮಾಡಲಿದೆ.
ಒಂದು ತಿಂಗಳಿಂದ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ರೆಬೆಲ್ಸ್ ಟೀಂ ಮಾಹಿತಿ ಕಲೆ ಹಾಕುತ್ತಿದೆ. ಕೆಲವರು ಕೋಲ್ಕತ್ತಾ ಆಧಾರ್ ಕಾರ್ಡ್ ಪಡೆದು ವಾಸ್ತವ್ಯ ಮಾಡುತ್ತಿದ್ದು, ಇನ್ನೂ ಕೆಲವರು ಕೇರಳದ ವೋಟರ್ ಐಡಿ ಪಡೆದು ಬೆಂಗಳೂರಲ್ಲಿ ವಾಸ್ತವ್ಯ ಹೂಡಿದ್ದಾರೆ.
ಇದನ್ನೂ ಓದಿ: 180ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ, ಪಾಕ್ ವಲಸಿಗರ ಬಂಧನ, ಗಡಿಪಾರಿಗೆ ವಿಶೇಷ ಕಾರ್ಯಪಡೆ: ಪರಮೇಶ್ವರ್
ಇನ್ನು ಏಜೆಂಟ್ಗಳು ಬಾರ್ಡರ್ ಕ್ರಾಸ್ ಮಾಡಿ ವಲಸಿಗರನ್ನು ಕಳುಹಿಸಿದ್ದಾರೆ. ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ವಿಳಾಸವೇ ಬೇರೆ ಬೇರೆ ಆಗಿದ್ದು, ಬಾಂಗ್ಲಾಗೆ ಕರೆ ಹಾಗೂ ಹಣ ಕಳುಹಿಸಿರುವ ದಾಖಲೆಗಳು ಸಹ ಪತ್ತೆ ಆಗಿವೆ. ಅಧಿಕಾರಿಗಳು ಸಹಾಯ ಮಾಡುತ್ತಾರೆ ಎಂದು ವಲಸಿಗರು ಮಾಹಿತಿ ನೀಡಿದ್ದಾರೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಿಷ್ಟು
ಈ ಬಗ್ಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿದ್ದು, ಕ್ಷೇತ್ರದ ಮುಖಂಡರ ಐದು ತಂಡಗಳು ವಿವಿಧ ಕಡೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. 2013ರಲ್ಲಿ ತೂಬರಹಳ್ಳಿ ಕಸ ಸುಡುತ್ತಿದ್ದರು. ಅಕ್ರಮವಾಗಿ ಬಾಂಗ್ಲಾದೇಶದಿಂದ ಬಂದಿರುವ ಜನರನ್ನು ಸರ್ಕಾರ, ಸ್ಥಳೀಯರ ಸಹಾಯದಿಂದ ಖಾಲಿ ಮಾಡಿಸಿದ್ದೆವು. ಆದರೆ ಈಗ ಮಹದೇವಪುರ ಸೇರಿ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರು ಬಂದಿದ್ದಾರೆ ಎಂದಿದ್ದಾರೆ.
ಕಳೆದು ಒಂದು ತಿಂಗಳಿನಿಂದ ಮಹದೇವಪುರ ಕ್ಷೇತ್ರದಿಂದ ಈ ಅಭಿಯಾನ ಶುರು ಮಾಡಿದ್ದೇವೆ. ಪೊಲೀಸ್ ಇಲಾಖೆಗೆ ಏಕೆ ಗೊತ್ತಾಗಿಲ್ಲ? ಬಾಗಲೂರು, ಹೊಸೂರು ಬಂಡೆ, ಕಾಡು ಅಗ್ರಹಾರ, ಬಿದರಹಳ್ಳಿ, ಮಂಡೂರು, ಕಾಡುಗೋಡಿ, ಕನ್ನಮಂಗಲ, ಸೀಗೇಹಳ್ಳಿ, ಸಿದ್ದಾರ್ಥ ಲೇಔಟ್, ಪಣತ್ತೂರ್, ಪಟ್ಟಣೂರು ಅಗ್ರಹಾರದಲ್ಲಿ ಅಕ್ರಮ ವಾಸಿಗಳಿದ್ದಾರೆ. ನಾವು ಹೋಗುತ್ತೇವೆ ಅಂತ ಮನೆಗಳನ್ನ ಖಾಲಿ ಮಾಡಿ ಹೋಗಿರುವ ಶಂಕೆ ಇದೆ ಎಂದು ಹೇಳಿದ್ದಾರೆ.
ವಲಸಿಗ ಚೆನೈನಲ್ಲಿ ನೆಲಸಿದ್ದ ವ್ಯಕ್ತಿ ಚಿಂದಿ ಆಯುವುದಕ್ಕೆ ಬರುತ್ತಿದ್ದ. ಈಗ ದೊಡ್ಡ ಬಂಗಲೆಯನ್ನೇ ಕಟ್ಟಿಸಿದ್ದಾನೆ ಅಂತ ಪತ್ರಿಯೊಂದರ ವರದಿ ನೋಡಿದ್ದೇನೆ. ತಮಿಳುನಾಡಿನ ಪಿಎಸ್ಎ ಮಗಳನ್ನ ಆ ವ್ಯಕ್ತಿ ವಿವಾಹ ಆಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕರ್ನಾಟಕ ಸರ್ಕಾರ ಸಾಫ್ಟ್ ಆಗಿದೆ. ಯಾವುದೋ ಒತ್ತಡಕ್ಕೆ, ಬೇರೆ ಕಾರಣಕ್ಕೆ ಇಂತವರಿಗೆ ಅವಕಾಶ ಕೊಡಬಾರದು, ಒಂದು ವೇಳೆ ಅವಕಾಶ ಕೊಟ್ಟರೆ ಕರ್ನಾಟಕ ಸಹ ವೆಸ್ಟ್ ಬಂಗಾಳ ಆಗುತ್ತೆ ಎಂದಿದ್ದಾರೆ.
ನೆರೆ ದೇಶದಲ್ಲಿರುವ ಮುಸ್ಲಿಮರು ಭಾರತಕ್ಕೆ ಬಂದರೆ ನಾವೆಲ್ಲಿಗೆ ಹೋಗ್ಬೇಕು: ಪ್ರತಾಪ್ ಸಿಂಹ
ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದು, ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಜುಲೈ 28ರಂದು ದೆಹಲಿಗೆ ತೆರಳಿ ಕೇಂದ್ರದ ನಾಯಕರಿಗೆ ವರದಿ ಸಲ್ಲಿಸುತ್ತೇವೆ. ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಯಾವುದೇ ಹೋರಾಟ ಕೈಗೆತ್ತಿಕೊಂಡರೂ ತಾರ್ಕಿಕ ಅಂತ್ಯ ಕಾಣಿಸ್ತೇವೆ. ರೋಹಿಂಗ್ಯಾ ಮತ್ತು ಪಾಕಿಸ್ತಾನ ಮುಸ್ಲಿಮರು ಬರಲಿ ಅನ್ನೋದು ಕಾಂಗ್ರೆಸ್ ಮನಸ್ಥಿತಿಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮನೆಗಳ ಮೇಲೆ NIA ದಾಳಿ, 8 ಮಂದಿ ವಶಕ್ಕೆ
ಬಾಂಗ್ಲಾ, ಪಾಕ್ನಿಂದ ಹಿಂದೂಗಳನ್ನು ಓಡಿಸಿ ಈಗ ಇವರು ಬಂದಿದ್ದಾರೆ. ಇಂಥವರು ನಮ್ಮ ದೇಶ, ರಾಜ್ಯದಲ್ಲಿ ಇರಬಾರದು. ನೆರೆ ದೇಶದಲ್ಲಿರುವ ಮುಸ್ಲಿಮರು ಭಾರತಕ್ಕೆ ಬಂದರೆ ನಾವೆಲ್ಲಿಗೆ ಹೋಗ್ಬೇಕು? ವಿಶ್ವದ 57 ಮುಸ್ಲಿಂ ದೇಶಗಳು ಯಾಕೆ ವಲಸಿಗರಿಗೆ ಆಶ್ರಯ ನೀಡುತ್ತಿಲ್ಲ? ವಲಸಿಗ ಮುಸ್ಲಿಮರಿಗೆ ಭಾರತವೇ ಯಾಕೆ ಆಶ್ರಯ ನೀಡಬೇಕು. ವಲಸಿಗ ಮುಸ್ಲಿಮರು ಭಾರತದಲ್ಲಿ ನೆಲೆಸಿದರೆ ನಮ್ಮ ಜಾಗ ಕಬಳಿಸುತ್ತಾರೆ. ಮುಸ್ಲಿಮರು ಪುರುಸೊತ್ತಿಲ್ಲದೆ ಜನೋತ್ಪಾದನೆ ಮಾಡ್ತಾರೆ. ಹಿಂದೂಗಳಿಗೆ ಇರುವುದೊಂದೇ ದೇಶ, ನಮಗೆ ಯಾರೂ ಆಶ್ರಯ ಕೊಡಲ್ಲ. ಭಾರತವನ್ನು ಭಾರತವಾಗಿಯೇ ಉಳಿಸಿಕೊಳ್ಳಬೇಕು ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







