ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ನ ಅವ್ಯವಸ್ಥೆಯಿಂದ ವ್ಯಕ್ತಿ ಸಾವು
ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ನಲ್ಲಿ ಆಕ್ಸಿಜನ್ ವ್ಯವಸ್ಥೆ ಇಲ್ಲದಿರುವುದರಿಂದ ಉಸಿರಾಟದ ತೊಂದರೆ ಇರುವ ರೋಗಿ ಸಾವನ್ನಪ್ಪಿದ್ದಾನೆ.
ಚಾಮರಾಜನಗರ: ಬಳ್ಳಾರಿಯ (Bellary) ವಿಮ್ಸ್ ಆಸ್ಪತ್ರೆಯಲ್ಲಿ ಉಂಟಾದ ಘಟನೆ ಮಾಸುವ ಮುನ್ನವೇ ಚಾಮರಾಜನಗರದಲ್ಲಿ (Chamrajnagar) ಮೊತ್ತೊಂದು ಅವಘಡ ಸಂಭವಿಸಿದೆ. ಸರ್ಕಾರಿ ಆಸ್ಪತ್ರೆಯ (Government Hospital) ಅವ್ಯವಸ್ಥೆಗೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೈಸೂರಿನ ಅನಿಲ್ ಕುಮಾರ್ ಮೃತ ದುರ್ದೈವಿ. ಅನಿಲ್ ಕುಮಾರ್, ಪತ್ನಿಯೊಂದಿಗೆ ಗುಂಡ್ಲುಪೇಟೆ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿದ್ದನು. ದೇವರ ದರ್ಶನ ಪಡೆದು ಬೆಟ್ಟದಿಂದ ವಾಪಾಸ್ ಬರುವಾಗ ಉಸಿರಾಟದ ತೊಂದರೆಯಿಂದ ಬಳಲಿದ್ದಾನೆ.
ಕೂಡಲೇ ಆಂಬುಲೆನ್ಸ್ಗೆ ಕರೆ ಮಾಡಿದ್ದು, ಆಂಬುಲೆನ್ಸ್ನಲ್ಲಿ ಆಕ್ಸಿಜನ್, ವೆಂಟಿಲೇಟರ್ ಸಹಾಯವಿಲ್ಲದೆ ಗುಂಡ್ಲುಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ದುರದೃಷ್ಟಕ್ಕೆ ಆಸ್ಪತ್ರೆಯಲ್ಲಿ ಅನಿಲ್ ಸಾವನ್ನಪ್ಪಿದ್ದಾನೆ. ಆಂಬುಲೆನ್ಸ್ನಲ್ಲಿ ಆಕ್ಸಿಜನ್, ವೆಂಟಿಲೇಟರ್ ಇಲ್ಲದಿರುವುದೇ ಅನಿಲ್ನ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಅನಿಲ್ ಸಾವಿನಿಂದ ಪತ್ನಿ ಆಘಾತಕ್ಕೊಳಗಾಗಿದ್ದು, ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ