AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡಂಚಿನ ಸೋಲಿಗ, ಬುಡಕಟ್ಟು ಜನಾಂಗದ ಡ್ರಾಪ್ ಔಟ್ ವಿದ್ಯಾರ್ಥಿಗಳಿಗಾಗಿ ಕೈಯಲ್ಲಿ ಪಠ್ಯ ಪುಸ್ತಕ ಹಿಡಿದ ಶಿಕ್ಷಕ ವರ್ಗ

SSLC ಡ್ರಾಪ್ ಔಟ್ ಆದ 30 ಮಂದಿ ಬುಡಕಟ್ಟು ವಿದ್ಯಾರ್ಥಿಗಳನ್ನು ದತ್ತು ಪಡೆದು ವಿಶೇಷ ತರಬೇತಿ ನೀಡುತ್ತಿರುವ ಚಾಮರಾಜನಗರ ಜಿಲ್ಲಾಡಳಿತ. ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಪಾಠ ಹೇಳಿ ಕೊಡಲು ಮುಂದಾದ ಶಿಕ್ಷಕರು.

ಕಾಡಂಚಿನ ಸೋಲಿಗ, ಬುಡಕಟ್ಟು ಜನಾಂಗದ ಡ್ರಾಪ್ ಔಟ್ ವಿದ್ಯಾರ್ಥಿಗಳಿಗಾಗಿ ಕೈಯಲ್ಲಿ ಪಠ್ಯ ಪುಸ್ತಕ ಹಿಡಿದ ಶಿಕ್ಷಕ ವರ್ಗ
ಕಾಡಂಚಿನ ವಿದ್ಯಾರ್ಥಿಗಳಿಗಾಗಿ ಕೈಯಲ್ಲಿ ಪಠ್ಯಪುಸ್ತಕ ಹಿಡಿದ ಶಿಕ್ಷಕರು
ಸೂರಜ್ ಪ್ರಸಾದ್ ಎಸ್.ಎನ್
| Updated By: ಸಾಧು ಶ್ರೀನಾಥ್​|

Updated on: Dec 07, 2023 | 4:53 PM

Share

ಚಾಮರಾಜನಗರ ಜಿಲ್ಲಾಡಳಿತ ನೂತನ ಪ್ರಯತ್ನಕ್ಕೆ ಮುಂದಾಗಿದೆ. 10ನೇ ತರಗತಿ (sslc) ಡ್ರಾಪ್ ಔಟ್ ಆದ ಬುಡಕಟ್ಟು ಜನಾಂಗದ (Soliga, tribal) ವಿದ್ಯಾರ್ಥಿಗಳಿಗೆ ದತ್ತು ಪಡೆದ ಜಿಲ್ಲಾಡಳಿತ ಉಚಿತ ವಸತಿ ಹಾಗೂ ತರಬೇತಿ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕೈಯಲ್ಲಿ ಪಠ್ಯ ಪುಸ್ತಕ ಹಿಡಿದು ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳು.. ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಪಾಠ ಹೇಳಿ ಕೊಡುತ್ತಿರುವ ಶಿಕ್ಷಕರು. ಶಿಕ್ಷಕರು ಯಾವ ರೀತಿ ತರಬೇತಿ ನೀಡುತ್ತಿದ್ದಾರೆಂದು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು. ಈ ಎಲ್ಲಾ ವಿದ್ಯಮಾನಗಳು ಕಣ್ಣಿಗೆ ರಾಚಿದ್ದು ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ (haradanahalli in chamrajnagar taluk).

ಹೌದು ಈ ರೀತಿ ಕೈ ಪಠ್ಯ ಹಿಡಿದು ಶಿಕ್ಷಕರು ಹೇಳಿ ಕೊಡುತ್ತಿರುವ ಪಾಠವನ್ನ ಕೇಳುತ್ತಿರುವ ಈ ವಿದ್ಯಾರ್ಥಿಗಳು ಮತ್ಯಾರು ಅಲ್ಲಾ ಕಾಡಂಚಿನ ಪ್ರದೇಶದಲ್ಲಿ ವಾಸವಿರುವ ಸೋಲಿಗ ಹಾಗೂ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು. ವ್ಯಾಸಾಂಗ ಮಾಡಲು ಹಣಕಾಸಿನ ಸಮಸ್ಯೆಯಿಂದ 10ನೇ ತರಗತಿಯನ್ನ ಬಿಟ್ಟು ಕೂಲಿ ನಾಲಿ ಮಾಡುತ್ತಿದ್ದ 30 ವಿದ್ಯಾರ್ಥಿಗಳನ್ನ ಜಿಲ್ಲಾಡಳಿತ ಗುರುತಿಸಿದ್ದು ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳನ್ನ ಆಯ್ದು ಅಂತಹವರಿಗೆ ಜಿಲ್ಲಾಡಳಿತ ವತಿಯಿಂದ ಉಚಿತ ವಸತಿ ಹಾಗೂ ತರಬೇತಿ ನೀಡಲಾಗುತ್ತಿದೆ.

ಚಾಮರಾಜನಗರ ಜಿಲ್ಲೆ ಶೇಕಡ 52 ರಷ್ಟು ಅರಣ್ಯ ಭೂಮಿಯನ್ನ ಹೊಂದಿದ್ದು 42 ರಷ್ಟು ಶೇಕಡ ಭೂ ಪ್ರದೇಶವನ್ನ ಹೊಂದಿದೆ. ಇದರಲ್ಲಿ ಹನೂರು ಗುಂಡ್ಲುಪೇಟೆ ಭಾಗದಲ್ಲಿ ಅತಿ ಹೆಚ್ಚಾಗಿ ಸೋಲಿಗ, ಬುಡಕಟ್ಟು, ಕಾಡು ಕುರುಬರ ಹಾಗೂ ಬೆಟ್ಟ ಕುರುಬರು ವಾಸವಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಈ ಜನಾಂಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ.

Also Read: ಉಡುಪಿ ಜಿಲ್ಲೆಯಲ್ಲಿ ಮಳೆ ಕಡಿಮೆ, ಬರಿದಾಗುತ್ತಿದೆ ಜೀವ ನದಿ ವಾರಾಹಿ, ಮುಂದಿನ ದಿನಗಳು ಹೇಗಪ್ಪಾ ಎಂಬುದು ಸ್ಥಳೀಯರ ಆತಂಕದ ಪ್ರಶ್ನೆ

ಇಂತಹ ಜನಾಂಗದ 10ನೇ ತರಗತಿ ಅನುತ್ತೀರ್ಣಗೊಂಡ ಹಾಗೂ 10ನೇ ತರಗತಿ ತ್ಯಜಿಸಿದ 110 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಅಂತ ವಿದ್ಯಾರ್ಥಿಗಳನ್ನ ಜಿಲ್ಲಾಡಳಿತ ಗುರುತಿಸಿದೆ. ಶೈಕ್ಷಣಿಕವಾಗಿ ಹಿಂದುಳಿದ ಇಂತಹ ವಿದ್ಯಾರ್ಥಿಗಳನ್ನ ಗುರುತಿಸಿರುವ ಜಿಲ್ಲಾಡಳಿತ ಮೊದಲ ಹಂತದಲ್ಲಿ 30 ವಿದ್ಯಾರ್ಥಿಗಳನ್ನ ದತ್ತು ಪಡೆದು ಅಂತಹ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ಶಿಕ್ಷಣ ನೀಡುವ ಮೂಲಕ 10ನೇ ತರಗತಿಯ ತರಬೆತಿ ನೀಡಲಾಗುತ್ತಿದೆ.

ಸದ್ಯ ಜಿಲ್ಲಾಡಳಿತದ ಕಾರ್ಯ ವೈಖರಿ ಸಾಕಷ್ಟು ಜನಮನ್ನಣೆಗೆ ಪಾತ್ರವಾಗಿದೆ. ಬುಡಕಟ್ಟು ಸೋಲಿಗ ಮಕ್ಕಳಿಗೆ ಶೈಕ್ಷಣಿಕವಾಗಿ ಬಲ ತುಂಬಲು ಮುಂದಾಗಿದೆ. ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸಕ್ಕೆ ಫುಲ್ ಸ್ಟಾಪ್ ಇಟ್ಟ ಇಂತ ಮಕ್ಕಳ ಭವಿಷ್ಯ ಉಜ್ವಲವಾಗಲು ಜಿಲ್ಲಾಡಳಿತ ಮುಂದಾಗಿದ್ದು ಶಿಕ್ಷಣದಿಂದ ವಂಚಿತವಾದ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಹೊಸ ಆಶಾಕಿರಣವಾಗಿದ್ದು, ಜನ ಮನ್ನಣೆಗೆ ಪಾತ್ರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್