ಚಿಕ್ಕಬಳ್ಳಾಪುರ: ಬೇರೆ ಬೇರೆಯಾಗಿದ್ದ ಜೋಡಿಗಳನ್ನು ಮತ್ತೆ ಒಂದುಗೂಡಿಸಿದ ನ್ಯಾಯಾಧೀಶರು
ವಿಚ್ಛೇದನ ಹಾಗೂ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಸಾಮರಸ್ಯ ಅನೋನ್ಯತೆ ಹೊಂದಾಣಿಕೆಯ ಕೊರತೆಯಿಂದ ಪರಸ್ಪರ ದೂರವಾಗಿದ್ದ ಜೋಡಿಗಳು ಲೋಕ ಅದಾಲತ್ನಲ್ಲಿ ಒಂದಾಗಿದ್ದಾರೆ.
ಚಿಕ್ಕಬಳ್ಳಾಪುರ: ವಿಚ್ಛೇದನ ಹಾಗೂ ಜೀವನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಸಾಮರಸ್ಯ ಅನೋನ್ಯತೆ ಹೊಂದಾಣಿಕೆಯ ಕೊರತೆಯಿಂದ ಪರಸ್ಪರ ದೂರವಾಗಿದ್ದ ಜೋಡಿಗಳು ಲೋಕ ಅದಾಲತ್ (Lok Adalat)ನಲ್ಲಿ ಒಂದಾಗಿದ್ದಾರೆ. ವಿಶೇಷ ಕೌಟುಂಬಿಕ ನ್ಯಾಯಾಲಯದಲ್ಲಿ ಚಿಕ್ಕಬಳ್ಳಾಪುರದ ಆನಂದಮೂರ್ತಿ ಹಾಗೂ ಮದುಗಿರಿ ಮೂಲದ ಸುಮಾ ಮದುವೆಯಾಗಿ 7 ವರ್ಷಗಳಾಗಿದ್ದು 5 ವರ್ಷದ ಮಗು ಇದೆ. ಆದರೆ ಪರಸ್ಪರ ಮನಸ್ತಾಪದಿಂದ ಒಬ್ಬರಿಗೊಬ್ಬರು ದೂರವಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಲೋಕಅದಾಲತ್ನಲ್ಲಿ ವಿಶೇಷ ಕೌಟುಂಬಿಕ ನ್ಯಾಯಾಲಯದ ನ್ಯಾಯಾದೀಶರಾಧ ವಿವೇಕಾನಂದ ಪಂಡೀತ್ ಅವರು ತಿಳಿ ಹೇಳಿ ಮತ್ತೆ ಜೋಡಿಯನ್ನು ಒಂದು ಮಾಡಿದರು. ಇದೇ ವೇಳೆ ಪ್ರದಾನ ಜಿಲ್ಲಾ ಸತ್ರ ನ್ಯಾಯಾದೀಶರಾದ ರಾಜಶೇಖರ್ ಅವರು ಸುಖ ಸಂಸಾರಕ್ಕೆ ಮಾರ್ಗದರ್ಶನ ಮಾಡಿದರು.
ಇನ್ನೂ, ಮಹಮ್ಮದ್ ನವಾಜ್ ಷರೀಪ್ ಹಾಗೂ ಉಷ್ಮಾ ತಾಜ್ ಮದುವೆಯಾಗಿ 5 ವರ್ಷಗಳು ಆಗಿದ್ದು, 3 ವರ್ಷದ ಮಗು ಇದೆ. ಆದರೂ ಕೌಟುಂಬಿಕ ಕಲಹದಿಂದ ಪರಸ್ಪರ ದೂರವಾಗಿದ್ದರು. ಹೀಗಾಗಿ ಉಷ್ಮಾ ತಾಜ್ ಜೀವನಾಂಶ ಕೋರಿ ಚಿಕ್ಕಬಳ್ಳಾಪುರದ ವಿಶೇಷ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಲೋಕ ಅದಾಲತ್ನಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿದ ನ್ಯಾಯಾದೀಶರು ಇಬ್ಬರ ಮನವೋಲಿಸಿ ಮತ್ತೆ ಒಂದುಗೂಡಿಸಿದ್ದಾರೆ.
ರಜೆ ದಿನವಾದರೂ ಚಿಕ್ಕಬಳ್ಳಾಪುರದ ನ್ಯಾಯಾದೀಶರು ರಜೆ ತೆಗೆದುಕೊಳ್ಳದೆ ರಜೆಯಲ್ಲೂ ಲೋಕ ಅದಾಲತ್ ನಡೆಸಿದರು. ನ್ಯಾಯಾಲಯದಲ್ಲಿ ಕಳೆದ 16 ವರ್ಷಗಳಿಂದ ಬಾಕಿ ಇದ್ದ ಕೆಲವು ಪ್ರಕರಣಗಳು ಸೇರಿದಂತೆ ಆಸ್ತಿ ವಿಭಾಗ ವಿಚಾರದಲ್ಲಿ ಅಣ್ಣ ತಮ್ಮಂದಿರ ನಡುವೆ ಬಾಕಿ ಇದ್ದ ಪ್ರಕರಣವನ್ನು ಲೋಕ ಅದಾಲತ್ನಲ್ಲಿ ಸಂದಾನದ ಮೂಲಕ ಬಗೆಯರಿಸುವಲ್ಲಿ ನ್ಯಾಯಾದೀಶರುಗಳು ಯಶಸ್ವಿಯಾದರು. ಇದೇ ವೇಳೆ ಮತ್ತೆ ಒಂದಾದ ದೂವಾಗಿದ್ದ ಜೋಡಿಗಳು ನ್ಯಾಯಾಲಯದಲ್ಲೇ ಹಾರ ಬದಲಾಯಿಸಿಕೊಂಡು ಹರ್ಷ ವ್ಯಕ್ತಪಡಿಸಿದರು.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 am, Mon, 14 November 22