Police love story: ವಾಟ್ಸಾಪ್ನಲ್ಲಿ ಪ್ರೇಮಾಂಕುರ! ಆದರೂ ಕಾನ್ಸ್ಟೇಬಲ್-ಪ್ರಿಯತಮೆ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆ ಸೇರಿದ ಪ್ರೇಮಿಗಳು, ಮುಂದೇನು?
Sidlaghatta Police Constable :ಎಲ್ಲಾ ಅಂದುಕೊಂಡಂತೆ ಆಗಿದ್ರೆ ಅಗಸ್ಟ್ 7 ರಂದು ಬುಧವಾರ ಆವತಿಯ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಮದುವೆ ನಡೆಯಬೇಕಿತ್ತು. ಆದ್ರೆ ಶಿಡ್ಲಘಟ್ಟದ ಪೊಲೀಸ್ ಪೇದೆ ತಿಮ್ಮಣ್ಣ ಮೇಲ್ಜಾತಿ ಎನ್ನುವ ಕಾರಣ ಅವರ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿದೆಯೆಂದು ನೆಪ ಮಾಡಿಕೊಂಡು ಪ್ರಿಯತಮೆ ಶಿರೀಷಾಗೆ ಮೋಸ ಮಾಡಲು ಯತ್ನಿಸಿದ್ದಾನಂತೆ. ಇದರಿಂದ ನೊಂದ ಶಿರೀಷಾ ನಿನ್ನೆ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇನ್ನು ಶಿರೀಷಾ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ತಾನೂ ಸಹಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚಿಕ್ಕಬಳ್ಳಾಪುರ, ಆಗಸ್ಟ್ 27: ಆತ ಪೊಲೀಸ್ ಕಾನ್ಸ್ಟೇಬಲ್, ಆ ಯುವತಿ ಬಿ.ಎ ಓದುತ್ತಿರುವ ವಿದ್ಯಾರ್ಥಿನಿ – ಇಬ್ಬರೂ ವಯಸ್ಕರು. ಮುಕ್ತ ವಿವಿ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮೂಲಕ ಪರಿಚಯವಾದ ಅವರಿಬ್ಬರ ಮಧ್ಯೆ ಪ್ರೀತಿ, ಪ್ರೇಮ, ಪ್ರಣಯ ಅಂತೆಲ್ಲಾ ಆಗಿ ಮದುವೆವರೆಗೂ ಸಾಗಿ ಬಂದಿದೆ. ಜೋಡಿ ಇನ್ನೇನು ಮದುವೆ ಮಂಟಪಕ್ಕೆ ಹೋಗಿ ಮದುವೆ ಮಾಡಿಕೊಳ್ಳಬೇಕಿತ್ತು. ಅಷ್ಟರಲ್ಲಿ ಯೂಟರ್ನ್ ಹೊಡೆದ ಪೊಲೀಸ್ ಕಾನ್ಸ್ಟೇಬಲ್ ಮದುವೆ ಬೇಡಾ ಅಂದುಬಿಟ್ಟಿದ್ದಾನೆ. ಇದರಿಂದ ನೊಂದ ಆತನ ಪ್ರಿಯತಮೆ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಕ್ಕೆ ಬೆದರಿದ ಪೊಲೀಸ್ ಕಾನ್ಸ್ಟೇಬಲ್ ಮಹಾಶಯ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಆತನ ಹೆಸರು ತಿಮ್ಮಣ್ಣ ರಾಮಪ್ಪ ಬುಸರರೆಡ್ಡಿ, ವಯಸ್ಸು 28 ವರ್ಷ, ಮೂಲತಃ ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲ್ಲೂಕು, ಸೊಣ್ಣ ಗ್ರಾಮದವನು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈಕೆಯ ಹೆಸರು ಶಿರೀಷಾ, ವಯಸ್ಸು 23 ವರ್ಷ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕು, ಸೋಮೇನಹಳ್ಳಿ ನಿವಾಸಿ. ಇಬ್ಬರ ಮಧ್ಯೆ ಆಗಸ್ಟ್ 7 ರಂದು ದೇವಸ್ಥಾನವೊಂದರಲ್ಲಿ ಅದ್ದೂರಿ ಮದುವೆ ನಡೆಯಬೇಕಿತ್ತು. ಮದುವೆಯ ಸಿದ್ದತೆಗಳು ಆದ ಮೇಲೆ ವರ ಪೊಲೀಸ್ ಕಾನ್ಸ್ಟೇಬಲ್ ಯೂಟರ್ನ್ ಹೊಡೆದು ಮದುವೆಗೆ ನಿರಾಕರಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ .
ವಾಟ್ಸಾಪ್ನಲ್ಲಿ ತಿಮ್ಮಣ್ಣ-ಶಿರೀಷಾ ಪ್ರೇಮಾಂಕುರ:
ಒಂದು ವರ್ಷದ ಹಿಂದೆ ಮುಕ್ತ ವಿವಿ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮೂಲಕ ಪರಿಚಯವಾದ ತಿಮ್ಮಣ್ಣ ಹಾಗೂ ಶಿರೀಷಾ ಪರಿಚಯ ಮದುವೆವರೆಗೂ ಬಂದಿದೆ. ಕಳೆದ ಒಂದು ವರ್ಷದಿಂದ ಇಬ್ಬರ ಮಧ್ಯೆ ಪ್ರೀತಿ, ಪ್ರೇಮ, ಪ್ರಣಯ ಏರ್ಪಟ್ಟಿದೆ. ತಿಮ್ಮಣ್ಣ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಪ್ರೀಯತಮೆಯನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಮಾಜಿ ಸಿಎಂ ಬೊಮ್ಮಾಯಿ ತವರಿನಲ್ಲಿ ಚಮತ್ಕಾರ! ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟ ಅತ್ತೆ, ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟರು!
ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು ಏಕೆ:
ಎಲ್ಲಾ ಅಂದುಕೊಂಡಂತೆ ಆಗಿದ್ರೆ ಅಗಸ್ಟ್ 7 ರಂದು ಬುಧವಾರ ಆವತಿಯ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಮದುವೆ ನಡೆಯಬೇಕಿತ್ತು. ಆದ್ರೆ ತಿಮ್ಮಣ್ಣ ಮೇಲ್ಜಾತಿ ಎನ್ನುವ ಕಾರಣ ಅವರ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿದೆಯೆಂದು ನೆಪ ಮಾಡಿಕೊಂಡು ಪ್ರಿಯತಮೆ ಶಿರೀಷಾಗೆ ಮೋಸ ಮಾಡಲು ಯತ್ನಿಸಿದ್ದಾನಂತೆ. ಇದರಿಂದ ನೊಂದ ಶಿರೀಷಾ ನಿನ್ನೆ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇನ್ನು ಶಿರೀಷಾ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ತಾನೂ ಸಹಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಉನ್ನತ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ದೌಡು, ಜೋಡಿಗೆ ಸಾಂತ್ವನ:
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸಿ, ಎಎಸ್ಪಿ ಆರ್.ಐ. ಖಾಸೀಂ, ಡಿ.ವೈ.ಎಸ್ಪಿ ಮುರಳಿಧರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಇಬ್ಬರಿಗೂ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಗೃಹ ಲಕ್ಷ್ಮಿ ಹಣದಿಂದ ಅಕ್ಷಯ ತೃತೀಯದಂದು ಬಂಗಾರ ಕೊಳ್ಳಲು ಮುಗಿಬಿದ್ದ ಮಹಿಳೆಯರು
ಕುತೂಹಲ ಮೂಡಿಸಿರುವ ಪ್ರೇಮ ಪ್ರಕರಣ:
ಪ್ರೀತಿ, ಪ್ರೇಮ, ಪ್ರಣಯ, ಶೋಭನ ಎಲ್ಲಾ ಆದ ಮೇಲೆ ಶಿಡ್ಲಘಟ್ಟದ ಕಾನ್ಸ್ಟೇಬಲಪ್ಪ ತಿಮ್ಮಣ್ಣಗೆ ಜಾತಿ ನೆನಪಾಗಿದೆ. ಮೊದಲು ಪ್ರೀತಿ ಪ್ರೇಮ ಅಂತೆಲ್ಲಾ ಮಾಡಿದ ಸದರಿ ಪೊಲೀಸ್ ಕಾನ್ಸ್ಟೇಬಲ್, ಕಾಲಾಂತರದಲ್ಲಿ ಸ್ವತಃ ತಾನು ಕಾನೂನು ರಕ್ಷಕ ಎಂಬುದನ್ನು ಮರೆತಿದ್ದಾನೆ. ಒಲಿದು ನಲಿದು ಬಂದ ಪ್ರಿಯತಮೆಗೆ ಮೋಸ ಮಾಡಲು ಯತ್ನಿಸಿದ್ದಾನೆ. ಇಬ್ಬರ ಪ್ರೇಮ ಪ್ರಕರಣದಲ್ಲಿ ರಾಜಿ ನ್ಯಾಯ ಪಂಚಾಯತಿ ಹಣಕಾಸು ವ್ಯವಹಾರವೂ ನಡೆದಿದೆ ಎನ್ನಲಾಗಿದೆ. ಆದ್ರೆ ಶಿರೀಷಾ ಮಾತ್ರ ಯಾವುದಕ್ಕೂ ಜಗ್ಗಿಲ್ಲ. ಕೊಟ್ಟ ಮಾತಿನಂತೆ, ನಂಬಿಕೆಯಂತೆ ಮದುವೆ ಮಾಡಿಕೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಆದ್ರೆ ಪೊಲೀಸ್ ಅಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೊಡಬೇಕು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:12 pm, Tue, 27 August 24