ಗಂಡನಿಗೆ ಡಿವೋರ್ಸ್ ಕೊಡಿಸಿ ವಿವಾಹಿತ ಮಹಿಳೆಗೆ ಬಾಳು ಕೊಟ್ಟ ಪ್ರಿಯತಮ, ಮಗು ಆಗುತ್ತಿದ್ದಂತೆಯೇ ಕೈಕೊಟ್ಟ!
ವಿವಾಹಿತಳ ಹಿಂದೆ ಬಿದ್ದ ಆಕೆಯ ಮಾಜಿ ಪ್ರಿಯತಮ. ಇದ್ದರೆ ನಿನ್ನ ಜೊತೆ, ಸತ್ತರೆ ನಿನ್ನ ಜೊತೆ ಎಂದು ಅಂದ ಚೆಂದದ ಮಾತುಗಳನ್ನ ಹೇಳಿ ಆಕೆಯ ಗಂಡನ ಜೊತೆಗೆ ಆಕೆಗೆ ಡೈವೊರ್ಸ್ ಕೊಡಿಸಿದ್ದಾನೆ. ನಂತರ ಆಕೆಯ ಜೊತೆ ಸಂಸಾರ ಕೂಡ ಮಾಡಿದ್ದಾನೆ. ಕೊನೆಗೆ ಹುಟ್ಟಿದ ಮಗು ಹೆಣ್ಣೆಂಬ ಕಾರಣ, ಈಗ ನೀನು ಬೇಡ ಮಗುನೂ ಬೇಡ ಎಂದು ಎಸ್ಕೇಪ್ ಆಗಿದ್ದಾನೆ. ಇದರಿಂದ ನ್ಯಾಯಕ್ಕಾಗಿ ಪ್ರೀಯತಮನ ಮನೆಯ ಮುಂದೆ ನೊಂದ ಮಹಿಳೆ ಧರಣಿ ಕುಳಿತಿದ್ದಾಳೆ.

ಚಿಕ್ಕಬಳ್ಳಾಪುರ, ಸೆ.06: ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ತಾಲೂಕಿನ ಪೆರೇಸಂದ್ರ ಗ್ರಾಮದ ರಹಮತ್ತುಲ್ಲ ಎನ್ನುವ ಯುವಕ, ಬಾಗೇಪಲ್ಲಿ ತಾಲೂಕಿನ ಚೆಂಡೂರು ಗ್ರಾಮದ ಯುವತಿಗೆ ಗಾಳ ಹಾಕಿ ಕಳೆದ ಹತ್ತು ವರ್ಷಗಳಿಂದ ಪ್ರೀತಿ-ಪ್ರೇಮ, ಪ್ರಣಯ, ಲಿವಿಂಗ್ ವಿತ್ ರಿಲೇಶನ್ ಎಂದು ಮಾಡಿದ್ದಾನೆ. ಕೊನೆಗೆ ಮದುವೆಗೆ ನಿರಾಕರಿಸಿದ ಕಾರಣ ಯುವತಿ ಬೇರೆ ಮದುವೆ ಮಾಡಿಕೊಂಡಿದ್ದಳು.
ಆದರೂ ಬಿಡದ ಪಾಪಿ ರಹಮತ್, ಆಕೆಗೆ ಆಕೆಯ ಗಂಡನ ಜೊತೆ ಡೈವೊರ್ಸ್ ಕೊಡಿಸಿದ್ದಾನೆ. ನಂತರ ಕಳೆದ 5 ವರ್ಷಗಳಿಂದ ಆಕೆಯ ಜೊತೆ ಸಂಸಾರ ಮಾಡಿದ್ದಾನೆ. ಆದ್ರೆ, ಈಗ ಹುಟ್ಟಿದ ಮಗು ಹೆಣ್ಣೆಂಬ ಕಾರಣ ನಂಬಿ ಬಂದವಳನ್ನು ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇನ್ನು ಮದುವೆಯಾದ ಗಂಡನನ್ನು ಬಿಟ್ಟು ಬೇರೊಬ್ಬನ ಜೊತೆ ಹೋದಳು ಎನ್ನುವ ಕಾರಣ ನೊಂದವಳ ಪರವಾಗಿ ಆಕೆಯ ತವರು ಮನೆಯವರು ಬರುತ್ತಿಲ್ಲ. ಸಹಾಯ ಸಹಕಾರ ಮಾಡುತ್ತಿಲ್ಲ.
ಇದನ್ನೂ ಓದಿ:ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ ಅರೆಸ್ಟ್, ಸಹೋದರ, ಪ್ರಿಯತಮನಿಗಾಗಿ ಹುಡುಕಾಟ
ಜೀವನ ಪೂರ್ತಿ ಜೊತೆಗೆ ಇರುತ್ತೇನೆ ಎಂದು ನಂಬಿಸಿದವ ಸಹ ಈಗ ಕೈಕೊಟ್ಟಿರುವ ಕಾರಣ, ನೊಂದ ವಿವಾಹಿತೆ ದಿಕ್ಕು ತೊಚದೆ ಪೆರೇಸಂದ್ರ ಪೊಲೀಸರ ಮೊರೆ ಹೋಗಿದ್ದು, ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ. ಇತ್ತ ನೊಂದ ಮಹಿಳೆ, ಯಾಕಾದರೂ ಪ್ರೀತಿಯ ಬಲೆಯಲ್ಲಿ ಬಿದ್ದೆ, ಅತ್ತ ಗಂಡನೂ ಇಲ್ಲ, ಇತ್ತ ಪ್ರೀಯತಮನೂ ಇಲ್ಲ. ಎಳೆ ಕಂದನನ್ನು ಹೊತ್ತು ಎತ್ತ ಸಾಗಲಿ ಎಂದು ಕಣ್ಣೀರಿಡುತ್ತಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Fri, 6 September 24




