ಸಿಕ್ಕಸಿಕ್ಕವರ ಮೇಲೆ ಕಾರು ಚಾಲನೆ, ಕಾರು ನಿಲ್ಲಿಸಲು ಜನರ ಹರಸಾಹಸ
ಚಿಕ್ಕಮಗಳೂರು: ಯುವಕ ಸಿಕ್ಕಸಿಕ್ಕವರ ಮೇಲೆ ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿರುವ ಘಟನೆ ಕೈಮರ ಬಳಿ ನಡೆದಿದೆ. ಅಪಘಾತದಲ್ಲಿ ಬಾಲಕನ ಕಾಲು ಮುರಿದಿದ್ದು, ಐದಾರು ವಾಹನಗಳು ಜಖಂ ಆಗಿವೆ. ಸರ್ಫರಾಜ್ ಎಂಬ ಯುವಕ ಕಾರು ಚಲಾಯಿಸುತ್ತಿದ್ದು ಈ ಎಲ್ಲಾ ಅಪಘಾತಕ್ಕೆ ಕಾರಣನಾಗಿದ್ದಾನೆ. ಕೊನೆಗೆ ಸ್ಥಳೀಯರೇ ರಸ್ತೆಯಲ್ಲಿ ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿ ಕಾರು ತಡೆದಿದ್ದಾರೆ. ನಂತರ ಆರೋಪಿ ಸರ್ಫರಾಜ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು: ಯುವಕ ಸಿಕ್ಕಸಿಕ್ಕವರ ಮೇಲೆ ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿರುವ ಘಟನೆ ಕೈಮರ ಬಳಿ ನಡೆದಿದೆ. ಅಪಘಾತದಲ್ಲಿ ಬಾಲಕನ ಕಾಲು ಮುರಿದಿದ್ದು, ಐದಾರು ವಾಹನಗಳು ಜಖಂ ಆಗಿವೆ. ಸರ್ಫರಾಜ್ ಎಂಬ ಯುವಕ ಕಾರು ಚಲಾಯಿಸುತ್ತಿದ್ದು ಈ ಎಲ್ಲಾ ಅಪಘಾತಕ್ಕೆ ಕಾರಣನಾಗಿದ್ದಾನೆ.
ಕೊನೆಗೆ ಸ್ಥಳೀಯರೇ ರಸ್ತೆಯಲ್ಲಿ ಟ್ರ್ಯಾಕ್ಟರ್ ಅಡ್ಡ ನಿಲ್ಲಿಸಿ ಕಾರು ತಡೆದಿದ್ದಾರೆ. ನಂತರ ಆರೋಪಿ ಸರ್ಫರಾಜ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 12:53 pm, Wed, 12 February 20