ಕಾಫಿನಾಡಿನಲ್ಲಿ ಬುರ್ಖಾ ಧರಿಸಿ ಬೈಕ್ನಲ್ಲಿ ಬಂದು ಹಾಲು ಕಳ್ಳತನ, ಕಿರಾತಕರ ಕೃತ್ಯ ಕಂಡು ಕಂಗಾಲಾದ ಅಂಗಡಿ ಮಾಲೀಕರು
ಬೈಕ್ನಲ್ಲಿ ಬುರ್ಖಾ ಧರಿಸಿಕೊಂಡು ಬಂದ ಕಳ್ಳರು ಹಾಲು ಕದ್ದು ಗುರತು ಸಿಗದಂತೆ ಪರಾರಿಯಾಗಿದ್ದಾರೆ. ಆದ್ರೆ ಬುರ್ಖಾ ಹಾಕಿದ್ದು ಮಹಿಳೆಯಾ? ಅಥವಾ ಪುರುಷರೇ ಬುರ್ಖಾ ಹಾಕಿ ಕಳ್ಳತನ ಮಾಡಿದ್ರಾ ಅನ್ನೋದು ಈಗ ಅಸ್ಪಷ್ಟವಾಗಿದೆ.
ಚಿಕ್ಕಮಗಳೂರು: ಬುರ್ಖಾ ಧರಿಸಿಕೊಂಡು ಬೈಕ್ನಲ್ಲಿ ಬಂದು ಹಾಲಿಗೆ ಕನ್ನ ಹಾಕಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ. ಅಂಗಡಿ ಮುಂಭಾಗದಲ್ಲಿದ್ದ ಕ್ರೇಟ್ನಿಂದ ಹಾಲನ್ನ ಎಗರಿಸಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಸಾಮಾನ್ಯವಾಗಿ ಹಾಲನ್ನ ಯಾರು ಕದಿಯುದಿಲ್ಲ ಅನ್ನೋ ಧೈರ್ಯದಿಂದ ಹೊರಗಡೆ ಇಡಲಾಗುತ್ತೆ. ಅಲ್ಲದೇ ಸಾರ್ವಜನಿಕ ಸ್ಥಳವಾಗಿರುವುದರಿಂದ ಯಾರೂ ಕೂಡ ಹಾಲಿಗೆ ಕನ್ನ ಹಾಕುವುದಿಲ್ಲ ಅನ್ನೋ ಧೈರ್ಯ ಅಂಗಡಿ ಮಾಲೀಕರದ್ದು. ಈ ವಿಶ್ವಾಸದಲ್ಲಿಯೇ ಹಾಲಿನ ಪಾಕೆಟ್ಗಳನ್ನ ಅಂಗಡಿ ಹೊರಗಡೆ ಕ್ರೇಟ್ನಲ್ಲಿ ಇಟ್ಟಿದ್ದರು. ಆದರೆ ಬೈಕ್ನಲ್ಲಿ ಬುರ್ಖಾ ಧರಿಸಿಕೊಂಡು ಬಂದ ಕಳ್ಳರು ಹಾಲು ಕದ್ದು ಗುರತು ಸಿಗದಂತೆ ಪರಾರಿಯಾಗಿದ್ದಾರೆ. ಆದ್ರೆ ಬುರ್ಖಾ ಹಾಕಿದ್ದು ಮಹಿಳೆಯಾ? ಅಥವಾ ಪುರುಷರೇ ಬುರ್ಖಾ ಹಾಕಿ ಕಳ್ಳತನ ಮಾಡಿದ್ರಾ ಅನ್ನೋದು ಈಗ ಅಸ್ಪಷ್ಟವಾಗಿದೆ. ಇದನ್ನೂ ಓದಿ: ಬೆಂಗಳೂರು ವಿವಿ ಸಂಘರ್ಷ: 28 ಕೋಟಿ ಬಿಡುಗಡೆಗೆ ವಿವಿ ಅಧಿಕಾರಿಗಳಿಗೆ ಕುಲಪತಿ ಒತ್ತಡ, ಮತ್ತೊಂದು ಆದೇಶ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಈ ಹಿಂದೆ ಅನೇಕ ಬಾರಿ ಹಾಲು ಕಳ್ಳತನ ಆಗ್ತಿತ್ತು, ಇದರಿಂದ ಅಂಗಡಿ ಮಾಲೀಕ ಭಾರೀ ನಷ್ಟ ಅನುಭವಿಸುತ್ತಿದ್ದರು. ಒಂದು ಲೀಟರ್ ಹಾಲು ಮಾರಿದ್ರೆ ಸಿಗೋದು ಎರಡು ರೂಪಾಯಿ ಲಾಭ, ಈ ಖದೀಮರು ಐದಾರು ಲೀಟರು ಎಗರಿಸಿದ್ರೆ ಅಂಗಡಿ ಮಾಲೀಕನ ಪಾಡೇನು? ಹೀಗಾಗಿಯೇ ಇತ್ತೀಚಿಗೆ ಸಿಸಿಟಿವಿ ಹಾಕಿಸಿದ್ರು, ಆ ಬಳಿಕ ಹಾಲಿನ ಕಳ್ಳತನಕ್ಕೆ ಕಡಿವಾಣ ಬಿದ್ದಿತ್ತು. ಸಿಸಿಟಿವಿ ಹಾಕಿಸಿದ್ದರಿಂದ ಎಲ್ಲವೂ ಸರಿಯಾಯ್ತು ಅಂತಾ ನಿಟ್ಟುಸಿರು ಬಿಡುವಾಗಲೇ ಖತರ್ನಾಕ್ ಕಳ್ಳರು ಬುರ್ಖಾ ಧರಿಸಿಕೊಂಡು ಬಂದು ಕಳ್ಳತನ ಮಾಡಿದ್ದಾರೆ. ಈ ಮೂಲಕ ನೀವು ಚಾಪೆ ಕೆಳಗೆ ನುಸುಳಿದ್ರೆ, ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಅಂತಾ ತೋರಿಸಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಬುರ್ಖಾ ಧರಿಸಬಾರದು ಅಂತಾ ವಿವಾದ ಸೃಷ್ಠಿಯಾಗಿರುವ ಬೆನ್ನಲ್ಲೇ ಈ ರೀತಿಯಾಗಿ ಬೈಕ್ ನಲ್ಲಿ ಬಂದು ಹಾಲಿಗೆ ಕನ್ನ ಹಾಕಿರುವುದು ಎಲ್ಲರನ್ನೂ ಅಚ್ಚರಿಗೀಡುಮಾಡಿದೆ. ಇದನ್ನೂ ಓದಿ: Moose Wala case ದೆಹಲಿ ಹೈಕೋರ್ಟ್ಗೆ ಸಲ್ಲಿಸಿದ ಮನವಿ ವಾಪಸ್ ಪಡೆದ ಬಿಷ್ಣೋಯ್, ಪಂಜಾಬ್ ಕೋರ್ಟ್ ಮೆಟ್ಟಿಲೇರಲು ನಿರ್ಧಾರ