ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ: ಆಹ್ವಾನ ಪತ್ರಿಕೆಯಲ್ಲಿ ಮುರುಘಾಶ್ರೀ ಹೆಸರು, ಭಾವಚಿತ್ರ ಕೈಬಿಟ್ಟ ಉತ್ಸವ ಸಮಿತಿ
ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿದ್ದು, ಈ ಭಾರಿಯ ಶರಣ ಸಂಸ್ಕೃತಿ ಉತ್ಸವವನ್ನು ಸರಳವಾಗಿ ಆಚರಿಸಲು ಉತ್ಸವ ಸಮಿತಿ ನಿರ್ಧರಿಸಿದೆ.
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ನ್ಯಾಯಾಂಗ ಬಂಧನದಲ್ಲಿದ್ದು, ಈ ಭಾರಿಯ ಶರಣ ಸಂಸ್ಕೃತಿ ಉತ್ಸವವನ್ನು ಸರಳವಾಗಿ ಆಚರಿಸಲು ಉತ್ಸವ ಸಮಿತಿ ನಿರ್ಧರಿಸಿದೆ. ಹಾಗೇ ಉತ್ಸವ ಸಮಿತಿ ಆಹ್ವಾನ ಪತ್ರಿಕೆಯಲ್ಲಿ ಮುರುಘಾಶ್ರೀ ಹೆಸರು ಕೈಬಿಟ್ಟಿದೆ. ಪ್ರತಿವರ್ಷ ದಸರಾ ಸಂದರ್ಭದಲ್ಲಿ ಮುರುಘಾಮಠದಲ್ಲಿ ಅದ್ಧೂರಿಯಾಗಿ ಶರಣ ಸಂಸ್ಕೃತಿ ಉತ್ಸವ ಆಚರಿಸಲಾಗುತ್ತಿತ್ತು. ಈ ಉತ್ಸವ 9 ದಿನಗಳ ಕಾಲ ನಡೆಯುತ್ತಿತ್ತು. ಆದರೆ ಈ ವರ್ಷ ಒಂಭತ್ತು ದಿನಗಳ ಉತ್ಸವವನ್ನು ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ.
ಶರಣ ಸಂಸ್ಕೃತಿ ಉತ್ಸವವು ಅ.4 ರಿಂದ 6ರವರೆಗೆ ನಡೆಯಲಿದೆ. ಅ.4ರಂದು ಬಸವತತ್ವ ಧ್ವಜಾರೋಹಣ, ಉತ್ಸವ ಉದ್ಘಾಟನೆ ನಡೆಯಲಿದೆ. ಅ.5ರಂದು ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ. ಕೋಟೆಯೊಳಗಿನ ಮಠದಲ್ಲಿ ರಾಜವಂಶಸ್ಥರಿಂದ ಭಕ್ತಿ ಸಮರ್ಪಣೆ ಮಾಡಲಾಗುತ್ತದೆ. ಅ. 5ರಂದು ಮುರುಘಾ ಶಾಂತವೀರಶ್ರೀ ಭಾವಚಿತ್ರದೊಂದಿಗೆ ಪೀಠಾರೋಹಣ ನಡೆಯುತ್ತದೆ. ಉತ್ಸವದಲ್ಲಿ ಮುರುಘಾಮಠದ ಪ್ರಭಾರ ಪೀಠಾದ್ಯಕ್ಷ ಮಹಾಂತ ರುದ್ರೇಶ್ವರ ಶ್ರೀ ಸೇರಿ ವಿವಿಧ ಮಠಾಧೀಶರು ಭಾಗಿಯಾಗುತ್ತಾರೆ ಎಂದು ಮುರುಘಾಮಠದಲ್ಲಿ, ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷರಾದ ಬಸವಕುಮಾರ ಶ್ರೀ, ಕಾರ್ಯಾದ್ಯಕ್ಷ ಎಸ್.ಲಿಂಗಮೂರ್ತಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ