ಪಾದಯಾತ್ರೆ ಮಾಡಿದ್ದಕ್ಕೆ ಸಿಎಂ, ಡಿಸಿಎಂ ಧಮ್ಕಿ ಹಾಕುತ್ತಿದ್ದಾರೆ: ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದ ವಿಜಯೇಂದ್ರ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 03, 2024 | 9:06 PM

ಮುಡಾ ಸೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಮತ್ತು ಜೆಡಿಎಸ್ ಮೊದಲ ದಿನದ ಪಾದಯಾತ್ರೆ ಸದ್ಯ ಮುಕ್ತಾಯವಾಗಿದೆ. ಪಾದಯಾತ್ರೆ ಅಂತ್ಯಕ್ಕೂ ಮುನ್ನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಮತ್ತು ಡಿಸಿಎಂ ಅವರೇ ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ಹೇಳಿದ್ದಾರೆ.

ಪಾದಯಾತ್ರೆ ಮಾಡಿದ್ದಕ್ಕೆ ಸಿಎಂ, ಡಿಸಿಎಂ ಧಮ್ಕಿ ಹಾಕುತ್ತಿದ್ದಾರೆ: ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದ ವಿಜಯೇಂದ್ರ
ಪಾದಯಾತ್ರೆ ಮಾಡಿದ್ದಕ್ಕೆ ಸಿಎಂ, ಡಿಸಿಎಂ ಧಮ್ಕಿ ಹಾಕುತ್ತಿದ್ದಾರೆ: ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದ ವಿಜಯೇಂದ್ರ
Follow us on

ಬೆಂಗಳೂರು, ಆಗಸ್ಟ್​ 3: ಪಾದಯಾತ್ರೆ (Padayatra) ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್​ ಧಮ್ಕಿ ಹಾಕುತ್ತಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಮೈಸೂರು ಚಲೋ ಮೊದಲ ದಿನದ ಪಾದಯಾತ್ರೆ ಬಿಡದಿಯಲ್ಲಿ ಮುಕ್ತಾಯ ಮುಂಚೆ ಸಾರ್ವಜನಿಕವಾಗಿ ಮಾತನಾಡಿ ಅವರು, ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ 14 ನಿವೇಶನ ನೀಡಿದ್ದಾರೆ. ಲೂಟಿ ಹೊಡೆದ ಪ್ರಕರಣ ಸಿಬಿಐಗೆ ನೀಡಬೇಕೆಂಬುದು ನಮ್ಮ ಆಗ್ರಹ ಎಂದಿದ್ದಾರೆ.

ನಿನ್ನೆ ಡಿ.ಕೆ.ಶಿವಕುಮಾರ್ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಹೈಕಮಾಂಡ್‌ಗೆ ಕಾಂಗ್ರೆಸ್ ಕಪ್ಪ ಕಾಣಿಕೆ ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್​ ಮೊದಲ ದಿನದ ಪಾದಯಾತ್ರೆ ಅಂತ್ಯ: ಆರಂಭದಿಂದ ಮುಕ್ತಾಯದವರೆಗೆ ಏನೆಲ್ಲಾ ನಡೀತು? ಇಲ್ಲಿದೆ ವಿವರ

ನಾಳೆ ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಇರಲಿದ್ದಾರೆ. ಯಾದಗಿರಿ ಪಿಎಸ್‌ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಗಾವಣೆಗೆ 30 ಲಕ್ಷ ರೂ. ಕೇಳಿದ್ದಾರೆ, ಈ ಬಗ್ಗೆ ಅವರ ಪತ್ನಿಯೇ ಹೇಳಿದ್ದಾರೆ. ಯಾದಗಿರಿ ಕಾಂಗ್ರೆಸ್ ಶಾಸಕ ಹಣ ಕೇಳಿರುವುದು ಬಯಲಿಗೆ ಬಂದಿದೆ ಎಂದಿದ್ದಾರೆ.

ಗಂಡಸ್ತನ ಅನ್ನೋದು ಬರೀ ಮಾತಿನಲ್ಲಿ ಅಲ್ಲ. ಕೆಲಸ ಮಾಡಿ ತೋರಿಸಿ ಎಂದ ಅಶ್ವತ್ಥ್‌ ನಾರಾಯಣ

ಬಿಜೆಪಿ ಶಾಸಕ ಡಾ.ಅಶ್ವತ್ಥ್‌ ನಾರಾಯಣ ಮಾತನಾಡಿ, ಗಂಡಸ್ತನ ಅನ್ನೋದು ಬರೀ ಮಾತಿನಲ್ಲಿ, ಹಣ ಹೊಡೆಯುವುದರಲ್ಲಿ ಅಲ್ಲ. ಕೆಲಸ ಮಾಡಿ ತೋರಿಸಬೇಕು. ಮುಡಾದಲ್ಲಿ ಲೂಟಿ ಹೊಡೆದಿದ್ದು ಸಾಲದು ಅಂತಾ ರಾಮನಗರದಲ್ಲಿ ಲೂಟಿ ಹೊಡೆಯಲು ರಾಮನಗರದ ಹೆಸರು ಬದಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಂಗಡಿಗರು ಹೊರಟಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ನಾವು ಕೇಳುವ ಪ್ರಶ್ನೆಗೆ ವಿಪಕ್ಷದವರು ಉತ್ತರ ಕೊಡಲಿ: ಡಿಕೆ ಶಿವಕುಮಾರ್ ಆಗ್ರಹ

ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಯೋಗ್ಯತೆ ಏನೆಂದು ಜನ ತೋರಿಸಿದ್ದಾರೆ. ನೈತಿಕತೆ ಇದ್ದರೆ ರಾಹುಲ್ ಗಾಂಧಿ ಸಿದ್ದರಾಮಯ್ಯ ರಾಜೀನಾಮೆ ಪಡೆಯಬೇಕು. ಶ್ರೀರಾಮನ ಹೆಸರಿನ ರಾಮನಗರದ ಹೆಸರನ್ನು ಬದಲಿಸಲು ಹೊರಟಿದ್ದಾರೆ. ಮಾಗಡಿಗೆ ನೀರು ಕೊಡುವುದಿಲ್ಲ, ಬಿಡದಿಗೆ ಕೈಗಾರಿಕೆ ಕೊಡುವುದಿಲ್ಲ. ಭೂಮಿಗೆ ಬೆಲೆ ಹೆಚ್ಚಿಸಲು ಹೊರಟಿದ್ದಾರೆ. ಡಿ.ಕೆ.ಶಿವಕುಮಾರ್ ಗಂಡಸ್ತನದ ಬಗ್ಗೆ ಮಾತನಾಡುತ್ತಾರೆ. ಏಳು ಬಾರಿ ನಿಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ರಾಮನಗರಕ್ಕೆ ಕೊಟ್ಟಿದ್ದು ಬರೀ ಚೊಂಬು, ಕೆಲಸ ಮಾಡಿ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.