ನಾವು ಕೇಳುವ ಪ್ರಶ್ನೆಗೆ ವಿಪಕ್ಷದವರು ಉತ್ತರ ಕೊಡಲಿ: ಡಿಕೆ ಶಿವಕುಮಾರ್ ಆಗ್ರಹ

ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಾಗುವ ಮೊದಲೇ ಪ್ರಮುಖ 5 ಸ್ಥಳಗಳಲ್ಲಿ ಬಹಿರಂಗ ಸಭೆ ನಡೆಸಲು ಕಾಂಗ್ರೆಸ್​ ನಿರ್ಧರಿಸಿದೆ. ಆ ಮೂಲಕ ಉಭಯ ಪಕ್ಷಗಳಿಗೆ ಟಕ್ಕರ್​ ನೀಡಿದೆ. ಇಂದು ರಾಮನಗರದಲ್ಲಿ ಕಾಂಗ್ರೆಸ್​​​ ಜನಾಂದೋಲ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ನಾವು ಕೇಳುವ ಪ್ರಶ್ನೆಗಳಿಗೆ ವಿರೋಧ ಪಕ್ಷದವರು ಉತ್ತರ ಕೊಡಲಿ. ನನಗೆ ಬೈಯಲಿ, ನಂದೇನಾದರೂ ಇದ್ರೆ ಬಿಚ್ಚಿಡಲಿ ಎಂದು ಸವಾಲು ಹಾಕಿದ್ದಾರೆ.  

ನಾವು ಕೇಳುವ ಪ್ರಶ್ನೆಗೆ ವಿಪಕ್ಷದವರು ಉತ್ತರ ಕೊಡಲಿ: ಡಿಕೆ ಶಿವಕುಮಾರ್ ಆಗ್ರಹ
ನಾವು ಕೇಳುವ ಪ್ರಶ್ನೆಗೆ ವಿಪಕ್ಷದವರು ಉತ್ತರ ಕೊಡಲಿ: ಡಿಕೆ ಶಿವಕುಮಾರ್ ಆಗ್ರಹ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 03, 2024 | 6:08 PM

ರಾಮನಗರ, ಆಗಸ್ಟ್​​ 03: ನಾವು ಕೇಳುವ ಪ್ರಶ್ನೆಗಳಿಗೆ ವಿರೋಕ್ಷ ಪಕ್ಷದವರು ಉತ್ತರ ಕೊಡಲಿ. ನನಗೆ ಬೈಯಲಿ, ನಂದೇನಾದರೂ ಇದ್ರೆ ಬಿಚ್ಚಡಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಸವಾಲು ಹಾಕಿದ್ದಾರೆ. ಮುಡಾ ಹಗರಣದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್​ ಈಗಾಗಲೇ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ (Padayatra) ಆರಂಭಿಸಿದೆ. ಇದಕ್ಕೆ ಟಕ್ಕರ್ ಕೊಡಲು ರಾಮನಗರದಲ್ಲಿ ನಡೆದ ಕಾಂಗ್ರೆಸ್​​​ ಜನಾಂದೋಲ ಕಾರ್ಯಕ್ರಮ ನಡೆದಿದೆ.

ಜನಾಂದೋಲ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಡಿಕೆ ಶಿವಕುಮಾರ್​, ಪ್ಯಾಂಟ್ ಶರ್ಟ್ ಎಲ್ಲ ಬಟ್ಟೆ ಬಿಚ್ಚಿ ನೇಣಿಗೆ ಹಾಕಲಿ, ಶಿಲುಬೆಗೇರಿಸಲಿ. ರಾಜ್ಯದ ಜನರಿಗೆ ಬಿಜೆಪಿ ಕಾಲದ ಹಗರಣಗಳು ಗೊತ್ತಾಗಬೇಕು. ಜನಾಂದೋಲನ ಕಾರ್ಯಕ್ರಮದ ಮೂಲಕ ಬಿಡಿಸಿ ಹೇಳುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಸರ್ಕಾರ ಅಲ್ಲಾಡಿಸಲು ಸಾಧ್ಯವಿಲ್ಲ, ಅದು ನಿಮ್ಮ ಭ್ರಮೆ, ತಿರುಕನ‌ ಕನಸು: ಡಿಕೆ ಶಿವಕುಮಾರ್​

ಹಗರಣ ನಡೆದಿದೆ ಎಂದು ಯಾವುದಾದರೂ ತನಿಖೆ ನಡೆದಿದ್ಯಾ? ತಪ್ಪು ಮಾಡಿದೆ ಎಂದು ಯಾವುದಾದರೂ ಆಯೋಗ ಬಂದಿದೆಯಾ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಪ್ರಶ್ನೆ

ನಿನ್ನೆ ಕುಮಾರಸ್ವಾಮಿ ಬೇಕು ಅಂತಲೇ ಪ್ರಶ್ನೆ ಹಾಕಿದೆ. ನಾನು ನಿನ್ನನ್ನ ತಿಹಾರ್ ಜೈಲಿಗೆ ಕಳುಹಿಸುತ್ತೀನಿ. ಮಿಲಿಟರಿಯವರು ಬರುತ್ತಾರೆ ಅಂದರು. ಮಿಸ್ಟರ್ ಕುಮಾರಸ್ವಾಮಿ ನಾನು ತಿಹಾರ್ ಜೈಲು, ನನ್ನ ಮೇಲೆ ಹಾಕಿದ ಕೇಸೂ ನೋಡಿದ್ದು ಆಯ್ತು. ನಿನ್ನ ನಾಯಕತ್ವಕ್ಕೆ 19 ಸೀಟು ಕೊಟ್ಟದ್ದಾರೆ. ನಾವು 136 ಸೀಟು ಜನ ಕೊಟ್ಟಿದ್ದಾರೆ. ನಿಮಗೂ‌ ಶಕ್ತಿ,‌ ಅವರಿಗೂ‌ ಶಕ್ತಿ ಇಲ್ಲ ಅಂತ‌ ತಬ್ಬಾಡಿಕೊಂಡು ಇದ್ದೀರಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೆಡಿಎಸ್ ಪಾದಯಾತ್ರೆ: ಹೆಚ್​ಡಿ ಕುಮಾರಸ್ವಾಮಿ ಮುನಿಸು ತಣಿಸಿದ್ದೇ ಪ್ರಲ್ಹಾದ್ ಜೋಶಿ!

ಪೆನ್ ಡ್ರೈವ್ ಬಿಡುವಷ್ಟು ನೀಚ ಅಲ್ಲ. ಪ್ರೀತಂಗೌಡ ನನ್ನ ಕುಟುಂಬ ಹಾಳು ಮಾಡಿದ. ನಾನು ಪಾದಯಾತ್ರೆಯಲ್ಲಿ ಭಾಗಿಯಾಗುವುದಲ್ಲ ಅಂದ್ರಿ. ನನಗೂ ಪ್ರಜ್ವಲ್, ರೇವಣ್ಣ ಕುಟುಂಬ ಬೇರೆ ಬೇರೆ ಅಂದ್ರಿ ಈಗ‌ ಎಲ್ಲಿ ಹೋಯ್ತು ಆ ಅಕ್ಕರೆ ಎಂದು ಪ್ರಶ್ನಿಸಿದ್ದು, ನಾಳೆ ಉತ್ತರ ಕೊಡುತ್ತೇನೆ ಅಂತ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾಗಿ ನಾನು‌ ಅವರ ಉತ್ತರಕ್ಕೆ ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:08 pm, Sat, 3 August 24

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ