ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ: ಡೆತ್ ನೋಟ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ ಪೊನ್ನಣ್ಣ

BJP Vinay Somaiya Suicide Case: ಎಫ್​ಐಆರ್​ ದಾಖಲಿಸಿದ್ದಕ್ಕೆ ಮನನೊಂದು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ, ಬೆಂಗಳೂರಿನ ನಾಗವಾರದ ತನ್ನ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸೂಸೈಡ್​ಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್​ನೋಟ್​ ಪೋಸ್ಟ್​ ಮಾಡಿದ್ದು, ಡೆತ್​​ನೋಟ್​ನಲ್ಲಿ ಶಾಸಕ ಎ.ಎಸ್​.ಪೊನ್ನಣ್ಣ ಆಪ್ತ ತೆನ್ನೀರಾ ಮಹೀನಾ ಕಾರಣ ಎಂದು ಆರೋಪಿಸಿದ್ದಾನೆ. ಆದ್ರೆ, ವಾಟ್ಸಪ್ ನಲ್ಲಿ ಬಂದಿದ್ದು ಡೆತ್ ನೋಟ್ ಹೇಗಾಯಿತು? ಎಂದು ಪೊನ್ನಣ್ಣ ಪ್ರಶ್ನಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ: ಡೆತ್ ನೋಟ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ ಪೊನ್ನಣ್ಣ
Ponanna
Edited By:

Updated on: Apr 04, 2025 | 6:10 PM

ಬೆಂಗಳೂರು, (ಏಪ್ರಿಲ್ 04): ಬಿಜೆಪಿ (BJP) ಕಾರ್ಯಕರ್ತ ವಿನಯ್ ಸೋಮಯ್ಯ (Vinay Somayya)  ಆತ್ಮಹತ್ಯೆ  ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಾಯುವ ಮುನ್ನ ವಿನಯ್, ವಾಟ್ಸಪ್ ಗ್ರೂಪ್​ನಲ್ಲೊಂದು ಪೋಸ್ಟ್ ಮಾಡಿದ್ದು, ನನ್ನ ಸಾವಿಗೆ ಸಿಎಂ ಕಾನೂನು ಸಲಹೆಗಾರ, ಶಾಸಕ ಎ.ಎಸ್​.ಪೊನ್ನಣ್ಣ (Congress MLA Ponnanna) ಆಪ್ತ ತೆನ್ನೀರಾ ಮಹೀನಾ ಕಾರಣ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ಪೊನ್ನಣ್ಣ ವಿರುದ್ಧ ಎಫ್​ಐಆ ದಾಖಲಾಗಬೇಕೆಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಆದ್ರೆ, ತಮ್ಮ ಮೇಲಿನ ಆರೋಪವನ್ನ ಪೊನ್ನಣ್ಣ ತಳ್ಳಿಹಾಕಿದ್ದಾರೆ. ಡೆತ್​ನೋಟ್​ ಕೈ ಬರವಣಿಗೆಯಲ್ಲಿ ಇದೆಯಾ? ವಾಟ್ಸಪ್ ನಲ್ಲಿ ಬಂದಿದ್ದು ಡೆತ್ ನೋಟ್ ಹೇಗಾಯಿತು? ಎಂದು ಪ್ರಶ್ನಿಸಿದ್ದು, ಬಿಜೆಪಿಯವರು ಸಾವಿನ ಮೇಲೆ ರಾಜಕಾರಣ ಮಾಡುವುದು ಹೊಸದಲ್ಲ ಎಂದಿದ್ದಾರೆ.

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪೊನ್ನಣ್ಣ, ಕೇಸ್ ನಲ್ಲಿ ಎಫ್ಐಆರ್ ದಾಖಲಾಗಿದೆ. ಪೋಲಿಸ್ ಇಲಾಖೆಯವರು ತನಿಖೆ ಮಾಡುತ್ತಾರೆ. ಯಾರು ಅಪರಾಧಿಗಳು ಏನು ಎನ್ನುವುದನ್ನು ಪೊಲೀಸ್ ತನಿಖೆಗೆ ಬಿಡೋಣ. ಆದರೆ ಬಿಜೆಪಿಯವರು ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ . ಯಾರ್ಯಾರು ಡಿಸಿಪಿ ಫೋನ್ ಮಾಡಿದ್ದಾರೆ ಎನ್ನುವುದನ್ನು ಸಂದರ್ಭ ಬಂದಾಗ ಹೇಳುತ್ತೇನೆ. ಬಿಜೆಪಿಯವರು ಯಾಕೆ ಫೋನ್ ಮಾಡಬೇಕು? ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ವಿನಯ್ ಯಾವುದೇ ಪಕ್ಷದಲ್ಲಿ ಇರಬಹುದು. ಯುವಕನ ಜೀವ ಹೋಗಿದೆ ಇದು ಒಳ್ಳೆ ಬೆಳವಣಿಗೆ ಅಲ್ಲ. ಅವರ ಕುಟುಂಬದ ಜೊತೆ ನಿಲ್ಲಬೇಕು. ಅವರ ಕುಟುಂಬಕ್ಕೆ ಶಕ್ತಿ ಕೊಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದರು.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಡೆತ್​ನೋಟ್​ನಲ್ಲಿ ಸಿಎಂ ಕಾನೂನು ಸಲಹೆಗಾರರ ವಿರುದ್ಧ ಗಂಭೀರ ಆರೋಪ

ವಾಸ್ತವನ್ನು ಅರ್ಥಮಾಡಿಕೊಳ್ಳಬೇಕು

ಬಿಜೆಪಿಯವರು ಸಾವಿನ ಮೇಲೆ ರಾಜಕಾರಣ ಮಾಡೋದು ಹೊಸದಲ್ಲ. ಅವರ ನೈತಿಕತೆ ಸಂಪೂರ್ಣವಾಗಿ ಕಳೆದುಕೊಂಡಿದೆ. ಇವತ್ತು ಘಟನೆ ಏನು ನಡೆದಿದೆ ಅದು ನಡೆಯಬಾರದಿತ್ತು. ವಾಸ್ತವನ್ನು ಅರ್ಥಮಾಡಿಕೊಳ್ಳಬೇಕು. ಫೆಬ್ರವರಿಯಲ್ಲಿ ಕೇಸ್ ದಾಖಲಾಗಿತ್ತು. ಅದು ಪೊಲೀಸಿನವರು ಮಾಡಿರೋದಲ್ಲ ಕೋರ್ಟ್ ಸೂಚನೆ ಮೇರೆಗೆ ಆಗಿದೆ. ತೇಜೋವಧೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ FIR ಮಾಡಲಾಗಿದೆ. ಆ ಕೇಸ್ ಗೆ ಕೋರ್ಟ್ ನಲ್ಲಿ ಸ್ಟೇ ಸಿಗುತ್ತೆ. ಹೀಗಿದ್ದಾಗ ಕಿರುಕುಳ ಕೊಡುವುದು ಎಲ್ಲಿಂದ ಆಗುತ್ತೆ. ನನ್ನ ಹೆಸರು ಇದರಲ್ಲಿ ಯಾಕೆ ಬರುತ್ತೆ ಇದು ವಾಸ್ತವ ಎಂದು ಹೇಳಿದರು.

ಇದನ್ನೂ ಓದಿ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
ಬಿಜೆಪಿ ವಿನಯ್ ಆತ್ಮಹತ್ಯೆ ಕೇಸ್​: ಸಿಎಂ ಕಾನೂನು ಸಲಹೆಗಾರರ ವಿರುದ್ಧ ದೂರು
ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಕಾಂಗ್ರೆಸ್ ಶಾಸಕರ ವಿರುದ್ಧ ಗಂಭೀರ ಆರೋಪ

ಎಫ್ ಐ ಆರ್ ಗೆ ತಡೆಯಾಜ್ಞೆ ಇದ್ರೆ ಯಾವ ಕಾರಣಕ್ಕೂ ಪೊಲೀಸರು ಹೋಗಿರಲು ಸಾಧ್ಯನೇ ಇಲ್ಲ .ಆ ರೀತಿ ಪೊಲೀಸರು ಹೋಗಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಉಚ್ಚ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಗೋಬಹುದು . ಉಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುತ್ತಿದ್ದಾರೆ ಎಂದು ಪೊಲೀಸರ ದೂರು ಕೊಡಬಹುದು. ಡೆತ್ ನೋಟ್ ಅಂತ ಎಲ್ಲರೂ ಉಲ್ಲೇಖ ಮಾಡುತ್ತಿದ್ದಾರೆ. ಅವರು ಬರೆದಿಟ್ಟಿದ್ದಾರೆ. ಅದು ಕೈ ಬರವಣಿಗೆಯಲ್ಲಿ ಇದೆಯಾ? ಎಂದು ಪ್ರಶ್ನಿಸಿದರು.

ಪೋಸ್ಟ್ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊನ್ನಣ್ಣ

ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆ. ಅದು ಫೋರೆನ್ಸಿಕ್ ಆಗಬೇಕು. ಇತ್ತೀಚಿಗೆ ಫೇಕ್ ನ್ಯೂಸ್ ನಡೆಯುತ್ತಿದೆ ಮಾರ್ಪಿಂಗ್ ನಡೆಯುತ್ತಿದೆ . ಇಷ್ಟು ಸುದೀರ್ಘವಾಗಿ ಅವರು ಬರೆದಿರುವುದನ್ನ ನೋಡಿದಾಗ ಕಳಿಸಿದ್ದು ಯಾರು? ಬರೆದಿದ್ದು ಯಾರು? ಕೈಬರಹ ಇದ್ದು ಅವರ ಜೇಬಿನಲ್ಲಿ, ಮನೆಯಲ್ಲಿ ಸಿಕ್ಕಿದ್ರೆ ಅದು ಡೆತ್ ನೋಟ್ ಎಂದು ಹೇಳುವುದು ಸರಿ. ವಾಟ್ಸಪ್ ನಲ್ಲಿ ಬಂದಿದ್ದು ಡೆತ್ ನೋಟ್ ಹೇಗಾಯಿತು? ಅದು ಅವರೇ ಬರೆದಿದ್ದಾ ಎಂದು ವಿನಯ್ ಪೋಸ್ಟ್​ ಮೇಲೆ ಅನುಮಾನ ವ್ಯಕ್ತಪಡಿಸಿದರು.

ಅವರು (ವಿನಯ್) ಬಿಜೆಪಿ ಐಟಿ ಸೆಲ್ ನಲ್ಲಿ ಇದ್ದಂತವರು. ಅವರನ್ನ ಬಿಜೆಪಿಯವರು ಬಳಸಿಕೊಂಡಿರಬಹುದು. ಸಂಘಟಿತವಾಗಿ ಬಿಜೆಪಿಯವರು ಪ್ರತಿಭಟನೆಗೆ ಇಳಿದಿದ್ದಾರೆ . ಇದೆಲ್ಲವನ್ಉ ಜನ ಗಮನಿಸ್ತಿದ್ದಾರೆ. ಇದಕ್ಕೆ ಸರಿಯಾದ ಸಮಯದಲ್ಲಿ ಉತ್ತರ ಕೊಡುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಕೊಲೆಗಡುಕರು ಅಂತ ನಮ್ಮ ಬಗ್ಗೆ ಪೋಸ್ಟ್ ಹಾಕುತ್ತಿದ್ದಾರೆ. ಆಗಿರೋದು ಆತ್ಮಹತ್ಯೆ ಆದ್ರೆ ಕೊಲೆಗಡುಕರು ಎಂದು ಪೋಸ್ಟ್ ಹಾಕುತ್ತಿದ್ದಾರೆ ಎಂದು ತಿಳಿಸಿದರು.

ನಮ್ಮ ಮೇಲೆ ಕೊಲೆ ಆರೋಪ ಇದೆಯಾ ನಾವು ದೂರು ಕೊಡಬಾರದಾ? ನಮ್ಮ ಮೇಲೆ ಕೊಲೆ ಆರೋಪ ಮಾಡುವಾಗ ನಮ್ಮ ಕುಟುಂಬಸ್ಥರಿಗೆ ಏನು ಅನಿಸಬೇಕು. ನಾನು ರಾಜಕೀಯದಲ್ಲಿದ್ದೇನೆ. ಇವರ ರಾಜಕೀಯವನ್ನು ಮೆಟ್ಟಿ ನಿಂತು ಶಾಸಕ ಆಗಿರುವುದು. ಇವರು ಕೊಲೆಗಡುಕರು ಎಂದು ನನ್ನ ಚಿತ್ರ, ಮಂಥರ್ ಗೌಡ ಹಾಗೂ ತನ್ನೆರಾ ಮೈನಾ ಫೋಟೋ ಹಾಕಿದ್ದಾರೆ. ಇದಕ್ಕೆಲ್ಲ ಯಾರು ಜವಾಬ್ದಾರಿ? ಇವರ ಕೀಳು ಮಟ್ಟದ ರಾಜಕಾರಣಕ್ಕೆ ಪಾಪ ಅಮಾಯಕ ಬಲಿಯಾಗಿದ್ದಾನೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Fri, 4 April 25