ಬಳ್ಳಾರಿ: ಕೊವಿಡ್ ಲಸಿಕೆ ಪಡೆದಿದ್ದ D ದರ್ಜೆ ನೌಕರ.. ಹೃದಯಾಘಾತದಿಂದ ಸಾವು
ಆರೋಗ್ಯ ಇಲಾಖೆಯ ಡಿ ದರ್ಜೆ ನೌಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಿಪಾಟಿ ಹೇಳಿದ್ದಾರೆ.
ಬಳ್ಳಾರಿ: ಆರೋಗ್ಯ ಇಲಾಖೆಯ ಡಿ ದರ್ಜೆ ನೌಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಿಪಾಟಿ ಹೇಳಿದ್ದಾರೆ.
ಜ. 16ರಂದು ಕೊರೊನಾ ಲಸಿಕೆಯನ್ನು ಪಡೆದಿದ್ದ ಆರೋಗ್ಯ ಇಲಾಖೆ D ದರ್ಜೆ ನೌಕರ ನಾಗರಾಜ್ (43) ಸಾವನ್ನಪ್ಪಿದ್ದಾರೆ. ಜಿಲ್ಲೆಯ ಸಂಡೂರಿನ ಆರೋಗ್ಯ ಇಲಾಖೆ ಡಿ ದರ್ಜೆ ನೌಕರ ನಾಗರಾಜ್ಗೆ ಬಿಪಿ, ಶುಗರ್ ಇತ್ತು ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಲಿಪಾಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದ ವಾರ್ಡ್ಬಾಯ್ ಸಾವು; ವ್ಯಾಕ್ಸಿನ್ ಕಾರಣವಲ್ಲ ಎಂದ ಸ್ಥಳೀಯ ಆಡಳಿತ