ಲವ್ ಜಿಹಾದ್ ವಿರುದ್ದ ಧ್ವನಿಯೆತ್ತುವ ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ!
ನವೆಂಬರ್ 30 ರಂದೇ ಸುರತ್ಕಲ್ ನಿವಾಸಿ ಆಯೇಷಾ ಎಂಬ ಯುವತಿಯ ಜೊತೆ ಪ್ರಶಾಂತ್ ತೆರಳಿದ್ದ ಎಂದು ತಿಳಿದುಬಂದಿದೆ. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಬಳಿಕ ಜೋಡಿ ಈಗ ವಿವಾಹವಾಗಿದ್ದಾರಂತೆ.
ಮಂಗಳೂರು, ಡಿಸಂಬರ್ 8: ಲವ್ ಜಿಹಾದ್ (Love Jihad) ವಿರುದ್ದ ಧ್ವನಿಯೆತ್ತುವ ಭಜರಂಗದಳದಲ್ಲೇ ಅಂತರ್ಧರ್ಮೀಯ ವಿವಾಹ ಜರುಗಿದೆ. ಮುಸ್ಲಿಂ ಯುವತಿ ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ್ದಾಳೆ. ಮಂಗಳೂರಿನ ಸುರತ್ಕಲ್ (Surathkal, Mangalore) ನಲ್ಲಿ ಈ ಹಿಂದೂ-ಮುಸ್ಲಿಂ ಲವ್ ಸ್ಟೋರಿ (Muslim, Hindu) ಘಟಿಸಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪ್ರಶಾಂತ್ ಭಂಡಾರಿ ಎಂಬ ಯುವಕ ಮುಸ್ಲಿಂ ಯುವತಿಯ ಜೊತೆ ವಿವಾಹವಾಗಿದ್ದಾನೆ.
ನವೆಂಬರ್ 30 ರಂದೇ ಸುರತ್ಕಲ್ ನಿವಾಸಿ ಆಯೇಷಾ ಎಂಬ ಯುವತಿಯ ಜೊತೆ ಪ್ರಶಾಂತ್ ತೆರಳಿದ್ದ ಎಂದು ತಿಳಿದುಬಂದಿದೆ. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಬಳಿಕ ಜೋಡಿ ಈಗ ವಿವಾಹವಾಗಿದ್ದಾರೆ. ಅಂದಹಾಗೆ ಪ್ರಶಾಂತ್, ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ.
ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಪ್ರಶಾಂತ್ ಭಂಡಾರಿ ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಕಾಲಾಂತರದಲ್ಲಿ ಸುರತ್ಕಲ್ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವರಿಸಿದ್ದಾನೆ ಪ್ರಶಾಂತ್. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಆಯೇಷಾ ಪೋಷಕರು ಸದ್ಯ ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ