AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನ ಓನೆಕ್ಸ್ ಪಬ್ ಮೇಲೆ ಸಿಸಿಬಿ ಪೊಲೀಸರ ದಾಳಿ: ಧ್ವನಿವರ್ಧಕ ವಶ

ಪಬ್​ನಿಂದ ಹೊರಬರುವವರು ಅಶ್ಲೀಲವಾಗಿ ವರ್ತಿಸುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ದೇವಸ್ಥಾನಕ್ಕೆ ಹೋಗಿ ಬರುವ ದಾರಿಯಲ್ಲಿ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಸಾರ್ವಜನಿಕರು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸರು ಪಬ್ ಮೇಲೆ ದಾಳಿ ಮಾಡಿದ್ದಾರೆ.

ಮಂಗಳೂರಿನ ಓನೆಕ್ಸ್ ಪಬ್ ಮೇಲೆ ಸಿಸಿಬಿ ಪೊಲೀಸರ ದಾಳಿ: ಧ್ವನಿವರ್ಧಕ ವಶ
ಸಿಸಿಬಿ ದಾಳಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Oct 24, 2021 | 7:59 AM

Share

ದಕ್ಷಿಣ ಕನ್ನಡ: ನಿಗದಿತ ಸಮಯಕ್ಕಿಂತ ಹೆಚ್ಚು ತೆರೆಯಲಾಗಿದ್ದ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಮಂಗಳೂರಿನ ಎಂಜಿ ರಸ್ತೆಯಲ್ಲಿರುವ ಓನೆಕ್ಸ್ ಪಬ್​ನಲ್ಲಿ ಜೋರಾಗಿ ಧ್ವನಿವರ್ಧಕ ಬಳಸಿದ್ದು, ಅಕ್ಕಪಕ್ಕದವರಿಗೆ ಕಿರಿಕಿರಿ ಉಂಟುಮಾಡಿದೆ. ಅಲ್ಲದೇ ಪಬ್​ನಿಂದ ಹೊರಬರುವವರು ಅಶ್ಲೀಲವಾಗಿ ವರ್ತಿಸುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ದೇವಸ್ಥಾನಕ್ಕೆ ಹೋಗಿ ಬರುವ ದಾರಿಯಲ್ಲಿ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಸಾರ್ವಜನಿಕರು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸರು ಪಬ್ ಮೇಲೆ ದಾಳಿ ಮಾಡಿದ್ದಾರೆ.

ಮಂಗಳೂರು ಸಿಸಿಬಿ ಇನ್ಸ್​ಪೆಕ್ಟರ್​ ಮಹೇಶ್ ಪ್ರಸಾದ್ ಮತ್ತು ಬರ್ಕೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಜ್ಯೋತಿರ್ಲಿಂಗ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಅಬಕಾರಿ ಕಾಯ್ದೆ, ಕೆಪಿ ಕಾಯ್ದೆ, ಎಪಿಡೆಮಿಕ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚಿತ್ರದುರ್ಗ: ಮೆಚುರಿಟಿ ಹಣ ಕೇಳಲು ಹೋದ‌ ಯುವಕನನ್ನು ಕೂಡಿ ಹಾಕಿದ ಮ್ಯಾನೇಜರ್ ಮೆಚುರಿಟಿ ಹಣ ಕೇಳಲು ಹೋದ‌ ಯುವಕನನ್ನು ಬ್ಯಾಂಕ್ ಒಳಗೆ ಕೂಡಿ ಹಾಕಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಸಹಾರಾ ಇಂಡಿಯಾ ಬ್ಯಾಂಕ್ ಮ್ಯಾನೇಜರ್ ತಿರುಪತಿ, ಯುವಕ ವಿಕಾಸ್​ ಮೇಲೆ ದರ್ಪ ತೋರಿದ್ದು, ಬ್ಯಾಂಕಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ನಿನ್ನೆ ಸಂಜೆ 5 ರಿಂದ ರಾತ್ರಿ 9ರವರೆಗೆ ಬ್ಯಾಂಕಲ್ಲೇ ವಿಕಾಸ್ ಬಂಧಿಯಾಗಿದ್ದಾನೆ.

ರಾತ್ರಿ ನಗರ ಪೊಲೀಸರು ಸಹಾರಾ ಇಂಡಿಯಾ ಬ್ಯಾಂಕ್​ಗೆ ಬಂದ ಮೇಲೆ ವಿಕಾಸ್​ನನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮ್ಯಾನೇಜರ್ ತಿರುಪತಿ ಹೇಳುವುದೇ ಬೇರೆ. ಬ್ಯಾಂಕಿನ ವಹಿವಾಟು ವಿಚಾರ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥ ಬಳಿಕ ಮೆಚುರಿಟಿ ಹಣ ನೀಡುತ್ತೇವೆ. ಈ ಬಗ್ಗೆ ಮಾಹಿತಿ ನೀಡಿದರೂ ವಿಕಾಸ್ ಹಠ ಹಿಡಿದು ಕುಳಿತರು. ಹೀಗಾಗಿ ಬ್ಯಾಂಕ್ ಸುರಕ್ಷತೆ ದೃಷ್ಟಿಯಿಂದ ಬೀಗ ಹಾಕಿದೇನೆ ಎಂದು ತಿಳಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bangalore Crime: ಬೆಂಗಳೂರಿನಲ್ಲಿ ಲೆಹೆಂಗಾದಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 3 ಕೆಜಿ ಡ್ರಗ್ಸ್​ ವಶಕ್ಕೆ

ಪಿಸ್ತೂಲ್ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರ ಬಂಧನ: 2 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶಕ್ಕೆ

Published On - 7:25 am, Sun, 24 October 21

Follow Us
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಇಂದು ಕನ್ಯಾ ಸಂಕ್ರಮಣದ ದಿನ; ಸೂರ್ಯ ದೇವನ ದರ್ಶನದಿಂದ ಆರೋಗ್ಯ ವೃದ್ಧಿ
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಎಂ.ಎಸ್. ಸುಬ್ಬುಲಕ್ಷ್ಮಿ ಜಯಂತಿ ವೇಳೆ ಕಣ್ಣೀರಿಟ್ಟ ನಿರ್ಮಲಾ ಸೀತಾರಾಮನ್!
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಟಿವಿ9 ಕಚೇರಿಯಲ್ಲಿ ಗಣೇಶೋತ್ಸವ: ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ