ಅಸ್ಥಿರ ಸೂರು, ದುಸ್ತರ ಬದುಕು.. ಪುತ್ತೂರಿನ ಕುಟುಂಬದ ಗೋಳು ಕೇಳೋರು ಯಾರು?

ದಕ್ಷಿಣ ಕನ್ನಡ:  ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಿದೆ. ಈಗ ನಾವು ಹೇಳಲು ಹೊರಟಿರುವ ಕುಟುಂಬವೊಂದರ ಕಥೆಯೂ ಹಾಗೇ ಆಗಿಬಿಟ್ಟಿದೆ. ಇರುವ ನೂರು ಕಷ್ಟಗಳನ್ನು ಮೆಟ್ಟಿನಿಂತು ಮುಂದಕ್ಕೆ ಸಾಗೋಣ ಅಂತಾ ಎಷ್ಟೇ ಆಸೆಯಿಟ್ಟು ಪ್ರಯತ್ನಪಟ್ರೂ ಆಗುತ್ತಿಲ್ಲ. ಹೌದು, ಇದು ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ನೆಕ್ಕರಾಜೆ ಬೈಪದವು ಎಂಬಲ್ಲಿನ ರುಕ್ಮ ಮತ್ತು ಶಾಂತಿ ಎಂಬ ದಂಪತಿಯ ಪರಿಸ್ಥಿತಿ. ದಿನಗೂಲಿ ಮಾಡಿ ಜೀವನ ನಡೆಸುವ ರುಕ್ಮಗೆ ತಮ್ಮ ತಂದೆಯಿಂದ […]

ಅಸ್ಥಿರ ಸೂರು, ದುಸ್ತರ ಬದುಕು.. ಪುತ್ತೂರಿನ ಕುಟುಂಬದ ಗೋಳು ಕೇಳೋರು ಯಾರು?
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jun 18, 2020 | 7:13 PM

ದಕ್ಷಿಣ ಕನ್ನಡ:  ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಿದೆ. ಈಗ ನಾವು ಹೇಳಲು ಹೊರಟಿರುವ ಕುಟುಂಬವೊಂದರ ಕಥೆಯೂ ಹಾಗೇ ಆಗಿಬಿಟ್ಟಿದೆ. ಇರುವ ನೂರು ಕಷ್ಟಗಳನ್ನು ಮೆಟ್ಟಿನಿಂತು ಮುಂದಕ್ಕೆ ಸಾಗೋಣ ಅಂತಾ ಎಷ್ಟೇ ಆಸೆಯಿಟ್ಟು ಪ್ರಯತ್ನಪಟ್ರೂ ಆಗುತ್ತಿಲ್ಲ.

ಹೌದು, ಇದು ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ನೆಕ್ಕರಾಜೆ ಬೈಪದವು ಎಂಬಲ್ಲಿನ ರುಕ್ಮ ಮತ್ತು ಶಾಂತಿ ಎಂಬ ದಂಪತಿಯ ಪರಿಸ್ಥಿತಿ. ದಿನಗೂಲಿ ಮಾಡಿ ಜೀವನ ನಡೆಸುವ ರುಕ್ಮಗೆ ತಮ್ಮ ತಂದೆಯಿಂದ ಮೂರುವರೆ ಎಕರೆ ಜಮೀನಿನಲ್ಲಿ ಪಾಲು ಬರಬೇಕಿತ್ತು. ಆದರೆ ತನ್ನ ಅಣ್ಣನ ಹಟದಿಂದ ಅದೂ ಸಹ ಸಿಕ್ಕಿಲ್ಲ. ಕಾಡಿಬೇಡಿದಕ್ಕೆ ಕೊನೆಗೆ ಪಾಲಿಗೆ ಬಂದಿದ್ದು ಮುರುಕಲು ಜೋಪಡಿ. ಸರಿಯಾಗಿ ಕಾಲು ಚಾಚಿ ಮಲಗಲು ಸಾಧ್ಯವಿಲ್ಲದ ಕೋಳಿಗೂಡು. ಶೌಚಾಲಯವಿಲ್ಲ. ಕುಡಿಯುವ ನೀರು ಮತ್ತು ವಿದ್ಯುತ್ ವ್ಯವಸ್ಥೆಯಂತೂ ಇಲ್ಲವೇ ಇಲ್ಲ.

ವಿಶೇಷ ಚೇತನ ಮಗಳಿಗೂ ಸಿಗುತ್ತಿಲ್ಲ ನೆರವು ಈ ದಂಪತಿಗೆ ಓರ್ವ ಮಗಳಿದ್ದಾಳೆ. ಹೆಸರು ಜಯಶ್ರೀ. ಮೂರುವರೆ ವರ್ಷದ ಮಗುವಿಗೆ ಒಂದು ದಿನ ಇದ್ದಕ್ಕಿದ್ದಂತೆ ಜ್ವರ ಬಂತು. ಅದರಿಂದ ಎರಡೂ ಕಾಲುಗಳ ಮೇಲೆ ಸ್ವಾಧೀನವೇ ಕಳೆದುಕೊಂಡಳು. ಆಟವಾಡಿಕೊಂಡು ಇರಬೇಕಿದ್ದ ಪುಟಾಣಿಗೆ ಈಗ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಈಕೆಗೆ ಚಿಕಿತ್ಸೆ ಕೊಡಿಸಲು ದಂಪತಿ ಹತ್ರ ದುಡ್ಡಿಲ್ಲ. ಕೂಲಿನಾಲಿ ಮಾಡಿ ಸಿಗುವ ಹಣದಲ್ಲಿ ರುಕ್ಮ ತಮ್ಮ ಕುಟುಂಬವನ್ನು ನಡೆಸುವ ಪರಿಸ್ಥಿತಿ ಎದುರಾಗಿದೆ.

ಇದರ ಜೊತೆ ಮಗಳನ್ನು ನೋಡಿಕೊಳ್ಳುವ ಸಲುವಾಗಿ ಶಾಂತಿ ಕೂಡ ಕೆಲಸಕ್ಕೆ ಹೋಗಲು ಸಾಧ್ಯವಾಗ್ತಿಲ್ಲ. ಕನಿಷ್ಠ ಪಕ್ಷ ತಮ್ಮ ಮಗಳಿಗಾದ್ರು ಆರ್ಥಿಕ ನೆರವು ದೊರಕಬಹುದು ಎಂದು ಆಸೆಯಲ್ಲಿ ದಂಪತಿಯು ಅಧಿಕಾರಿಗಳಿಗೆ ನೆರವಿನ ಅರ್ಜಿಗಳನ್ನ ಸಲ್ಲಿಸಿದ್ರು. ಆದರೆ, ಏನು ಪ್ರಯೋಜನವಾಗಿಲ್ಲ ಎಂಬುದು ರುಕ್ಮ ಹಾಗೂ ಶಾಂತಿಯ ಅಳಲು.

ಒಳ್ಳೆಯ ಕಾರ್ಯಕ್ಕೆ ನೂರೆಂಟು ವಿಘ್ನ ಈ ಕುಟುಂಬದ ಸಂಕಷ್ಟವು ಕೊನೆಗೂ ಕಬಕದ ಗ್ರಾಮ ಪಂಚಾಯಿತಿಗೆ ಅರಿವಾಗಿದೆ. ಹೇಗಾದ್ರು ಮಾಡಿ ಈ ಕುಟುಂಬಕ್ಕೊಂದು ಸೂರು ಕಲ್ಪಿಸಿಕೊಡಬೇಕು ಎಂಬ ತುಡಿತದಲ್ಲಿ ಪಂಚಾಯಿತಿ ಅಧ್ಯಕ್ಷೆ ಪ್ರೀತಾ ಹಾಗೂ PDO ಆಶಾರ ಕನಸು. ಆದರೆ ದುರದೃಷ್ಟವಶಾತ್​ ದಂಪತಿಯ ಮನೆ ಇರುವ ಜಾಗದಲ್ಲೇ ಸೂರು ಕಟ್ಟಿಕೊಡಲು ಇವರ ಬಳಿ ಜಮೀನಿನ ಯಾವುದೇ ಕಾಗದಪತ್ರವಿಲ್ಲ.

ಆದರೂ ಛಲಬಿಡದ ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ DC ಮನ್ನಾ ಭೂಮಿಯಲ್ಲಿ ಈ ಕುಟುಂಬಕ್ಕೆ 5 ಸೆಂಟ್ಸ್ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿ ಮನೆ ನಿರ್ಮಿಸಲು ಮುಂದಾಗಿದ್ದಾರೆ. ಆದರೆ, ಪಾಪ ಇಲ್ಲು ಇವರಿಗೆ ಅಡ್ಡಗಾಲು. ಶಿವಪೂಜೆಯಲ್ಲಿ ಕರಡಿ ಬಿಟ್ಟಂಗೆ ಸ್ಥಳೀಯರೊಬ್ಬರು ಈ ಭೂಮಿಗೆ ಹೋಗುವ ಹಾದಿಗೇ ಬೇಲಿ ಹಾಕಿ ತಡೆಯೊಡ್ಡಿದ್ದಾರೆ.

ಈ ಕುಟುಂಬಕ್ಕೆ ಮನೆ ನಿರ್ಮಿಸಲು ಪಂಚಾಯಿತಿ ವತಿಯಿಂದ ಈಗಾಗಲೇ 1.5ಲಕ್ಷ ರೂಪಾಯಿಗಳ ಅನುದಾನವನ್ನ ಮಂಜೂರು ಆಗಿದೆ. ಆದರೆ ಮನೆ ಕಟ್ಟಲು ಜಾಗವಿಲ್ಲ. ಹೋದ್ರೆ ಹೋಗ್ಲಿ ತಮ್ಮ ತಂದೆಯ ಪಾಲಿನ ಜಮೀನಿನಲ್ಲಾದ್ರು 5 ಸೆಂಟ್ಸ್​ ಜಾಗಕ್ಕೆ ದಾನಪತ್ರ ಕೊಡಿಸಿ ಎಂದು ಕೆಲವು ಸಂಘ ಸಂಸ್ಥೆಗಳನ್ನು ಸಂಪರ್ಕಿಸಿದ್ರು ಸ್ಪಂದನೆ ಸಿಕ್ಕಿಲ್ಲ. ಈ ಕುಟುಂಬದ ಪರಿಸ್ಥಿತಿ ನೋಡುತ್ತಿದ್ದರೆ ನೋವಾಗುತ್ತಿದೆ. ಇವರಿಗೆ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಪಕ್ಕಾ ಮನೆಯನ್ನ ನಿರ್ಮಿಸಿಕೊಡುವ ಹಂಬಲವಿದೆ.

ಈಗಾಗಲೆ ಮಗಳ ಪರಿಸ್ಥಿತಿ ಗಮನಿಸಿ ವಿಕಲಚೇತನ ನಿಧಿಯಿಂದ 1.5 ಲಕ್ಷ ರೂಪಾಯಿಯನ್ನು ಸಹ ಮಂಜೂರು ಮಾಡಲಾಗಿದೆ. ಉಳಿದ ಹಣವನ್ನು ದಾನಿಗಳಿಂದ ಸಂಗ್ರಹಿಸಿ ಬಡ ಕುಟುಂಬಕ್ಕೆ ಸೂರು ಕಲ್ಪಿಸಿಕೊಡುವ ಬಯಕೆ ನಮ್ಮದು ಎಂದು ಅಧ್ಯಕ್ಷೆ ಪ್ರೀತಾ ಮತ್ತು PDO ಆಶಾ ತೋಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು ಶತಾಯಗತಾಯ ಈ ಕುಟುಂಬಕ್ಕೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಅವರು ಪಣತೊಟ್ಟಿದ್ದಾರೆ.

ಒಟ್ಟಾರೆ, ಒಳ್ಳೆ ಕಾರ್ಯಕ್ಕೆ ನೂರೆಂಟು ವಿಘ್ನ ಎಂಬಂತೆ ಈ ಬಡಕುಟುಂಬದ ಎಲ್ಲಾ ಪ್ರಯಾಸಗಳು ನೀರಿನಲ್ಲಿ ಹೋಮಮಾಡಿದಂತೆ ಭಾಸವಾಗುತ್ತಿದೆ. ಇನ್ನಾದರೂ ಕೆಲವು ಸಹೃದಯಿಗಳು ಇವರ ಪಾಡು ಕೇಳಿ ಸಹಾಯದ ಹಸ್ತ ಚಾಚುತ್ತಾರೆ ಎಂಬುದು ಎಲ್ಲರ ಆಶಯ -ಪೃಥ್ವಿರಾಜ್ ಬೊಮ್ಮನಕೆರೆ

Published On - 7:13 pm, Thu, 18 June 20

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ