AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓದು ಎಂದಿದ್ದಕ್ಕೆ ದಾವಣಗೆರೆ ಮನೆಯಿಂದ ಬಾಲಕ ಎಸ್ಕೇಪ್, ಹುಬ್ಬಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಹುಡುಕುತ್ತಿರುವ ತಂದೆ

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪೋಷಕರು ಏನು ಬುದ್ಧಿವಾದ ಹೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರು, ಕಾಲೇಜಿಗೆ ಹೋಗು, ಶಾಲೆಗೆ ಹೋಗು, ಚೆನ್ನಾಗಿ ಕಲಿ, ಚೆನ್ನಾಗಿ ಓದಿ ಒಳ್ಳೆ ಉದ್ಯೋಗ ಪಡೆಯಬೇಕೆಂದು ಅಂತೆಲ್ಲಾ ಹೇಳುವುದೇ ತಪ್ಪಾಗ್ಬಿಟ್ಟಿದೆ. ಹೀಗೆಲ್ಲಾ ಬುದ್ಧಿವಾದ, ತಿಳಿವಳಿಕೆ ಹೇಳಿದರೆ ಕೆಲ ಮಕ್ಕಳು ಮನೆಬಿಟ್ಟು ಹೋಗುವುದು ಇಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ ಅದೆಷ್ಟೋ ಉದಾಹರಣಗಳು ನಮ್ಮ ಕಣ್ಣು ಮುಂದೆ ಇವೆ. ಇಂತಹದ್ದೇ ರೀತಿ ದಾವಣಗೆರೆಯಲ್ಲಿ ನಡೆದಿದ್ದು, ಚೆನ್ನಾಗಿ ಓದು ಎಂದಿದ್ದಕ್ಕೆ 13 ವರ್ಷದ ಬಾಲಕ ಮನೆಯಿಂದ ಎಸ್ಕೇಪ್ ಆಗಿದ್ದಾನೆ.

ಓದು ಎಂದಿದ್ದಕ್ಕೆ ದಾವಣಗೆರೆ ಮನೆಯಿಂದ ಬಾಲಕ ಎಸ್ಕೇಪ್, ಹುಬ್ಬಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಹುಡುಕುತ್ತಿರುವ ತಂದೆ
ಸಾತ್ವಿಕ್, ಮನೆ ಬಿಟ್ಟು ಹೋಗಿರುವ ಬಾಲಕ
ಜಗದೀಶ ಬಿ.
| Edited By: |

Updated on: Feb 12, 2024 | 10:33 PM

Share

ದಾವಣಗೆರೆ/ಹುಬ್ಬಳ್ಳಿ, (ಫೆಬ್ರವರಿ 12): ಚೆನ್ನಾಗಿ ಓದು ಎಂದಿದ್ದಕ್ಕೆ 13 ವರ್ಷದ ಬಾಲಕ ಮನೆಬಿಟ್ಟು ಎಸ್ಕೇಪ್ ಆಗಿದ್ದಾನೆ. ದಾವಣಗೆರೆ (Davanagere) ನಗರದ ಎಸ್ಎಸ್ ಲೇಔಟ್ ನಿವಾಸಿ ಹನುಮಂತ, ಗಂಗಮ್ಮ ಅವರ 13 ವರ್ಷದ ಸಾತ್ವಿಕ್ ಮನೆ ಬಿಟ್ಟ ಹೋಗಿದ್ದಾನೆ. SSNPS ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಸಾತ್ವಿಕ್​​ಗೆ ತಂದೆ ಚೆನ್ನಾಗಿ ಓದಿಕೋ ಎಂದಿದ್ದಾರಂತೆ. ಇಷ್ಟಕ್ಕೆ ಸಾತ್ವಿಕ್ ಮನೆಬಿಟ್ಟು ಹೋಗಿದ್ದಾನೆ. ಫೆಬ್ರವರಿ 6ಕ್ಕೆ ಮನೆ ಬಿಟ್ಟು ಓಡಿ ಹೋಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ರೇಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆದು ಹುಬ್ಬಳ್ಳಿ (Hubballi) ಟ್ರೈನ್​ ಹತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಂದೆ ಹುಬ್ಬಳ್ಳಿಗೆ ತೆರಳಿ ಗಲ್ಲಿ ಗಲ್ಲಿಗಳಲ್ಲಿ ಹುಡುಕಾಡುತ್ತಿದ್ದಾರೆ.

ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಸಾತ್ವಿಕ್ ಮನೆಯಿಂದ ನೇರವಾಗಿ ದಾವಣಗೆರೆ ರೈಲ್ವೇ ನಿಲ್ದಾಣ ಆಗಮಿಸಿ ಟಿಕೆಟ್​ ಪಡೆದು ಹುಬ್ಬಳ್ಳಿ ರೈಲು ಹತ್ತಿದ್ದಾನೆ. ದಾವಣಗೆರೆ ರೇಲ್ವೆ ನಿಲ್ದಾಣ, ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸೇರಿದಂತೆ ಕೆಲ ಬೇರೆ ಸ್ಥಳದಲ್ಲಿನ ಚಲನವಲನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ತಂದೆ ಹನುಮಂತ, ಹುಬ್ಬಳ್ಳಿಯಲ್ಲಿ ಮಗನಿಗಾಗಿ ಗಲ್ಲಿ ಗಲ್ಲಿಗಳಲ್ಲಿ ಹುಡುಕಾಡುತ್ತಿದ್ದಾರೆ.

ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮಕ್ಕಳು ಮನೆ ಬಿಟ್ಟು ಹೋಗುವುದು ಅಥವಾ ಜೀವಕ್ಕೆ ಅಪಾಯ ಮಾಡಿಕೊಳ್ಳುವಂತ ದುಸ್ಸಾಹಸಕ್ಕೆ ಕೈ ಹಾಕಬಾರದು. ಯಾಕಂದ್ರೆ ನಿಮ್ಮ ಅಪ್ಪ-ಅಮ್ಮ ನಿಮ್ಮನ್ನ ಹೆತ್ತು ದೊಡ್ಡವಾರಿ ಮಾಡಿರುತ್ತಾರೆ. ನನ್ನ ಮಗ ಹೀಗೆ ಆಗ್ಬೇಕು ಅಂತೆಲ್ಲಾ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಅಪ್ಪ-ಅಮ್ಮನ ಕನಸು ನನಸು ಮಾಡಲು ಪ್ರಯತ್ನಿಸಿ, ಅದು ಸಾಧ್ಯವಾಗದಿದ್ದಕ್ಕೆ ಸುಮ್ಮನಾಗಿ. ಅದು ಬಿಟ್ಟು ಯಾವುದೇ ಅನಾಹುತ ಮಾಡಿಕೊಳ್ಳಬೇಡಿ.

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More