ಪೊಲೀಸ್ ಇತಿಹಾಸದಲ್ಲೇ ಅದ್ವಿತೀಯ ಸಾಧನೆ ಮಾಡಿದ್ದ ಪೊಲೀಸ್ ಶ್ವಾನ ತುಂಗಾ ನಿಧನ
ಪೊಲೀಸ್ ಇತಿಹಾಸದಲ್ಲೇ ಅದ್ವಿತೀಯ ಸಾಧನೆ ಮಾಡಿದ್ದ, ಪೊಲೀಸ್ ಶ್ವಾನ ತುಂಗಾ ಸಾವನ್ನಪ್ಪಿದೆ.
ದಾವಣಗೆರೆ: ಪೊಲೀಸ್ (Police) ಇತಿಹಾಸದಲ್ಲೇ ಅದ್ವಿತೀಯ ಸಾಧನೆ ಮಾಡಿದ್ದ, ಪೊಲೀಸ್ ಶ್ವಾನ (Dog) ತುಂಗಾ (Tunga) ಸಾವನ್ನಪ್ಪಿದೆ. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣಿ ಶ್ವಾನ ತುಂಗಾ, ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ನಿಧನವಾಗಿದೆ. 13 ವರ್ಷದ ಪೊಲೀಸ್ ಶ್ವಾನ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ಪೊಲೀಸ್ ಶ್ವಾನ ತುಂಗಾ 70 ಕೊಲೆ ಪ್ರಕರಣ ಪತ್ತೆ ಹಚ್ಚಿತ್ತು.
ಸೂಕ್ಷ್ಮ ಪತ್ತೆದಾರಿ ಬುದ್ದಿಯ ಶ್ವಾನ ತುಂಗಾ ಇಬ್ಬರಿಗೆ ಗಲ್ಲು ಹಾಗೂ ನಾಲ್ವರಿಗೆ ಜೀವಾವಧಿ ಶಿಕ್ಷೆ ಕೊಡಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಆಗಮನದ ಬಳಿಕ, ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯತ್ತು ಮೈದಾನದಲ್ಲಿ ತುಂಗಾ ಶ್ವಾನದ ಅಂತಿಮ ಸಂಸ್ಕಾರ ನೆರವೇರಲಿದೆ.
ಅಗಲಿದ ಪೊಲೀಸ್ ಶ್ವಾನ ತುಂಗಾಗೆ ಪೊಲೀಸ್ ಕವಾಯತು ಮೈದಾನದಲ್ಲಿ 3 ಸುತ್ತು ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವದೊಂದಿದೆ ಶ್ವಾನ ತುಂಗಾ ಅಂತ್ಯಸಂಸ್ಕಾರ ಮಾಡಲಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಸೇರಿದಂತೆ ಹಲವರಿಂದ ಅಂತಿಮನಮನ ಸಲ್ಲಿಸಿದರು.
ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ, ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ವಶ
ಬೆಂಗಳೂರು: ಅಕ್ರಮವಾಗಿ ವಿದೇಶದಿಂದ ಕಳ್ಳ ಸಾಗಾಣೆ ಮಾಡುತ್ತಿದ್ದ ಚಿನ್ನವನ್ನು ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 13 ಲಕ್ಷ 11 ಸಾವಿರದ 82 ರೂಪಾಯಿ ಮೌಲ್ಯದ 249 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕನ ಸೋಗಿನಲ್ಲಿ ಕುವೈತ್ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದ ವ್ಯಕ್ತಿಯೋರ್ವ ಚಿನ್ನ ಸಾಗಣೆ ಮಾಡುತ್ತಿದ್ದನು.
ನದಿ ಸ್ನಾನಕ್ಕೆ ಬಂದ ಯುವಕ ನೀರು ಪಾಲು
ಬೆಳಗಾವಿ: ಶ್ರಾವಣ ಮಾಸದ ಕೊನೆ ದಿನ ಹಿನ್ನಲೆ ನದಿ ಸ್ನಾನಕ್ಕೆ ಬಂದ ಯುವಕ ನೀರು ಪಾಲಾಗಿರುವ ಘಟನೆ ಅಥಣಿ ತಾಲೂಕಿನ ಹಲ್ಯಾಳ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ. ಅಥಣಿ ಪಟ್ಟಣದ ನಿವಾಸಿ ಸಾಗರ ರಾಜು ಹೊನಕಟ್ಟಿ (23) ನದಿ ಪಾಲಾದ ಯುವಕ.
ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಿದ್ದರಿಂದ ಅವಘಡ ಸಂಭವಿಸಿದೆ. ಅಗ್ನಿಶಾಮಕದಳ, ಪೊಲೀಸರಿಂದ ನದಿಯಲ್ಲಿ ಯುವಕನ ಶೋಧ ಕಾರ್ಯ ನಡೆಯುತ್ತಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಾಲಾ ಮಕ್ಕಳಿದ್ದ ಆಟೋ ಪಲ್ಟಿಯಾಗಿ ಚಾಲಕ ಸೇರಿ ನಾಲ್ವರಿಗೆ ಗಾಯ ಯಾದಗಿರಿ ಹೊರವಲಯದ ವಡಗೇರ ಕ್ರಾಸ್ ಬಳಿ ಶಾಲಾ ಮಕ್ಕಳಿದ್ದ ಆಟೋ ಪಲ್ಟಿಯಾಗಿ ಚಾಲಕ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಗಾಯಾಳು ಮೂವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಡಗೇರ ತಾಲೂಕಿನ ಗುರಸಣಗಿ ಗ್ರಾಮದ ವಿದ್ಯಾರ್ಥಿಗಳು ಆಟೋದಲ್ಲಿ ಅಜೀಮ್ ಪ್ರೇಮ್ ಜೀ ಶಾಲೆಗೆ ಹೋಗುತ್ತಿದ್ದರು.
ಈ ವೇಳೆ ನಾಯಿಗಳು ಅಡ್ಡ ಬಂದಿದ್ದಕ್ಕೆ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಗಾಯಗೊಂಡ ಅನಿಲ್, ರುಕ್ಸಾನಾ, ಶೋಭಾಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Fri, 26 August 22