SSLCಯಂತೆ ಫೈನಲ್ ಇಯರ್ ಡಿಗ್ರಿ ವಿದ್ಯಾರ್ಥಿಗಳಿಗೆ ಒಂದೇ ತಿಂಗಳಲ್ಲೇ ಮರು ಪರೀಕ್ಷೆ ಕೊಡಿ, ದಾವಣಗೆರೆಯಲ್ಲಿ NSUI ಪ್ರತಿಭಟನೆ
ಎಸ್ಎಸ್ಎಲ್ಸಿ ಮಾದರಿಯಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಬಳಿಕ ಒಂದು ತಿಂಗಳಲ್ಲಿ ಮರು ಪರೀಕ್ಷೆ ನಡೆಸಬೇಕು. ಐದು ಮತ್ತು ಆರನೇ ಸೆಮ್ ವಿದ್ಯಾರ್ಥಿಗಳು ಅನುತ್ತೀರ್ಣರಾದ್ರೆ ಒಂದು ತಿಂಗಳಲ್ಲಿ ಮರು ಪರೀಕ್ಷೆ ನಡೆಸಬೇಕು. ಇಲ್ಲವಾದ್ರೆ ಒಂದು ವರ್ಷ ಹಾಳಾಗಲಿದೆ. ಈ ಬಗ್ಗೆ ವಿಶ್ವವಿದ್ಯಾಲಯಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ಗೆ ಎನ್ಎಸ್ಯುಐ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.
ದಾವಣಗೆರೆ, ಸೆ.09: ಫೈನಲ್ ಇಯರ್ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅವರಿಗೆ ಮರು ಪರೀಕ್ಷೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಅಂತಿಮ ವರ್ಷದ ಡಿಗ್ರಿ ಓದುತ್ತಿದ್ದ ವಿದ್ಯಾರ್ಥಿಗಳು ಫೇಲ್ ಆದರೆ ಅವರಿಗೆ ಕೇವಲ ಒಂದು ತಿಂಗಳಲ್ಲೇ ಮರು ಪರೀಕ್ಷೆ ನೀಡಬೇಕು ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಎನ್ಎಸ್ಯುಐ(NSUI) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ವಿವಿ(Davangere University) ಸೇರಿದಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಬೇಡಿಕೆ ಇದೆ. ಎಸ್ಎಸ್ಎಲ್ಸಿ ಮಾದರಿಯಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಬಳಿಕ ಒಂದು ತಿಂಗಳಲ್ಲಿ ಮರು ಪರೀಕ್ಷೆ ನಡೆಸಬೇಕು. ಐದು ಮತ್ತು ಆರನೇ ಸೆಮ್ ವಿದ್ಯಾರ್ಥಿಗಳು ಅನುತ್ತೀರ್ಣರಾದ್ರೆ ಒಂದು ತಿಂಗಳಲ್ಲಿ ಮರು ಪರೀಕ್ಷೆ ನಡೆಸಬೇಕು. ಇಲ್ಲವಾದ್ರೆ ಒಂದು ವರ್ಷ ಹಾಳಾಗಲಿದೆ. ಈ ಬಗ್ಗೆ ವಿಶ್ವವಿದ್ಯಾಲಯಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ಗೆ ಎನ್ಎಸ್ಯುಐ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.
ಪದವಿ ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗಾಗಿ ಮರು ಪರೀಕ್ಷೆ ನಡೆಯಬೇಕು. ಅದು ಐದನೇ ಹಾಗೂ ಆರನೇ ಸೆಮ್ ನಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಒಂದು ತಿಂಗಳಲ್ಲಿ ಮರು ಪರೀಕ್ಷೆ ನಡೆಬೇಕು. ಈಗಾಗಲೇ ಎಸ್ಎಸ್ಎಲ್ಸಿಯಲ್ಲಿ ಈ ಪದ್ದತಿ ಇದೆ. ಇದನ್ನ ಪದವಿ ವಿದ್ಯಾರ್ಥಿಗಳಿಗೆ ತರಬೇತು. ಇಂತಹ ಪದ್ದತಿ ಬಂದ್ರೆ ಫೈನಲ್ ಇಯರ್ ನಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಮರು ಪರೀಕ್ಷೆಯಲ್ಲಿ ಪಾಸ್ ಆಗಬಹುದು. ಹೀಗೆಂದು ಆಗ್ರಹಿಸಿ ಎನ್ಎಸ್ಯುಐ ಹೋರಾಟ ಆರಂಭಿಸಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಪ್ರತಿಭಟನೆ ನಡೆಸಿದ ಎನ್ಎಸ್ಯುಐ ಸಂಘಟನೆ ಕಾರ್ಯಕರ್ತರು. ನಾವು ಪದವಿ ಮೊದಲ ಹಾಗೂ ಎರಡನೇ ವರ್ಷದಲ್ಲಿ ಇಂತಹ ಪರೀಕ್ಷೆ ಮಾಡಬೇಡಿ. ಆದ್ರೆ ಅಂತಿಮ ವರ್ಷದಲ್ಲಿ ಎಲ್ಲ ವಿಷಯಗಳಲ್ಲಿ ಪಾಸ್ ಆಗಿ ಒಂದು ಎರಡು ವಿಷಯಗಳಲ್ಲಿ ಪೇಲ್ ಆಗಿರುತ್ತಾರೆ ಹೀಗೆ ಪೇಲ್ ಆದವರ ಅನುಕೂಲಕ್ಕಾಗಿ ಅಂತಿಮ ವರ್ಷದ ಫಲಿತಾಂಶ ಬಂದ ಒಂದೇ ತಿಂಗಳಲ್ಲಿ ಮರು ಪರೀಕ್ಷೆ ನಡೆಸಬೇಕು.
ಇಂತಹ ಮರು ಪರೀಕ್ಷೆಗಳು ಐದನೇ ಹಾಗೂ ಆರನೇ ಸೆಮಿಷ್ಟರ್ ವಿದ್ಯಾರ್ಥಿಗಳಿಗಾಗಿ ನಡೆಯಬೇಕು. ಈ ಕುರಿತು ಟಿವಿ9 ಗೆ ಮಾತನಾಡಿದ ಎನ್ಎಸ್ ಯುಐ ಜಿಲ್ಲಾ ಉಪಾಧ್ಯಕ್ಷ ಜಿ.ವಿ. ರುದ್ರೇಶ್, ಹೀಗೆ ಮರು ಪರೀಕ್ಷೆ ಮಾಡದ ಪರಿಣಾಮ ಸಾವಿರಾರು ವಿದ್ಯಾರ್ಥಿಗಳು ಇಡೀ ಒಂದು ವರ್ಷಗಳ ಕಾಲ ಕಾಯ್ದು ಕುಳಿತುಕೊಳ್ಳಬೇಕು. ದಾವಣಗೆರೆ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಬಹುತೇಕ ವಿವಿಗಳಲ್ಲಿ ಇಂತಹ ಚಿಂತನೆ ಇದೆ. ಆದ್ರೆ ಯಾರು ಕೂಡಾ ಜಾರಿಗೆ ತರುತ್ತಿಲ್ಲ. ಇಂತಹ ಮರುಪರೀಕ್ಷೆ ಪದ್ದತಿ ಜಾರಿಗೆ ತಂದ್ರೆ ಸೂಕ್ತ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಮೂಲಗಳ ಪ್ರಕಾರ ದಾವಣಗೆರೆ ವಿವಿ ಒಂದರಿಂದಲೇ ಐದನೇ ಹಾಗೂ ಆರನೇ ಸೆಮ್ನಲ್ಲಿ ಒಂದು ಎರಡು ವಿಷಯಗಳಲ್ಲಿ ಫೇಲ್ ಆದ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇವರು ಮತ್ತೆ ಪರೀಕ್ಷೆ ಬರೆಯಲು ಮುಂದಿನ ವರ್ಷದ ಪರೀಕ್ಷೆಯ ವರೆಗೂ ಕಾಯ್ದು ಕುಳಿತುಕೊಳ್ಳಬೇಕು. ಇದರಿಂದ ವಿವಿಗಳು ವಿದ್ಯಾರ್ಥಿಗಳ ಒಂದು ವರ್ಷವನ್ನ ಹಾಳು ಮಾಡುತ್ತಿವೆ. ತಕ್ಷಣಕ್ಕೆ ಮರು ಪರೀಕ್ಷೆ ಪದ್ದತಿ ಜಾರಿಗೆ ತರಬೇಕಾಗಿದೆ ಎಂದರು.
ಇದನ್ನೂ ಓದಿ: ಕರ್ನಾಟಕ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ; ತಜ್ಞರು ಹೇಳುವುದೇನು?
SSLC-PUC ವಿದ್ಯಾರ್ಥಿಗಳಿಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ
ಶಿಕ್ಷಕರ ದಿನಾಚರಣೆ ದಿನವೇ ಸರ್ಕಾರ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ. 2023-24ನೇ ಶೈಕ್ಷಣಿಕ ಸಾಲಿನಿಂದ SSLC, 2nd PUC ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದುವರೆಗೆ ವರ್ಷಕ್ಕೆ 2 ಪರೀಕ್ಷೆ ಮಾತ್ರ ನಡೆಸುತ್ತಿದ್ದ ಶಿಕ್ಷಣ ಇಲಾಖೆ ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ. ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನಧಾರಣೆ ವೃದ್ಧಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ದ್ವಿತೀಯ ಪಿಯುಸಿ, SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಗಳಿಸಿದ ಅಂಕ ತೃಪ್ತಿದಾಯಕ ಅಲ್ಲ ಅಂದ್ರೆ ಬದಲಾವಣೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಅಷ್ಟೇ ಅಲ್ಲದೇ ಮೊದಲ ಪರೀಕ್ಷೆಯಲ್ಲಿ ಮಕ್ಕಳು ಫೇಲ್ ಆದ್ರೂ ಮುಂದಿನ ಎರಡು ಪರೀಕ್ಷೆಯಲ್ಲಿ ಪಾಸ್ ಆಗಲು ಎರಡು ಪರೀಕ್ಷೆಗಳ ಅವಕಾಶ ನೀಡಲಾಗಿದೆ. ಅಂದ್ರೆ ವಾರ್ಷಿಕ ಪರೀಕ್ಷೆ ಮೂರು ಸಲ ಬರೆಯಲು ಅನುಮತಿ ನೀಡಲಾಗಿದೆ. ಇಷ್ಟು ಭಾರಿ ಒಂದು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಅಂದ್ರೆ ಪೂರಕ ಪರೀಕ್ಷೆ ಬರೆಯುವ ಅವಕಾಶ ಇತ್ತು. ಆದ್ರೆ ಈ ಪ್ರಸಕ್ತ ವರ್ಷದಿಂದ SSLC ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಎರಡು ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ಇದೆ. ಆದ್ರೆ ಈ ಪರೀಕ್ಷೆಯನ್ನ ಪೂರಕ ಪರೀಕ್ಷೆ ಅಂತಾ ಉಲ್ಲೇಖ ಮಾಡಲಾಗದೇ ಮುಖ್ಯ ಪರೀಕ್ಷೆ ಅಂತಲೇ ಪರಿಗಣಿಸಲು ಮುಂದಾಗಿದೆ.
ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:52 am, Sat, 9 September 23