ಮಹಿಳೆ ಮನೆಗೆ ಹೋಗಿ ಬಂದಿದ್ದಕ್ಕೆ ಅನುಮಾನ; ಬೇಸರಗೊಂಡ ಯುವಕ ವಿಡಿಯೋ ಮಾಡಿಟ್ಟು ನೇಣಿಗೆ ಶರಣು

ಹಾಲಿನ ಡೈರಿ ಸಿದ್ದಪ್ಪ ಗ್ರಾಮದ ಮಹಿಳೆಯೊಬ್ಬಳ ಜೊತೆ ಅನೈತಿಕ‌ ಸಂಬಂಧ ಹೊಂದಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ಮಹಿಳೆ ಮನೆಗೆ ಯುವರಾಜ್ ಹೋಗಿದ್ದಕ್ಕೆ ಯುವರಾಜ್ ಮತ್ತು ಸಿದ್ದಪ್ಪನ ನಡುವೆ ಘರ್ಷಣೆಯಾಗಿದೆ.

ಮಹಿಳೆ ಮನೆಗೆ ಹೋಗಿ ಬಂದಿದ್ದಕ್ಕೆ ಅನುಮಾನ; ಬೇಸರಗೊಂಡ ಯುವಕ ವಿಡಿಯೋ ಮಾಡಿಟ್ಟು ನೇಣಿಗೆ ಶರಣು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Feb 27, 2022 | 11:23 AM

ದಾವಣಗೆರೆ: ಮೊಬೈಲ್‌ನಲ್ಲಿ ಆಡಿಯೋ ಹಾಗೂ ವಿಡಿಯೋ ಮಾಡಿಟ್ಟು ಯುವಕ ನೇಣಿಗೆ ಶರಣಾದ(Suicide) ಘಟನೆ ದಾವಣಗೆರೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಯುವರಾಜ (26) ನೇಣಿಗೆ ಶರಣಾದ ಯುವಕ. ಕೆಲವು ದಿನಗಳ ಹಿಂದೆ ಯುವರಾಜ್‌, ಗ್ರಾಮದ ಮಹಿಳೆಯೊಬ್ಬಳ ಮನೆಗೆ ಹೋಗಿದ್ದ. ಮಹಿಳೆಯ ಮನೆಗೆ ಹೋದ ವಿಚಾರವಾಗಿ ಪವಾಡ ರಂಗವ್ವನಹಳ್ಳಿ ನಿವಾಸಿ ಹಾಲಿನ ಡೈರಿ ಸಿದ್ದಪ್ಪ ಮೂಗು ತೂರಿಸಿದ್ದ. ಸಿದ್ದಪ್ಪ ಮಹಿಳೆಯ ಮನೆಗೆ ಹೋಗಿ ಗಲಾಟೆ ಮಾಡಿ ಹೊಡೆದಿದ್ದಕ್ಕೆ ಬೇಸರಗೊಂಡ ಯುವರಾಜ. ತನ್ನ ಸಾವಿಗೆ ಹಾಲಿನ ಡೈರಿ ಸಿದ್ದಪ್ಪ ಕಾರಣ ಎಂದು ಮೊಬೈಲ್‌ನಲ್ಲಿ ಆಡಿಯೋ, ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅನೈತಿಕ ಸಂಬಂಧದ ಹಿನ್ನೆಲೆ ಘರ್ಷಣೆ ಶಂಕೆ ಹಾಲಿನ ಡೈರಿ ಸಿದ್ದಪ್ಪ ಗ್ರಾಮದ ಮಹಿಳೆಯೊಬ್ಬಳ ಜೊತೆ ಅನೈತಿಕ‌ ಸಂಬಂಧ ಹೊಂದಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ಮಹಿಳೆ ಮನೆಗೆ ಯುವರಾಜ್ ಹೋಗಿದ್ದಕ್ಕೆ ಯುವರಾಜ್ ಮತ್ತು ಸಿದ್ದಪ್ಪನ ನಡುವೆ ಘರ್ಷಣೆಯಾಗಿದೆ. ಸಿದ್ದಪ್ಪ, ಮಹಿಳೆ ಮನೆಗೆ ಹೋಗಿ ಯುವಕ ಯುವರಾಜ್ ಏಕೆ ಬಂದಿದ್ದ ಎಂದು ಅನುಮಾನ ಹೊರ ಹಾಕಿದ್ದಾನೆ. ಅಲ್ಲದೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಮನನೊಂದ ಯುವಕ ಯುವರಾಜ್ ವಿಡಿಯೋ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಆರೋಪಿ ಸಿದ್ದಪ್ಪ ತಲೆ ಮರೆಸಿಕೊಂಡಿದ್ದಾನೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಭೀಕರ ಅಪಘಾತ; ಕಾರು ಬೈಕ್ ಮಧ್ಯೆ ಡಿಕ್ಕಿ, ಇಬ್ಬರು ಸವಾರರು ದುರ್ಮರಣ

Mann ki Baat ದೇಶವನ್ನುದ್ದೇಶಿಸಿ ಮೋದಿ ಮನದ ಮಾತು; ಮಾತೃಭಾಷೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ