AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MM Kalburgi: ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ -ಧಾರವಾಡ ಕೋರ್ಟ್​​ನಲ್ಲಿ ಇಬ್ಬರು ಸಾಕ್ಷಿಗಳ ವಿಚಾರಣೆ

ಧಾರವಾಡದಲ್ಲಿ ಸಂಶೋಧಕ ಕಲಬುರ್ಗಿ ಅವರ ಹತ್ಯೆ ನಡೆದ ದಿನ ಅವರ ಪುತ್ರಿ ರೂಪದರ್ಶಿ ಅವರು ಮನೆಯಲ್ಲಿಯೇ ಇದ್ದರು. ವಿಚಾರಣೆ ವೇಳೆ ಕಣ್ಣೀರಿಡುತ್ತ ಆರೋಪಿಗಳನ್ನ ಗುರುತಿಸಿದರು. ಆರೋಪಿ ಹುಬ್ಬಳ್ಳಿಯ ಗಣೇಶ್​ ಮಿಸ್ಕಿನ್ ನನ್ನು ರೂಪದರ್ಶಿ ಗುರುತಿಸಿದರು.

MM Kalburgi: ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣ -ಧಾರವಾಡ ಕೋರ್ಟ್​​ನಲ್ಲಿ ಇಬ್ಬರು ಸಾಕ್ಷಿಗಳ ವಿಚಾರಣೆ
ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ವಿಚಾರಣೆ: ಇಬ್ಬರು ಸಾಕ್ಷಿಗಳ ವಿಚಾರಣೆ
TV9 Web
| Edited By: |

Updated on:Mar 17, 2022 | 6:00 PM

Share

ಧಾರವಾಡ: ಸ್ಥಳೀಯ ನಿವಾಸಿಯಾಗಿದ್ದ ಹಿರಿಯ ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ (MM Kalburgi murder case) ವಿಚಾರಣೆಯು ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಕೋರ್ಟ್​ನಲ್ಲಿ ಆರಂಭವಾಗಿದೆ. ಐವರು ಆರೋಪಿಗಳನ್ನು ಹಾಜರುಪಡಿಸಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿದೆ. ಧಾರವಾಡದಲ್ಲಿ ಸಂಶೋಧಕ ಕಲಬುರ್ಗಿ ಅವರ ಹತ್ಯೆ ನಡೆದ ದಿನ ಅವರ ಪುತ್ರಿ ರೂಪದರ್ಶಿ ಅವರು ಮನೆಯಲ್ಲಿಯೇ ಇದ್ದರು. ವಿಚಾರಣೆ ವೇಳೆ ಕಣ್ಣೀರಿಡುತ್ತ ಆರೋಪಿಗಳನ್ನ ಗುರುತಿಸಿದರು. ಆರೋಪಿ ಹುಬ್ಬಳ್ಳಿಯ ಗಣೇಶ್​ ಮಿಸ್ಕಿನ್ ನನ್ನು ರೂಪದರ್ಶಿ ಗುರುತಿಸಿದರು. ಹತ್ಯೆ ಪ್ರಕರಣದಲ್ಲಿ ಮಿಸ್ಕಿನ್ ಈಗಾಗಲೇ ಜೈಲಿನಲ್ಲಿದ್ದಾನೆ. ಕೋರ್ಟ್‌ನಲ್ಲಿ ಭಾವುಕಳಾದ ಕಲಬುರ್ಗಿ ಪುತ್ರಿ ಹತ್ಯೆಗೀಡಾದ ತಮ್ಮ ತಂದೆಯನ್ನು ನೆನೆದು ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದರು. ಹತ್ಯೆ ನಡೆದ ದಿನದ ಮಾಹಿತಿ ನೀಡಿದರು. ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರ ವಿಚಾರಣೆಯೂ ಇಂದು ನಡೆಯಿತು.

ವಿಚಾರಣೆಗಾಗಿ ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಏಕಕಾಲಕ್ಕೆ ಕ್ರಾಸ್ ಎಕ್ಸಾಮಿನೇಶನ್ ಮಾಡಲು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಧಾರವಾಡ ಕಲ್ಯಾಣ ನಗರ ನಿವಾಸದಲ್ಲಿ 2015ರ ಆಗಸ್ಟ್ 30ರಂದು ಡಾ ಎಂ ಎಂ ಕಲಬುರಗಿ ಅವರನ್ನು ದುಷ್ಕರ್ಮಿಗಳು ಹಣೆಗೆ ಗುಂಡಿಟ್ಟು ಕೊಲೆ ಮಾಡಿದ್ದರು. ಇಂದಿನ ವಿಚಾರಣೆ ಬಳಿಕ ನ್ಯಾಯಾಲಯವು ಕಲಬುರ್ಗಿ ಹತ್ಯೆ ಕೇಸ್ ವಿಚಾರಣೆಯನ್ನು ಏಪ್ರಿಲ್‌ 5ಕ್ಕೆ ಮುಂದೂಡಿತು.

ಹತ್ಯೆಗೀಡಾದ ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಮತ್ತು ಕಲಬುರ್ಗಿ ಪುತ್ರಿ ರೂಪದರ್ಶಿ ಇಂದು ಕೋರ್ಟ್​ಗೆ ಹಾಜರಾಗಿದ್ದರು. ಇಂದಿನ ವಿಚಾರಣೆಯಲ್ಲಿ ಸಾಕ್ಷ್ಯಗಳಿಂದ ಮಾಹಿತಿ ಪಡೆಯಲಾಯಿತು. ಪ್ರಕರಣದ ಐದೂ ಆರೋಪಿಗಳನ್ನು ಸಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಗಣೇಶ ಮಿಸ್ಕಿನ್, ಅಮೂಲ್ ಕಾಳೆ, ಅಮಿತ್ ಬದ್ದಿ, ವಾಸುದೇವ ಸೂರ್ಯವಂಶಿ ಮತ್ತು ಪ್ರವೀಣ ಚತುರ – ಇವರೇ ಪಂಚ ಆರೋಪಿಗಳು.

Also Read: ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ IAS ಅಧಿಕಾರಿ, ನಾರ್ಮಲ್ ಡೆಲಿವರಿ ಮೂಲಕ ಹೆಣ್ಣು ಮಗುವಿಗೆ ಜನ್ಮ

Also Read: ಕಾಗವಾಡದಲ್ಲಿ 3 ತಿಂಗಳಿಂದ ರೈತರ ಪಂಪ್ ಸೆಟ್ ಕೇಬಲ್ ಕಳ್ಳತನವಾಗ್ತಿದೆ, ಇದು ಸ್ಥಳೀಯ ಪೊಲೀಸರ ವೈಫಲ್ಯ – ಮಾಜಿ ಶಾಸಕ ರಾಜು ಕಾಗೆ ಗರಂ

Published On - 5:53 pm, Thu, 17 March 22