AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವೃದ್ಧೆಯಿಂದ 24 ಕೋಟಿ ರೂ. ಸುಲಿಗೆ: ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ

ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧೆಯೊಬ್ಬರಿಂದ ಕೋಟಿ ಕೋಟಿ ರೂ. ಸುಲಿಗೆ ಮಾಡಿದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ಈ ಬೃಹತ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಹಣ ವರ್ಗಾವಣೆ ಹೆಸರಲ್ಲಿ ಭಯ ಹುಟ್ಟಿಸಿದ್ದ ಖದೀಮರು, ಕಳೆದ ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 24 ಕೋಟಿ ರೂಪಾಯಿ ಹಣವನ್ನು ಅವರಿಂದ ಪೀಕಿದ್ದಾರೆ.

ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವೃದ್ಧೆಯಿಂದ 24 ಕೋಟಿ ರೂ. ಸುಲಿಗೆ: ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ
ಸಾಂದರ್ಭಿಕ ಚಿತ್ರImage Credit source: AI Image
ಶಿವಪ್ರಸಾದ್​ ಬಿ.
| Edited By: |

Updated on:May 24, 2026 | 11:26 AM

Share

ಬೆಂಗಳೂರು, ಮೇ 24: ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ವೃದ್ಧೆಯೋರ್ವರಿಂದ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಖದೀಮರ ಹಣದ ದಾಹಕ್ಕೆ ತನ್ನ ಬಳಿ ಇದ್ದ ಬಂಗಾರದ ಒಡವೆಗಳನ್ನು ಬ್ಯಾಂಕ್​​ನಲ್ಲಿ ಅಡ ಇಡಲು ಬಂದು ವೃದ್ಧೆ ಬಚಾವ್​​ ಆಗಿದ್ದು, ಕಳೆದ ಜನವರಿಯಿಂದಲೇ ಆರೋಪಿಗಳು ಹಣ ವಸೂಲಿಗೆ ಇಳಿದಿದ್ದರು ಎಂಬುದು ಗೊತ್ತಾಗಿದೆ. ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಆಕೆ ಹೆಚ್ಚಿನ ಹಣ ಕಳೆದುಕೊಳ್ಳುವುದು ತಪ್ಪಿದೆ.

ಮುಖ್ಯಾಂಶಗಳು

  • ರಾಜ್ಯದಲ್ಲಿ ಮತ್ತೊಂದು ಡಿಜಿಟಲ್​​ ಅರೆಸ್ಟ್​​ ಪ್ರಕರಣ ಬಯಲು
  • ವೃದ್ಧೆಯಿಂದ ಕೋಟಿ ಕೋಟಿ ಸುಲಿಗೆ ಮಾಡಿರುವ ಖದೀಮರು
  • ಬ್ಯಾಂಕ್​​ ಮ್ಯಾನೇಜರ್​​ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ

ಶಿವಾಜಿನಗರ ನಿವಾಸಿಯಾಗಿರುವ ವೃದ್ಧೆ ಲಕ್ಷ್ಮೀ ಎಂಬವರಿಗೆ ಪ್ರಾಪರ್ಟಿ ಮಾರಿದ್ದರಿಂದ ಕೋಟ್ಯಾಂತರ ರೂಪಾಯಿ ಹಣ ಬಂದಿತ್ತು. ಇವರ ಬ್ಯಾಂಕ್​​ ವಹಿವಾಟು ಮಾಹಿತಿ ಪಡೆದ ಆರೋಪಿಗಳು ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ ಅವರನ್ನು ಬೆದರಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಹೆಸರಲ್ಲಿ ಲಕ್ಷ್ಮೀ ಅವರಿಗೆ ಭಯ ಹುಟ್ಟಿಸಿದ್ದ ಖದೀಮರು, ಕಳೆದ ಜನವರಿಯಿಂದ ಮೇ ತಿಂಗಳವರೆಗೆ ಒಟ್ಟು 24 ಕೋಟಿ ರೂಪಾಯಿ ಹಣವನ್ನು ಅವರಿಂದ ಪೀಕಿದ್ದಾರೆ. ಹೀಗಿದ್ದರೂ ಇವರ ಹಣದಾಹ ಮಾತ್ರ ತೀರಿರಲಿಲ್ಲ. ಹೀಗಾಗಿ ಮನೆಯಲ್ಲಿದ್ದ 1 ಕೆಜಿ 300 ಗ್ರಾಂ ಚಿನ್ನವನ್ನ ಅಡಿಟ್ಟು ಹಣ ಪಡೆಯಲು ಲಕ್ಷೀ ಬ್ಯಾಂಕ್​​ಗೆ ತೆರಳಿದ್ದರು. ಇದನ್ನು ಗಮನಿಸಿದ ಬ್ರಾಂಚ್ ಮ್ಯಾನೇಜರ್​​, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ; 35 ಲಕ್ಷ ಮೌಲ್ಯದ ಟ್ಯಾಂಕರ್ ಜಪ್ತಿ, ಓರ್ವನ ಬಂಧನ!

ಇನ್ನು ಕೂಡಲೇ ಬ್ಯಾಂಕ್​​ಗೆ ಬಂದ ಸಿಸಿಬಿ ಸೈಬರ್​​ ಪೊಲೀಸರು, ಲಕ್ಷ್ಮೀ ಅವರನ್ನು ಈ ಸಂಬಂಧ ವಿಚಾರಿಸಿದ್ದಾರೆ. ಆದರೆ ಆರಂಭದಲ್ಲಿ ಏನನ್ನೂ ಅವರು ಬಾಯು ಬಿಟ್ಟಿರಲಿಲ್ಲ. ಹೀಗಾಗಿ ತಮ್ಮದೇ ಸ್ಟೈಲ್​​ನಲ್ಲಿ ಪೊಲೀಸರು ಕೇಳಿದಾಗ ಡಿಜಿಟಲ್​​ ಅರೆಸ್ಟ್​​ ಸತ್ಯ ಹೊರಬಂದಿದೆ. ಕೂಡಲೇ ಸಂತ್ರಸ್ತೆಯಿಂದ ದೂರು ಪಡೆದಿರುವ ಪೊಲೀಸರು, ವಿದೇಶದಲ್ಲಿರುವ ಅವರ ಮಕ್ಕಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪ್ರಕರಣ ಸಂಬಂಧ ತನಿಖೆಗಿಳಿದ ಖಾಕಿ ಮುಂಬೈ ,ಅಲಹಬಾದ್, ದೆಹಲಿ ಮೂಲದ ಆರೋಪಿಗನ್ನು ಹೆಡೆಮುರಿ ಕಟ್ಟಿದೆ. ಗೌರವ್ ಕುಮಾರ್ , ಓಂ ಪ್ರಕಾಶ್ ರಾಜ್ ಪುತ್ ಸೇರಿದಂತೆ ಐವರನ್ನು ಅರೆಸ್ಟ್ ಮಾಡಲಾಗಿದೆ. ಸುಲಿಗೆ ಮಾಡಿದ್ದ ಹಣವನ್ನು ಆರೋಪಿಗಳು ಒಟ್ಟು 22 ಖಾತೆಗಳಿಗೆ ವರ್ಗಾಯಿಸಿದ್ದು, 60 ಲಕ್ಷ ಹಣ ಇರುವ ಅಕೌಂಟ್​​ನ ಪೊಲೀಸರು ಸೀಜ್​​ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:25 am, Sun, 24 May 26

Follow Us
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ