ಲಾಕ್‌ಡೌನ್ 4.Oನಲ್ಲಿ ಹಾರುತ್ವಾ ಲೋಹದ ಹಕ್ಕಿಗಳು? KIALನಲ್ಲಿ ಸಕಲ ಸಿದ್ಧತೆ..
ದೇವನಹಳ್ಳಿ: ಇಂದಿಗೆ 3ನೇ ಹಂತದ ಲಾಕ್‌ಡೌನ್ ಅಂತ್ಯ ಆಗಿ ನಾಳೆಯಿಂದ 4ನೇ ಹಂತದ ಲಾಕ್‌ಡೌನ್ ಶುರು ಆಗಲಿದೆ. ಈ ಹಿನ್ನೆಲೆಯಲ್ಲಿ ದೇಶೀಯ ವಿಮಾನ ಹಾರಾಟಕ್ಕೆ ಅನುಮತಿ ಸಿಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ದೇವನಹಳ್ಳಿ ಬಳಿಯಿರುವ KIALನಲ್ಲಿ ಸಾಮಾಜಿಕ ಅಂತರಕ್ಕೆ ಮಾರ್ಕಿಂಗ್ ಮಾಡಲಾಗುತ್ತಿದೆ. ಎಲ್ಲ ಟರ್ಮಿನಲ್‌ಗಳಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡುವ ಮಾಹಿತಿ ಫಲಕ ಅಳವಡಿಕೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ಲಾಕ್ಡೌನ್ನಿಂದ ಬಂದ್ ಆಗಿದ್ದ ವಿಮಾನ ನಿಲ್ದಾಣ ನಾಳೆಯಿಂದ ತನ್ನ ಕೆಲಸ ಪ್ರಾರಂಭಿಸುವ […]
ದೇವನಹಳ್ಳಿ: ಇಂದಿಗೆ 3ನೇ ಹಂತದ ಲಾಕ್‌ಡೌನ್ ಅಂತ್ಯ ಆಗಿ ನಾಳೆಯಿಂದ 4ನೇ ಹಂತದ ಲಾಕ್‌ಡೌನ್ ಶುರು ಆಗಲಿದೆ. ಈ ಹಿನ್ನೆಲೆಯಲ್ಲಿ ದೇಶೀಯ ವಿಮಾನ ಹಾರಾಟಕ್ಕೆ ಅನುಮತಿ ಸಿಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ದೇವನಹಳ್ಳಿ ಬಳಿಯಿರುವ KIALನಲ್ಲಿ ಸಾಮಾಜಿಕ ಅಂತರಕ್ಕೆ ಮಾರ್ಕಿಂಗ್ ಮಾಡಲಾಗುತ್ತಿದೆ.
ಎಲ್ಲ ಟರ್ಮಿನಲ್‌ಗಳಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡುವ ಮಾಹಿತಿ ಫಲಕ ಅಳವಡಿಕೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ಲಾಕ್ಡೌನ್ನಿಂದ ಬಂದ್ ಆಗಿದ್ದ ವಿಮಾನ ನಿಲ್ದಾಣ ನಾಳೆಯಿಂದ ತನ್ನ ಕೆಲಸ ಪ್ರಾರಂಭಿಸುವ ಸಾಧ್ಯತೆ ಹೆಚ್ಚಿದೆ. ಇಂದು ಬಿಡುಗಡೆಯಾಗಬಹುದಾದ ಮಾರ್ಗಸೂಚಿಯಲ್ಲಿ ದೇಶಿಯ ವಿಮಾನಗಳ ಹಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.
Published On - 8:48 am, Sun, 17 May 20