ವಿಚಾರಣೆಗಾಗಿ ಡಿಕೆಶಿ ಪುತ್ರಿ ಐಶ್ವರ್ಯಾಗೂ ಇ.ಡಿ ಬುಲಾವ್
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾಗೂ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದು, ಸೆಪ್ಟೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ತನ್ನ ಮಗಳ ಹೆಸರಲ್ಲಿ ಸುಮಾರು ಕೋಟಿ ಆಸ್ತಿ ಮಾಡಿಟ್ಟಿದ್ದಾರೆ. ಅಲ್ಲದೆ ಡಿಕೆಶಿ ಪುತ್ರಿಯ ಅಕೌಂಟ್ನಿಂದ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ. ಐಶ್ವರ್ಯಾ ಖಾತೆಯಿಂದ ಮೊದಲು ಕೆಫೆ ಕಾಫಿ ಡೇ ಮತ್ತು ಸೋಲ್ ಸ್ಪೇಸ್ ಕಂಪನಿಗೆ 20 ಕೋಟಿ ಹಣ ವರ್ಗಾವಣೆಯಾಗಿದೆ. ಬಳಿಕ ಕಾಫಿ […]
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾಗೂ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದು, ಸೆಪ್ಟೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ತನ್ನ ಮಗಳ ಹೆಸರಲ್ಲಿ ಸುಮಾರು ಕೋಟಿ ಆಸ್ತಿ ಮಾಡಿಟ್ಟಿದ್ದಾರೆ. ಅಲ್ಲದೆ ಡಿಕೆಶಿ ಪುತ್ರಿಯ ಅಕೌಂಟ್ನಿಂದ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ. ಐಶ್ವರ್ಯಾ ಖಾತೆಯಿಂದ ಮೊದಲು ಕೆಫೆ ಕಾಫಿ ಡೇ ಮತ್ತು ಸೋಲ್ ಸ್ಪೇಸ್ ಕಂಪನಿಗೆ 20 ಕೋಟಿ ಹಣ ವರ್ಗಾವಣೆಯಾಗಿದೆ. ಬಳಿಕ ಕಾಫಿ ಡೇ ಸಿದ್ಧಾರ್ಥರಿಂದ ಐಶ್ವರ್ಯಾ ಖಾತೆಗೆ 20 ಕೋಟಿ ರೂ. ಸಾಲ ನೀಡಲಾಗಿದೆ. ಉದ್ಯೋಗವೇ ಇಲ್ಲದ ಐಶ್ವರ್ಯಾ ಬಳಿ ಅಷ್ಟೊಂದ ಹಣ ಹೇಗೆ ಬಂತು ? ಎಂಬ ಹಲವು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಐಶ್ವರ್ಯಾರನ್ನು ಕೇಳಲಿದ್ದಾರೆ.
ಇನ್ನು ಇತ್ತೀಚೆಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಹ 20 ಕೋಟಿ ಹಣದ ವರ್ಗಾವಣೆ ಮುಚ್ಚಿಟ್ಟಿದ್ದ. ಆದರೆ ಈ ಹಣದ ದಾಖಲೆ ಸುಖಾಪುರಿ ಮನೆಯಲ್ಲಿ ಅಧಿಕಾರಿಗಳಿಗೆ ಸಿಕ್ಕಿತ್ತು. ಈ ಹಣ ವರ್ಗಾವಣೆಯೂ ಹಲವು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ಪುತ್ರಿ ಹೆಸರಲ್ಲಿ ಡಿಕೆ ಶಿವಕುಮಾರ್ ಹಣದ ವ್ಯವಹಾರ ಮಾಡಿದ್ರಾ ಎಂಬ ಅನುಮಾನ ಇಡಿ ಅಧಿಕಾರಿಗಳಿಗೆ ಕಾಡುತ್ತಿದ್ದೆ. ಹೀಗಾಗಿ ಸೆಪ್ಟಂಬರ್ 12ರಂದು ವಿಚಾರಣೆಗೆ ಹಾಜರಾಗಲು ಡಿಕೆಶಿ ಪುತ್ರಿ ಐಶ್ವರ್ಯಾಗೆ ಸಮನ್ಸ್ ನೀಡಿದ್ದಾರೆ.
Published On - 5:13 pm, Tue, 10 September 19