ಜಮೀನು ವಿವಾದ ಹಿನ್ನೆಲೆ ತಂದೆ-ಮಗನ ಭೀಕರ ಹತ್ಯೆ
ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ತಂದೆ-ಮಗನನ್ನು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ. ಕಲಘಟಗಿ ಪಿಎಲ್ಡಿ ಬ್ಯಾಂಕ್ ಸದಸ್ಯ ವೀರಭದ್ರಪ್ಪ ಸತ್ತೂರು(48), ಆತನ ಮಗ ರವಿ ಸತ್ತೂರ (20) ಹತ್ಯೆಗೀಡಾದವರು. ವೀರಭದ್ರಪ್ಪ ದೇವಿಲಿಂಗನಕೊಪ್ಪದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಆಗಿದ್ದರು. ಜಮ್ಮಿಹಾಳ ಗ್ರಾಮದ ಅಕ್ಕಿ ಕುಟುಂಬ ಹಾಗೂ ಸತ್ತೂರ ಕುಟುಂಬಗಳ ನಡುವೆ ಹಿಂದಿನಿಂದಲೂ ರಾಜಕೀಯ ವೈಷಮ್ಯವಿತ್ತು ಎನ್ನಲಾಗಿದೆ. ಜಮೀನಿನ ರಸ್ತೆಗಾಗಿ ಎರಡೂ ಕುಟುಂಬಗಳ ನಡುವೆ ಜಗಳವಾಗಿತ್ತು. ಅಕ್ಕಿ […]
ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ತಂದೆ-ಮಗನನ್ನು ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.
ಕಲಘಟಗಿ ಪಿಎಲ್ಡಿ ಬ್ಯಾಂಕ್ ಸದಸ್ಯ ವೀರಭದ್ರಪ್ಪ ಸತ್ತೂರು(48), ಆತನ ಮಗ ರವಿ ಸತ್ತೂರ (20) ಹತ್ಯೆಗೀಡಾದವರು. ವೀರಭದ್ರಪ್ಪ ದೇವಿಲಿಂಗನಕೊಪ್ಪದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಆಗಿದ್ದರು.
ಜಮ್ಮಿಹಾಳ ಗ್ರಾಮದ ಅಕ್ಕಿ ಕುಟುಂಬ ಹಾಗೂ ಸತ್ತೂರ ಕುಟುಂಬಗಳ ನಡುವೆ ಹಿಂದಿನಿಂದಲೂ ರಾಜಕೀಯ ವೈಷಮ್ಯವಿತ್ತು ಎನ್ನಲಾಗಿದೆ. ಜಮೀನಿನ ರಸ್ತೆಗಾಗಿ ಎರಡೂ ಕುಟುಂಬಗಳ ನಡುವೆ ಜಗಳವಾಗಿತ್ತು. ಅಕ್ಕಿ ಕುಟುಂಬವು ಸತ್ತೂರ ಕುಟುಂಬದ ತಂದೆ-ಮಗನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಹಾಕಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೀರಭದ್ರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಮಗ ರವಿಯನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ರವಿಯೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇನ್ನು ಈ ಘಟನೆ ಸಂಬಂಧ ಕಲಘಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Published On - 3:34 pm, Tue, 10 September 19