ಎಲ್ಲವೂ 10ನೇ ತಾರೀಕಿನ ನಂತರ ನೋಡ್ತಿರಿ: ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಚಲುವರಾಯಸ್ವಾಮಿ

ಹೆಚ್​ಡಿ ಕುಮಾರಸ್ವಾಮಿ ವಿರುದ್ಧದ ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಇನ್ನೊಂದಿಷ್ಟು ಪ್ರಕರಣಗಳು ಹೊರಬರುತ್ತವೆ. ಯಾರ ಯಾರ ಮೇಲೆ ಕೇಸ್ ಇದೆಯೋ ಅವರ ಪ್ರಕರಣ ಹೊರಬರುತ್ತವೆ. 10ನೇ ತಾರೀಕಿನ ನಂತರ ನೋಡ್ತಾ ಇರಿ ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ.

ಎಲ್ಲವೂ 10ನೇ ತಾರೀಕಿನ ನಂತರ ನೋಡ್ತಿರಿ: ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಚಲುವರಾಯಸ್ವಾಮಿ
ಎಲ್ಲವೂ 10ನೇ ತಾರೀಕಿನ ನಂತರ ನೋಡ್ತಿರಿ: ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಚಲುವರಾಯಸ್ವಾಮಿ
Follow us
ಗಂಗಾಧರ​ ಬ. ಸಾಬೋಜಿ
|

Updated on: Aug 08, 2024 | 6:31 PM

ಬೆಂಗಳೂರು, ಆಗಸ್ಟ್​ 08: ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ವಿರುದ್ಧ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy)  ಹೋದ ಕಡೆಗಳಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ನಾಯಕರು ಸಹ ಹೆಚ್​ಡಿಕೆ ವಿರುದ್ಧ ಹಿಂದಿನ ಪ್ರಕರಣಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಚಿವ ಎನ್.ಚಲುವರಾಯಸ್ವಾಮಿಯವರು ಎಲ್ಲವೂ 10ನೇ ತಾರೀಕಿನ ನಂತರ ನೋಡುತ್ತಿರಿ ಎಂದು ಹೊಸ ಬಾಂಬ್ ಸಿಡಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇನ್ನೊಂದು ವಾರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಎಲ್ಲರದ್ದು ಹೊರಬರಲಿದೆ

ಹೆಚ್​.ಡಿ.ಕು​​ಮಾರಸ್ವಾಮಿ ಮೇಲೆ ಇರುವ ಲೋಕಾಯುಕ್ತ ಪ್ರಕರಣ ವಿಚಾರವಾಗಿ ವಿಕಾಸಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಾಕಷ್ಟು ವಿಚಾರ ಇದೆ ಅಂತ ಖಾಸಗಿ ಚಾನಲ್​ನಲ್ಲಿ‌ ನೋಡಿದ್ದೇನೆ. ಇನ್ನೊಂದು ವಾರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಎಲ್ಲರದ್ದು ಹೊರಬರಲಿದೆ. ಕುಮಾರಸ್ವಾಮಿ ಮತ್ತು ವಿಜಯೇಂದ್ರ ಬಗ್ಗೆ ನಾವೇನು ತೆಗೆಯೋದಕ್ಕೆ‌ ಹೋಗಲ್ಲ. ಬಿಜೆಪಿಯವರು ಕುಮಾರಸ್ವಾಮಿ ಅವರನ್ನು ತೆಗೆಯುತ್ತಾರೆ ಪ್ರಕರಣ ಹೊರ ಬರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂಗೆ ಮತ್ತಷ್ಟು ಸಂಕಷ್ಟ ತಂದಿಟ್ಟ ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಕೋರ್ಟ್‌ಗೆ ದೂರು ದಾಖಲು!

ಡಿಕೆ ಶಿವಕುಮಾರ್​​ ಬಗ್ಗೆ ಮಾತನಾಡದಿದರೆ ಹೆಚ್​.ಡಿ.ಕುಮಾರಸ್ವಾಮಿಗೆ ನಿದ್ದೆ ಬರಲ್ಲ. ಮುಡಾದಲ್ಲಿ ಯಾವುದೇ ಹಗರಣ ನಡೆದಿಲ್ಲ. ರಾಜ್ಯಪಾಲ ಗೆಹ್ಲೋಟ್​ ನಿರ್ಧಾರದ ಮೇಲೆ ನಮಗೆ ನಿರೀಕ್ಷೆ ಇಲ್ಲ. ಶಿಕ್ಷೆ ಕೊಟ್ಟರೇ ಅಂದಿನ ಮುಡಾ ಅಧ್ಯಕ್ಷರ ಮೇಲೂ ಕ್ರಮ ಆಗಬೇಕು. ಬಿಜೆಪಿ-ಜೆಡಿಎಸ್​ ನಾಯಕರ ಪಾದಯಾತ್ರೆ ತಪ್ಪು ಅಂತ ಹೇಳುತ್ತಿಲ್ಲ. ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಸೌಲಭ್ಯಗಳು ರಾಜ್ಯಕ್ಕೆ ಬರ್ತಿಲ್ಲ. ಕೇಂದ್ರದ ಬಳಿ ಹೆಚ್​.ಡಿ.ಕುಮಾರಸ್ವಾಮಿ ಕೇಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಬೇರೆ ರೀತಿ ಸಂಪಾದನೆ ಮಾಡಿದ್ದರೆ ದಾಖಲೆ‌ ನೀಡಲಿ

ಹೆಚ್​ಡಿ ಕುಮಾರಸ್ವಾಮಿ ಡಿಕೆ ಶಿವಕುಮಾರ್​ ನಡುವೆ ಟಾಕ್ ವಾರ್ ವಿಚಾರವಾಗಿ ಮಾತನಾಡಿದ ಅವರು, ಅವರು ಬೇರೆ ರೀತಿ ಸಂಪಾದನೆ ಮಾಡಿದ್ದರೆ ಹೇಳಲಿ. ಅದರಲ್ಲಿ‌ ಏನಾದ್ರೂ ಬಿಟ್ಟು ಸಂಪಾದಿಸಿದ್ದರೆ ದಾಖಲೆ‌ ನೀಡಲಿ. ಅವರ ಕುಟುಂಬದ ಜವಾಬ್ದಾರಿ ಕುಮಾರಸ್ವಾಮಿ ತಾನೇ. ದೇವೇಗೌಡರು ಹೆಚ್ಚು ಮಾತಾಡಲ್ಲ. ಕುಮಾರಸ್ವಾಮಿ ಅವರೇ ಎಲ್ಲಾ ವಿಚಾರದಲ್ಲೂ ಮಾತಾಡ್ತಾರೆ ಅಲ್ವಾ. ಈಗ ಬೇರೆ ಕುಮಾರಸ್ವಾಮಿ ತೊಡೆ ತಟ್ಟುತ್ತಾರೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ಬಗ್ಗೆ ಲಘುವಾಗಿ‌ ಮಾತನಾಡುವುದು ಕುಮಾರಸ್ವಾಮಿ ಕೆಲಸ. ದೊಡ್ಡ ಖಾತೆ ಕೊಟ್ಟಿದ್ದಾರೆ, ಅದನ್ನ ನಿಭಾಯಿಸಲಿ. ಬಿಡಿದಿಯಿಂದ ರಾಮನಗರದವರೆಗೂ ಡಿಕೆ ಶಿವಕುಮಾರ್​ ಬೈಯ್ಯುತ್ತಾ ಹೊರಟಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​​ಗೆ ಕೋರ್ಟ್​ ಸಮನ್ಸ್

ಪಾದಯಾತ್ರೆ ಕಿತ್ತಾಟ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅವರಲ್ಲೇ ಕಿತ್ತಾಟ ಆಗುತ್ತಿದೆ. ಇಷ್ಟು ದಿನ ಕಿತ್ತಾಟ ಒಳಗೊಳಗೆ ಇತ್ತು. ಈಗ ಹೊರಗಡೆ ಬಂದಿದೆ. ಇದಕ್ಕೆ ವೇದಿಕೆ ಆಗುತ್ತಿದೆ ಎಂದು ಅವರನ್ನ ಕೇಳಬೇಕಿತ್ತು ನನಗೆ ಕೇಳಿದ್ದೀರಿ. ಪ್ರೀತಂಗೌಡ ವಿಚಾರದಲ್ಲೇ ದೆಹಲಿಯಲ್ಲಿ ಪಾದಯಾತ್ರೆಯಲ್ಲಿ ನಾವು ಭಾಗಿಯಾಗಲ್ಲ ಅಂತ ಹೇಳಿದ್ದರು. ಇದೊಂದು ವಿಚಾರ ಅಲ್ಲ, ಅನೇಕ ವಿಷಯ ಇವೆ. ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದಾರೆ. ಹತ್ತನೇ ದಿನಾಂಕದ ನಂತ್ರ ಎಲ್ಲವೂ ಹೊರಬರಲಿದೆ ಎಂದಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ