AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ವಿದೇಶಿ ವಲಸಿಗರ ಕೇಂದ್ರದಿಂದ ಮಹಿಳೆ ಪರಾರಿ; ಕಿಟಕಿ ಸರಳು ಕಟ್ ಮಾಡಿ ಎಸ್ಕೇಪ್

ತುಮಕೂರು ನಗರದ ದಿಬ್ಬೂರಿನಲ್ಲಿರುವ ವಿದೇಶಿ ವಲಸಿಗರ ಕೇಂದ್ರದಿಂದ ವಿದೇಶಿ ಮಹಿಳೆಯೊಬ್ಬರು ನಾಪತ್ತೆ ಆಗಿರುವಂತಹ ಘಟನೆ ನಡೆದಿದೆ. ಅಕ್ಟೋಬರ್​ 21ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತಾಗಿ ವಾರ್ಡನ್​​ ದೂರಿನ ಮೇರೆಗೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ವಿದೇಶಿ ವಲಸಿಗರ ಕೇಂದ್ರದಿಂದ ಮಹಿಳೆ ಪರಾರಿ; ಕಿಟಕಿ ಸರಳು ಕಟ್ ಮಾಡಿ ಎಸ್ಕೇಪ್
ಪ್ರಾತಿನಿಧಿಕ ಚಿತ್ರImage Credit source: Getty images
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ | Edited By: |

Updated on: Oct 24, 2026 | 3:01 PM

Share

ಮುಖ್ಯಾಂಶಗಳು

  • ವಿದೇಶಿ ವಲಸಿಗರ ಕೇಂದ್ರದಿಂದ ವಿದೇಶಿ ಮಹಿಳೆ ಎಸ್ಕೇಪ್
  • ತುಮಕೂರು ನಗರದ ದಿಬ್ಬೂರಿನ ಎಫ್​ಡಿಸಿ ಸೆಂಟರ್​ನಲ್ಲಿ ಘಟನೆ
  • ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು

ತುಮಕೂರು, ಅಕ್ಟೋಬರ್​​ 24: ವಿದೇಶಿ ವಲಸಿಗರ ಕೇಂದ್ರದಲ್ಲಿದ್ದ ಮಹಿಳೆಯೊಬ್ಬರು ನಾಪತ್ತೆ ಆಗಿರುವ ಆರೋಪ ಕೇಳಿಬಂದಿದೆ. ಅಡೆವೋಲೆ ಅನು ಅಲಿಯಾಸ್ ರೆಜಿನಾ ಜಾರ ಅಲಿಯಾಸ್​ ಆಯಿಶಾ ನಾಪತ್ತೆಯಾಗಿರುವ ವಿದೇಶಿ ಮಹಿಳೆ. ಮಹಿಳಾ ಕೊಠಡಿಯ ಕಿಟಕಿಯ ಕಬ್ಬಿಣದ ಸರಳುಗಳನ್ನ ಕತ್ತರಿಸಿ ಪಾರಾರಿ ಆಗಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ನಗರದ ದಿಬ್ಬೂರಿನ ಎಫ್​ಡಿಸಿಯಲ್ಲಿ ಅ.21ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?

ವಿದೇಶಿ ವಲಸಿಗರ ಕೇಂದ್ರದಲ್ಲಿ ಒಟ್ಟು 32 ಮಹಿಳೆಯರಿದ್ದಾರೆ. ಆದರೆ ಅಕ್ಟೋಬರ್​​ 21ರ ಬೆಳಿಗ್ಗೆ ಟೀ ಕುಡಿಯಲು 31 ಮಹಿಳೆಯರು ಮಾತ್ರ ಕೊಠಡಿಯಿಂದ ಹೊರಬಂದಿದ್ದರು. ಈ ವೇಳೆ ಅಡೆವೋಲೆ ಕಾಣದ ಹಿನ್ನಲೆ ಅಡುಗೆ ಸಿಬ್ಬಂದಿ ಅನುಮಾನಗೊಂಡಿದ್ದಾರೆ. ಕೂಡಲೇ ವಾರ್ಡನ್​​ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ‘3 ತಿಂಗಳಲ್ಲಿ ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಸಮಿತಿ ರಚಿಸಿ’: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ

ಇನ್ನು ಸ್ಥಳಕ್ಕೆ ಬಂದ ವಾರ್ಡನ್​ ಪರಿಶೀಲನೆ ಮಾಡಿದ್ದಾರೆ. ಇತರರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ರಾತ್ರಿ ಮಲಗುವಾಗ ಎಲ್ಲರ ಜೊತೆಗಿದ್ದ ವಿದೇಶಿ ಮಹಿಳೆ, ಮುಂಜಾನೆ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯೊಂದಿಗೆ ಮಹಿಳೆ ವಾಸವಾಗಿದ್ದ ಕೊಠಡಿ ಪರಿಶೀಲನೆ ಮಾಡಿದಾಗ ಒಂದು ಕ್ಷಣ ವಾರ್ಡನ್​​ ಶಾಕ್​ ಆಗಿದ್ದಾರೆ. ಕೊಠಡಿ ಕಿಟಕಿಯ ಕೆಳಭಾಗದ ಕಬ್ಬಿಣದ ಸರಳುಗಳು ಕಟ್ ಮಾಡಿರುವುದು ಪತ್ತೆ ಆಗಿದೆ. ಎಲ್ಲಾ ಕಡೆ ಹುಡುಕಾಡಿದರು ಸಹ ಪತ್ತೆಯಾಗಿಲ್ಲ.

LIVE TV

ತುಮಕೂರು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು 

ಎರಡು ಸರಳುಗಳನ್ನ ಕಟ್ ಮಾಡಿ ಮಹಿಳೆ ತಪ್ಪಿಸಿಕೊಂಡಿರುವ ಬಗ್ಗೆ ತುಮಕೂರು ನಗರ ಠಾಣೆಗೆ ವಾರ್ಡನ್​ ದೂರು ನೀಡಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿದೇಶಿ ಮಹಿಳೆ ಪಾರಾರಿ ಆಗಿರುವ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ಸೇರಿದಂತೆ ಬೆಂಗಳೂರಿನ ಎಫ್ಆರ್​ಆರ್​ಒ ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಆಸ್ಪತ್ರೆಗಳ ಅತಿಯಾದ ಬಿಲ್ಲಿಂಗ್, ಕಳ್ಳಾಟಕ್ಕೆ ಬ್ರೇಕ್
ಆಸ್ಪತ್ರೆಗಳ ಅತಿಯಾದ ಬಿಲ್ಲಿಂಗ್, ಕಳ್ಳಾಟಕ್ಕೆ ಬ್ರೇಕ್
ಹಾಸನಾಂಬ ಜಾತ್ರೆ: ಸ್ಥಳೀಯರಿಗೆ ಪ್ರತ್ಯೇಕ ಕ್ಯೂಗೆ ಶಾಸಕ ಸ್ವರೂಪ್ ಒತ್ತಾಯ
ಹಾಸನಾಂಬ ಜಾತ್ರೆ: ಸ್ಥಳೀಯರಿಗೆ ಪ್ರತ್ಯೇಕ ಕ್ಯೂಗೆ ಶಾಸಕ ಸ್ವರೂಪ್ ಒತ್ತಾಯ
ಸರ್ಕಾರವೇ ಅಧಿಕೃತ ಪ್ರೋಟೋಕಾಲ್ ರೂಪಿಸಬೇಕು
ಸರ್ಕಾರವೇ ಅಧಿಕೃತ ಪ್ರೋಟೋಕಾಲ್ ರೂಪಿಸಬೇಕು
ಚಾಮುಂಡಿ ಬೆಟ್ಟ ರಥೋತ್ಸವ: ರಥ ಎಳೆಯುವ ಮೂಲಕ ಯದುವೀರ್ ಒಡೆಯರ್ ಚಾಲನೆ
ಚಾಮುಂಡಿ ಬೆಟ್ಟ ರಥೋತ್ಸವ: ರಥ ಎಳೆಯುವ ಮೂಲಕ ಯದುವೀರ್ ಒಡೆಯರ್ ಚಾಲನೆ
ಈ ಬಾರಿ ಜಟ್ಟಿ ಕಾಳಗ ಸ್ಥಗಿತ ಆಗಿದ್ಯಾಕೆ? ರಾಜಮಾತೆ ಏನಂದ್ರು ನೋಡಿ
ಈ ಬಾರಿ ಜಟ್ಟಿ ಕಾಳಗ ಸ್ಥಗಿತ ಆಗಿದ್ಯಾಕೆ? ರಾಜಮಾತೆ ಏನಂದ್ರು ನೋಡಿ
ಬೆಂಗಳೂರು-ದೇವನಹಳ್ಳಿ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಕಿರಿಕಿರಿ
ಬೆಂಗಳೂರು-ದೇವನಹಳ್ಳಿ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಕಿರಿಕಿರಿ