AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನ್ನೊಂದು ವರ್ಷದಿಂದ ಕಿರಾತಕರನ್ನ ಬೇಟೆಯಾಡಿದ್ದ ಧೀರ ‘ಱಂಬೋ’ ಇನ್ನಿಲ್ಲ

ಗದಗ: ಆತ ನೂರಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಅವನನ್ನು ಕಂಡ್ರೆ ಸಾಕು ಕ್ರಿಮಿನಲ್​ಗಳು ಗಢಗಢ ನಡುಗುತ್ತಿದ್ದರು. ಸಾಹಸ ಮತ್ತು ಚಾಕಚಕ್ಯತೆಗೆ ಹೆಸರು ಮಾಡಿದ್ದ. ಆದ್ರೆ ಆತನನ್ನು ಕಳೆದುಕೊಂಡು ಆ ಜಿಲ್ಲೆಯ ಖಾಕಿ ಪಡೆ ದುಃಖದಲ್ಲಿದೆ. ಬಾರದ ಲೋಕಕ್ಕೆ ಪ್ರಯಾಣಿಸಿದ ಱಂಬೋ: ಅಂದಹಾಗೇ ಶ್ವಾನದ ಹೆಸರು ಱಂಬೋ. ಗದಗ ಜಿಲ್ಲೆ ಪೊಲೀಸ್ ಇಲಾಖೆಯ ಅಚ್ಚು ಮೆಚ್ಚಿನ ಶ್ವಾನ. ಆದ್ರೆ ಈ ಧೀರ ಇಂದು ನಮ್ಮ ಜೊತೆ ಇಲ್ಲ, ಹೃದಯಾಘಾತದಿಂದ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾನೆ. […]

ಹನ್ನೊಂದು ವರ್ಷದಿಂದ ಕಿರಾತಕರನ್ನ ಬೇಟೆಯಾಡಿದ್ದ ಧೀರ ‘ಱಂಬೋ’ ಇನ್ನಿಲ್ಲ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 03, 2020 | 2:10 PM

Share

ಗದಗ: ಆತ ನೂರಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಅವನನ್ನು ಕಂಡ್ರೆ ಸಾಕು ಕ್ರಿಮಿನಲ್​ಗಳು ಗಢಗಢ ನಡುಗುತ್ತಿದ್ದರು. ಸಾಹಸ ಮತ್ತು ಚಾಕಚಕ್ಯತೆಗೆ ಹೆಸರು ಮಾಡಿದ್ದ. ಆದ್ರೆ ಆತನನ್ನು ಕಳೆದುಕೊಂಡು ಆ ಜಿಲ್ಲೆಯ ಖಾಕಿ ಪಡೆ ದುಃಖದಲ್ಲಿದೆ.

ಬಾರದ ಲೋಕಕ್ಕೆ ಪ್ರಯಾಣಿಸಿದ ಱಂಬೋ: ಅಂದಹಾಗೇ ಶ್ವಾನದ ಹೆಸರು ಱಂಬೋ. ಗದಗ ಜಿಲ್ಲೆ ಪೊಲೀಸ್ ಇಲಾಖೆಯ ಅಚ್ಚು ಮೆಚ್ಚಿನ ಶ್ವಾನ. ಆದ್ರೆ ಈ ಧೀರ ಇಂದು ನಮ್ಮ ಜೊತೆ ಇಲ್ಲ, ಹೃದಯಾಘಾತದಿಂದ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾನೆ. ಈ ಱಂಬೋ ಅದೆಷ್ಟೋ ಅಪರಾಧ ಕೃತ್ಯಗಳನ್ನ ಬೇಧಿಸಿದ್ದಾನೆ. ಜಿಲ್ಲೆಯಲ್ಲಿ ಕಳ್ಳತನ, ದರೋಡೆ, ಕೊಲೆ ಪ್ರಕರಣಗಳು ನಡೆಯುತ್ತಿದ್ದಂತೆ ಪೊಲೀಸ್ ವಾಹನದಲ್ಲಿ ಸ್ಥಳಕ್ಕೆ ಹೋಗತ್ತಿದ್ದ ಈ ಱಂಬೋ, ಅಪರಾಧಿಗಳನ್ನು ಹಿಡಿಯೋಕೆ ಸಹಾಯ ಮಾಡುತ್ತಿದ್ದ. ಆರೋಪಿಗಳು ಹೋದ ಹಾದಿಯಲ್ಲೇ ಹೋಗಿ ಅವರ ಸುಳಿವು ನೀಡುತ್ತಿತ್ತು.

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ: ಆದ್ರೆ ಈಗ ಱಂಬೋನನ್ನು ಕಳೆದುಕೊಂಡ ಪೊಲೀಸ್ ಇಲಾಖೆ ದುಃಖದಲ್ಲಿ ಮುಳುಗಿದೆ. ಬೆಟಗೇರಿಯ ಪೊಲೀಸ್ ವಸತಿಗೃಹದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಱಂಬೋ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗಲಿದ ಸಹದ್ಯೋಗಿಗೆ ಹೂಗುಚ್ಛ ವಿಟ್ಟು ಅಂತಿಮ ವಿದಾಯ ಹೇಳಿದರು.

11 ವರ್ಷ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಣೆ: ಜುಲೈ 1 2008ರಂದು ಹುಟ್ಟಿದ ಈ ಱಂಬೋ ಗದಗ ಪೊಲೀಸ್ ಇಲಾಖೆಯ ಹೆಮ್ಮೆಯ ಪುತ್ರನಾಗಿದೆ ಬೆಳೆದ. ಜನವರಿ 2009 ರಂದು ಪೊಲೀಸ್ ಸೇವೆಗೆ ಭರ್ತಿಯಾಗಿದ್ದ ಡಾಬರ್ ಮನ್ ತಳಿಯ ಱಂಬೋ ಬರೋಬ್ಬರಿ 10 ತಿಂಗಳ ಪೊಲೀಸ್ ತರಬೇತಿ ಬಳಿಕ 2009 ರಿಂದ ಸತತ 2020 ರ ವರೆಗೆ ಅಂದರೆ 11 ವರ್ಷ 6 ತಿಂಗಳು ಕಾಲ ಗದಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾನೆ. 11 ವರ್ಷ 6 ತಿಂಗಳಲ್ಲಿ ಬರೋಬರಿ 190 ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಈ ಱಂಬೋ ಪ್ರಮುಖ ಪಾತ್ರವಹಿಸಿದ್ದಾನೆ.

Published On - 2:09 pm, Mon, 3 February 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು