AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Veterinary Doctors: ಇದು ಕಣ್ಣು, ಕಿವಿ ಇಲ್ಲದ ಸರ್ಕಾರ ಅಂತ ಆಕ್ರೋಶ ಹೊರಹಾಕಿದ ಭಾವಿ ಪಶು ವೈದ್ಯರು! ಯಾಕೆ ಹೀಗೆ?

ಎಂಬಿಬಿಎಸ್ ವೈದ್ಯ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರತಿ ತಿಂಗಳು 30 ಸಾವಿರ ರೂಪಾಯಿ ಸ್ಟೈಫಂಡ್ ನೀಡ್ತಾಯಿದೆ. ಆದ್ರೆ, ಪಶುವೈದ್ಯ ವಿದ್ಯಾರ್ಥಿಗಳಿಗೆ ಕೇವಲ 13 ಸಾವಿರ ನೀಡ್ತಾಯಿದೆ. ಹೀಗಾಗಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ ಗದಗ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಪಶು ವೈದ್ಯರು.

Veterinary Doctors: ಇದು ಕಣ್ಣು, ಕಿವಿ ಇಲ್ಲದ ಸರ್ಕಾರ ಅಂತ ಆಕ್ರೋಶ ಹೊರಹಾಕಿದ ಭಾವಿ ಪಶು ವೈದ್ಯರು! ಯಾಕೆ ಹೀಗೆ?
ಇದು ಕಣ್ಣು, ಕಿವಿ ಇಲ್ಲದ ಸರ್ಕಾರ ಅಂತ ಆಕ್ರೋಶ ಹೊರಹಾಕಿದ ಭಾವಿ ಪಶು ವೈದ್ಯರು! ಯಾಕೆ ಹೀಗೆ?
TV9 Web
| Edited By: ಸಾಧು ಶ್ರೀನಾಥ್​|

Updated on:Mar 08, 2023 | 4:18 PM

Share

ಅವರೆಲ್ಲ ಭವಿಷ್ಯದಲ್ಲಿ ಪಶು ವೈದ್ಯರಾಗಿ (Veterinary Doctors) ಸೇವೆ ಸಲ್ಲಿಸಬೇಕಿರುವವರು, ಪಶುಗಳಿಗೆ ಚಿಕಿತ್ಸೆ ನೀಡುವ ಮೂಲಕ ಮೂಖ ಪ್ರಾಣಿಗಳ ಪಾಲಿನ ಆಪತ್ಬಾಂಧವರು ಎನಿಸಿಕೊಳ್ಳಬೇಕು ಎಂಬ ತುಡಿತ ಹೊಂದಿರುವವರು. ಆದ್ರೆ, ಸರ್ಕಾರದ ತಾರತಮ್ಯ ನೀತಿಯಿಂದ ರೋಸಿ ಹೋಗಿದ್ದಾರೆ. ಹೌದು ಮಾನವ ವೈದ್ಯರು ಹಾಗೂ ಪಶು ವೈದ್ಯರಿಗೆ ಸ್ಪೈಫಂಡ್ (Stipend) ನೀಡುವುದರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಹೀಗಾಗಿ ಕಳೆದ 10 ದಿನಗಳಿಂದ, ಹೋರಾಟ ಮಾಡ್ತಾ ಇದ್ದಾರೆ‌. ಸರ್ಕಾರ ಮಾತ್ರ ಕ್ಯಾರೆ ಮಾಡ್ತಾಯಿಲ್ಲಾ. ಇದು ಕಣ್ಣು, ಕಿವಿ ಇಲ್ಲದ ಸರ್ಕಾರ ಅಂತ ಆಕ್ರೋಶ ಹೊರಹಾಕಿದ್ದಾರೆ. ಸ್ಟೂಟೆಂಡ್ ಕಣ್ಣೀರು ಕೇಳದ ಸರ್ಕಾರಕ್ಕೆ ನಮ್ ಪವರ್ ತೋರಿಸ್ತೀವಿ ಅಂತ ಸರ್ಕಾರಕ್ಕೆ ಗದಗ (Gadag) ಪಶುವೈದ್ಯ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ಮಾನವ ವೈದ್ಯರು (MBBS) ಹಾಗೂ ಪಶು ವೈದ್ಯರು ನೀಡೋ ಸ್ಪೈಫಂಡ್ ನಲ್ಲಿ ತಾರತಮ್ಯ..! ಸರ್ಕಾರದ ತಾರತಮ್ಯದ ವಿರುದ್ಧ ಸಿಡಿದೆದ್ದ ಪಶು ವೈದ್ಯ ವಿದ್ಯಾರ್ಥಿಗಳು…! ತಾರತಮ್ಯ ನೀತಿಯನ್ನು ಖಂಡಿಸಿ, ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ಆರಂಭ..! ವಿದ್ಯಾರ್ಥಿಗಳಿಗೆ ಏನಾದ್ರೂ ಹೆಚ್ಚುಕಮ್ಮಿಯಾದ್ರೆ ಸರ್ಕಾರವೇ ಹೊಣೆ ಅಂತ ವಿದ್ಯಾರ್ಥಿಗಳ ಎಚ್ಚರಿಕೆ…!

ಬೇಕೇ ಬೇಕು ನ್ಯಾಯ ಬೇಕು ಅಂತ ಘೋಷಣೆ ಕೂಗ್ತಾಯಿರೋ ವಿದ್ಯಾರ್ಥಿಗಳು. ಕೆಲಸ ಹೆಚ್ಚು ಸಂಬಳ ಕಡಿಮೆ ಅಂತ ಘೋಷಣೆ ಹಾಕಿ ಕಿಡಿ ಕಿಡಿ. ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿ ವಿದ್ಯಾರ್ಥಿಗಳ ಆಕ್ರೋಶ ಹೀಗೆ ವಿದ್ಯಾರ್ಥಿಗಳ ಆಕ್ರೋಶದ ಕಿಚ್ಚು ಕಂಡಿದ್ದು ಗದಗ ನಗರದ ಹೊರವಲಯದಲ್ಲಿನ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಮುಂದೆ. ಸರ್ಕಾರದ ತಾರತಮ್ಯ ನೀತಿ ವಿರುದ್ಧ ಪಶುವೈದ್ಯ ವಿದ್ಯಾರ್ಥಿಗಳು ರೋಸಿಹೋಗಿದ್ದಾರೆ.

ಹೌದು ಎಂಬಿಬಿಎಸ್ ವೈದ್ಯ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರತಿ ತಿಂಗಳು 30 ಸಾವಿರ ರೂಪಾಯಿ ಸ್ಟೈಫಂಡ್ ನೀಡ್ತಾಯಿದೆ. ಆದ್ರೆ, ಪಶುವೈದ್ಯ ವಿದ್ಯಾರ್ಥಿಗಳಿಗೆ ಕೇವಲ 13 ಸಾವಿರ ನೀಡ್ತಾಯಿದೆ. ಹೀಗಾಗಿ ನಮಗೊಂದು ನ್ಯಾಯ, ಮತ್ತೊಬ್ಬರಿಗೊಂದು ನ್ಯಾಯ ಯಾಕೆ ಅಂತ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಬೀದರ್ ಪಶು ವಿಶ್ವವಿದ್ಯಾಲಯದ ಅಡಿಯಲ್ಲಿ ರಾಜ್ಯದಲ್ಲಿ ಹಾಸನ, ಶಿವಮೊಗ್ಗ, ಬೆಂಗಳೂರು ಹಾಗೂ ಗದಗನಲ್ಲಿ ಐದು ಪಶುವೈದ್ಯ ಕಾಲೇಜುಗಳಿವೆ.

ಈ ಐದು ಕಾಲೇಜ್ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಕಳೆದ 9 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ರೆ, ಸರ್ಕಾರ ಮಾತ್ರ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದಿಲ್ಲ. ಇದು ವಿದ್ಯಾರ್ಥಿಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮಂಗಳವಾರದಿಂದ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಏನಾದ್ರೂ ಹೆಚ್ಚು ಕಮ್ಮಿಯಾದ್ರೆ ಸರ್ಕಾರವೇ ಹೊಣೆ ಅಂತ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ. ಇದೊಂದು ಕಣ್ಣು, ಕಿವಿ ಇಲ್ಲದ ಸರ್ಕಾರ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ತಾರತಮ್ಯ ನೀತಿಯನ್ನು ಖಂಡಿಸಿ, ಕಳೆದ 9 ದಿನಗಳಿಂದ ಪ್ರತಿಭಟನೆ ಮಾಡ್ತಾಯಿದ್ದಾರೆ. ಸರ್ಕಾರ ಕೂಡಲೇ ವೇತನ ಹೆಚ್ಚಳ ಮಾಡಬೇಕು, ಇಲ್ಲವಾದರೆ, ಬೆಂಗಳೂರು ಚಲೋ ಮಾಡುವ ಮೂಲಕ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಬಾವಿ ಪಶು ವೈದ್ಯರು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಸಂಶೋಧನೆ ಮಾಡಬೇಕಾಗುತ್ತದೆ. ಹಾಗೇ ಹೊರ ರಾಜ್ಯಗಳಿಗೆ ಹೋಗಿ ಸಂಶೋಧನೆ ಮಾಡಬೇಕಾಗುತ್ತೆ.

ಆದ್ರೆ, ಸರ್ಕಾರ ನೀಡೋ 13 ಸಾವಿದ ಸ್ಪೈಫಂಡ್ ಸಾಕಾಗೋದಿಲ್ಲ. ಆದ್ರೆ, ಎಂಬಿಬಿಎಸ್ ವೈದ್ಯ ವಿದ್ಯಾರ್ಥಿಗಳು ಒಂದೇ ಕಾಲೇಜ್ ನಲ್ಲಿ ಇಂಟರ್ನ್ ಶಿಪ್ ಮಾಡ್ತಾರೆ. ಅವ್ರಿಗೆ 30 ಸಾವಿರ ನೀಡ್ತಾರೆ. ಇದ್ಯಾವ ನ್ಯಾಯ ಅಂತ ಗುಡುಗಿದ್ದಾರೆ. ಹೀಗಾಗಿ ಸರ್ಕಾರ ನಮ್ಮ ನೋವು, ಕಣ್ಣೀರು ಒರೆಸುವ ಕೆಲಸ ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ. ಪಶು ವೈದ್ಯಕೀಯ ಕೋರ್ಸ್ ಬಹುತೇಕ ಬಡವರು, ಹಾಗೂ ರೈತರ ಮಕ್ಕಳು ಹೆಚ್ಚಾಗಿ ಕಲಿಯುತ್ತಾರೆ.‌ ಮನೆಯಿಂದ ಹಣ ತರಲು ಆಗ್ತಾಯಿಲ್ಲಾ, ‌ಸರ್ಕಾರ ನೀಡೋ ವೇತನ ಕೂಡಾ ಸಾಕಾಗುದಿಲ್ಲ, ಹೀಗಾಗಿ ಪಶುಗಳಿಗೆ ಚಿಕಿತ್ಸೆ ಮಾಡೋದನ್ನು ಬಿಟ್ಟು, ಪ್ರತಿಭಟನೆ ಇಳದಿದ್ದಾರೆ. ಈಗಾಲೇ ಸಿಎಂ ಬಸವರಾಜ್ ಬೊಮ್ಮಾಯಿ‌, ಹಾಗೂ ಸಚಿವರಿಗೆ, ಸಂಸದರಿಗೆ ಮನವಿ ಮಾಡಿದ್ರು, ಪ್ರಯೋಜನವಾಗಿಲ್ಲಾ. ಕೂಡಲೇ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯ ಮಾಡ್ತಾಯಿದ್ದಾರೆ.

ಪಶುವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಜಾನುವಾರಗಳ ಚಿಕಿತ್ಸೆಗೆ ಅನಾನೂಕಲವಾಗಿದೆ. ಇದ್ರಿಂದ ಜಾನುವಾರಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದ ಕಾರಣ ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಇನ್ನು ಇತ್ತೀಚೆಗೆ ಆವರಿಸಿದ್ದ ಚರ್ಮ ಗಂಟು ರೋಗದ ವಿರುದ್ಧ ಬಾವಿ ಪಶು ವೈದ್ಯರು ಚಿಕಿತ್ಸೆ ನೀಡೋ ಮೂಲಕ ರೈತರ ಸಂಗಾತಿಗಳನ್ನು ಬದುಕಿಸಿದ್ದಾದೆ‌. ಆದ್ರೆ, ಸರ್ಕಾರ ಮಾತ್ರ ಮಾನವ ವೈದ್ಯರು ಹಾಗೂ ಪಶು ವೈದ್ಯರ ನಡುಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಹೀಗಾಗಿ ನಮಗೂ ಕೂಡಾ ಸ್ಪೈಫಂಡ್ ಹೆಚ್ಚಳ ಮಾಡಬೇಕೆಂದು ಒತ್ತಾಯ ಮಾಡಲಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ

Published On - 4:17 pm, Wed, 8 March 23

Follow Us