Karnataka Rains: ರಣ ಮಳೆಗೆ ಐತಿಹಾಸಿಕ ಅಗಸ್ತ್ಯ ತೀರ್ಥ ದೇವಸ್ಥಾನದ ಗೋಡೆ ಕುಸಿತ

ನಿನ್ನೆಯಿಂದ ಸುರಿದ ಮಳೆಗೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿನ ಪೌರಾಣಿಕ ಪ್ರಸಿದ್ಧ ಅಗಸ್ತ್ಯ ತೀರ್ಥ ದೇವಾಲಯದ ಹಿಂದಿನ ಭಾಗದ ಗೋಡೆ ಕುಸಿದಿದೆ. ಗೋಡೆ ಕುಸಿದ ಕಾರಣ ಈಶ್ವರನ ಮೂರ್ತಿ ಮುಚ್ಚಿಹೋಗಿದೆ.

Karnataka Rains: ರಣ ಮಳೆಗೆ ಐತಿಹಾಸಿಕ ಅಗಸ್ತ್ಯ ತೀರ್ಥ ದೇವಸ್ಥಾನದ ಗೋಡೆ ಕುಸಿತ
ಅಗಸ್ತ್ಯ ತೀರ್ಥ ದೇವಸ್ಥಾನ
Follow us
TV9 Web
| Updated By: ಆಯೇಷಾ ಬಾನು

Updated on:Aug 30, 2022 | 6:12 PM

ಗದಗ: ರಾಜ್ಯದಲ್ಲಿ ಸುರಿಯುತ್ತಿರುವ ರಣ ಭೀಕರ ಮಳೆ ಅನೇಕ ಅವಾಂತರಗಳಿಗೆ ಕಾರಣವಾಗುತ್ತಿದೆ(Karnataka Rains). ಗದಗದಲ್ಲೂ ಮಳೆಯ ಅಬ್ಬರ ಜೋರಾಗಿದ್ದು ಐತಿಹಾಸಿಕ ಅಗಸ್ತ್ಯ ತೀರ್ಥ(Agastya Tirth) ದೇವಸ್ಥಾನದ ಗೋಡೆ ಕುಸಿದು ಬಿದ್ದಿದೆ.

ನಿನ್ನೆಯಿಂದ ಸುರಿದ ಮಳೆಗೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿನ ಪೌರಾಣಿಕ ಪ್ರಸಿದ್ಧ ಅಗಸ್ತ್ಯ ತೀರ್ಥ ದೇವಾಲಯದ ಹಿಂದಿನ ಭಾಗದ ಗೋಡೆ ಕುಸಿದಿದೆ. ಗೋಡೆ ಕುಸಿದ ಕಾರಣ ಈಶ್ವರನ ಮೂರ್ತಿ ಮುಚ್ಚಿಹೋಗಿದೆ. ಅಗಸ್ತ್ಯ ಮುನಿಗಳು ಈ ಜಾಗದಲ್ಲಿ ತಪಸ್ಸು ಮಾಡಿದ್ದರು ಎಂಬ ಪೌರಾಣಿಕ ಹಿನ್ನೆಲೆ ಹೊಂದಿದ್ದ ಸನ್ನಿಧಿ ಮುಚ್ಚಿ ಹೋಗಿದೆ.

ಕಳೆದ ಕೆಲ ದಿನದಿಂದ ಈ ದೇವಸ್ಥಾನದ ಗೋಡೆ ಶಿಥಿಲಾವಸ್ಥೆಯಲ್ಲಿತ್ತು. ಆದ್ರೆ ಸತತ ಮಳೆಯಿಂದ ಗೋಡೆ ಕುಸಿದು ದೇವಸ್ಥಾನ ವಿರೂಪಗೊಂಡಿದೆ. ಡಿಸಿ ವೈಶಾಲಿ ಎಂಎಲ್, ಪುರಸಭೆ ಅಧ್ಯಕ್ಷೆ ಅಶ್ವಿನಿ ಎ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐತಿಹಾಸಿಕ ಹಿನ್ನೆಲೆಯ ದೇವಸ್ಥಾನ ಸಂರಕ್ಷಣೆಗೆ ಸ್ಥಳೀಯರು ಮನವಿ ಮಾಡಿದ್ದಾರೆ.

Agastya Tirtha

ನೀರಿನ ರಭಸಕ್ಕೆ ಕೊಚ್ಚಿ ಹೋದ ರಸ್ತೆ

ರಾಮನಗರದಲ್ಲಿ ಧಾರಕಾರ ಮಳೆ ಹಿನ್ನೆಲೆ ನೀರಿನ ರಭಸಕ್ಕೆ ರಾಮನಗರದ ಜಿಯಾವುಲ್ಲಾ ಬ್ಲಾಕ್ ನಲ್ಲಿ ಸಂಪೂರ್ಣವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಮನಗರದ ಭಕ್ಷಿಕೆರೆ ಹೊಡೆದು ಹಲವು ಏರಿಯಾಗಳಿಗೆ ನೀರು ನುಗ್ಗಿದೆ. ರಾಮನಗರದ ಜಿಯಾವುಲ್ಲಾ ಬ್ಲಾಕ್ ಸಹಾ ಸಂಪೂರ್ಣವಾಗಿ ಮುಳುಗಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ನೂರಾರು ಮನೆಗಳು ಜಲಾವೃತವಾಗಿವೆ.

ಕಾಲು ಜಾರಿ‌ ನದಿ ನೀರು ಪಾಲಾದ ಯುವಕ

ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಯುವಕ ಕಾಲು ಜಾರಿ‌ ನದಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಸುನೀಲ ಬಣಕಾರ 18 ವರ್ಷ ನೀರು ಪಾಲಾದ ಯುವಕ. ವರದಾ ನದಿಗೆ ಸ್ನಾನ ಮಾಡಲು ತೆರಳಿದ್ದ ವೇಳೆ ನೀರು ಪಾಲಾಗಿದ್ದಾನೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳದಿಂದ ಶೋಧಕಾರ್ಯ ನಡೆಯುತ್ತಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 5:27 pm, Tue, 30 August 22