ಕೆಟ್ಟು ನಿಂತ ಫ್ಯಾನ್, ಹನಿ ನೀರಿಗೂ ಹಾಹಾಕಾರ; ಗದಗ ಜಿಮ್ಸ್ನಲ್ಲಿ ತಾಂಡವವಾಡುತ್ತಿದೆ ಅವ್ಯವಸ್ಥೆ, ಬಾಣಂತಿಯರಿಗೆ ನಿತ್ಯ ನರಕಯಾತನೆ
ಗದಗ ಜಿಮ್ಸ್ನಲ್ಲಿ ಗಾಳಿ, ಬೆಳಕು ಇಲ್ಲದ ಕತ್ತಲ ವಾರ್ಡ್ ಗಳಲ್ಲಿ ಬಾಣಂತಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರು ಹಾಗೂ ಶಾಸಕರ ಗುದ್ದಾಟದಲ್ಲಿ ನಾವು ಆಡಿದ್ದೇ ಆಟ ಎನ್ನುವಂತೆ ವರ್ತಿಸುತ್ತಿದ್ದಾರೆ.
ಗದಗ: ಜಿಮ್ಸ್ ಆಡಳಿತಕ್ಕೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಅವ್ರು ಆಡಿದ್ದೇ ಆಟವಾಗಿದೆ. ಜಿಮ್ಸ್ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಬಾಣಂತಿಯರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬಿಸಿಲಿನ ಬೇಗೆಗೆ ನರಳಾಡುವಂತ ಕೆಟ್ಟ ಪರಿಸ್ಥಿತಿ ಬಂದ್ರೂ ಜಿಮ್ಸ್ ಆಡಳಿತ ಮಂಡಳಿ ಡೋಂಟ್ ಕೇರ್ ಅಂತಿದೆ. ಬಾಣಂತಿಯರ ವಾರ್ಡ್ ಗಳಲ್ಲಿ ಫ್ಯಾನ್ಗಳು ಕೆಟ್ಟು ನಿಂತಿದ್ದು, ಬಿರು ಬೇಸಿಗೆ ಝಳಕ್ಕೆ ಬಾಣಂತಿಯರು ನರಳಾಡುತ್ತಿದ್ದಾರೆ. ಮನೆಗಳಿಂದ ಫ್ಯಾನ್ ತಂದು ಗಾಳಿ ಪಡೆಯುವ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಬಡ ಬಾಣಂತಿಯರ ಗೋಳು ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಅಮಾನವೀಯ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗದಗ ಜಿಮ್ಸ್ನಲ್ಲಿ ಗಾಳಿ, ಬೆಳಕು ಇಲ್ಲದ ಕತ್ತಲ ವಾರ್ಡ್ ಗಳಲ್ಲಿ ಬಾಣಂತಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರು ಹಾಗೂ ಶಾಸಕರ ಗುದ್ದಾಟದಲ್ಲಿ ನಾವು ಆಡಿದ್ದೇ ಆಟ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೌದು ಗದಗ ಜಿಮ್ಸ್ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಸರ್ಕಾರ ಬಡ ರೋಗಿಗಳಿಗೆ ಅನಕೂಲ ಆಗ್ಲಿ ಅಂತ ಹೈಟೆಕ್ಸ್ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿ ಕೋಟಿ ಕೋಟಿ ಅನುದಾನ ನೀಡಿದೆ. ಆದ್ರೆ, ಗದಗ ನಗರದ ಮಹಿಳಾ ವಿಭಾಗದ ವಾರ್ಡ್ ಗಳಲ್ಲಿ ಗಾಳಿ, ಬೆಳಕು ಇಲ್ಲದೇ ಬಾಣಂತಿಯರು ನಿತ್ಯ ನರಳಾಡುತ್ತಿದ್ದಾರೆ. ಆಸ್ಪತ್ರೆ ವಾರ್ಡ್ ಗಳಲ್ಲಿ ಫ್ಯಾನ್ ಗಳು ನಿಂತು ಹೋಗಿವೆ.
ವಾರ್ಡ್ ಗಳಲ್ಲಿ ಬಾಣಂತಿಯರ ನರಳಾಟ ಎಲ್ಲಿ ನೋಡಿದ್ರೂ ಆಸ್ಪತ್ರೆ ಜಾಡು ಹಿಡಿದು ಹೋಗಿವೆ. ಫ್ಯಾನ್ ಗಳು ಬಂದ್ ಆಗಿರೋದ್ರಿಂದ ಬಾಣಂತಿಯರು ಬೆಸಿಗೆ ಬಿಸಿಲಿನ ಝಳಕ್ಕೆ ಬೆಂದು ಹೋಗ್ತಾಯಿದ್ದಾರೆ. ಕೆಲ ಬಾಣಂತಿಯರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ಹೀಗಾಗಿ ಸ್ವಲ್ಪವೂ ಸ್ವೆಟಿಂಗ್ ಆಗಬಾರದು. ಇನ್ ಫೆಕ್ಷನ್ ಆಗುತ್ತೆ ಅಂತ ವೈದ್ಯರೇ ಹೇಳಿದ್ದಾರೆ. ಆದ್ರೆ ಫ್ಯಾನ್ ಗಳು ಬಂದ್ ಆಗಿರೋದ್ರಿಂದ ಬೇಸಿಗೆ ಬಿಸಿಲಿನ ಝಳಕ್ಕೆ ಬಾಣಂತಿಯರು ನರಕಯಾತನೆ ಅನುಭವಿಸುತ್ತಿದ್ದಾರೆ. ವಾರ್ಡ್ ಗಳಲ್ಲಿ ಬಾಣಂತಿಯರ ನರಳಾಟ ನಿಜಕ್ಕೂ ಅಮಾನವೀಯವಾಗಿದೆ. ಹೀಗಾಗಿ ಬಡ ರೋಗಿಗಳು ಸಂಕಷ್ಟದ ನಡುವೆಯೂ ಹೊಸ ಫ್ಯಾನ್ ಖರೀದಿ ಮಾಡಿ ತಂದು ಆಸ್ಪತ್ರೆಯಲ್ಲಿ ಬಾಣಂತಿಯರ ಆರೈಕೆ ಮಾಡುತ್ತಿದ್ದಾರೆ. ಎಷ್ಟೇ ಹೇಳಿದ್ರೂ ಜಿಮ್ಸ್ ಆಡಳಿತ ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಸರ್ ಇಲ್ಲಿ ಬಹಳ ಸಮಸ್ಯೆ ಇದೆ. ಕುಡಿಯಲು, ಸ್ನಾನ, ಶೌಚಕ್ಕೂ ನೀರಿಲ್ಲ. ಫ್ಯಾನ್ ಗಳು ಸರಿ ಇಲ್ಲ ಹೀಗಾಗಿ ನಾವು ಮನೆಗಳಿಂದಲೇ ಫ್ಯಾನ್ ತಂದು ಬಾಣಂತರಿಯರ ಆರೈಕೆ ಮಾಡುತ್ತಿದ್ದೇವೆ ಅಂತ ಸಂಬಂಧಿ ಪಾರವ್ವ ಕಿಡಿಕಾರಿದ್ದಾರೆ.
ಇದು ಗಾಳಿ, ಬೆಳಕು ಸಮಸ್ಯೆ ಮಾತ್ರವಲ್ಲ ಹನಿ ಕುಡಿಯೋ ನೀರಿಗೂ ಬಾಣಂತಿಯರು ಹಾಹಾಕಾರ ಪಡುತ್ತಿದ್ದಾರೆ. ಕುಡಿಯೋ ನೀರು ಇಲ್ಲದೇ ಒಂದು ತಿಂಗಳಿಂದ ಬಾಣಂತಿಯರು ಪರದಾಡುತ್ತಿದ್ದಾರೆ. ಕುಡಿಯವ ನೀರಿಗೆ ಮಾತ್ರವಲ್ಲ. ಸ್ನಾನ, ಶೌಚಕ್ಕೂ ಹನಿ ನೀರಿಲ್ಲದೇ ಪರದಾಡುವಂತಾಗಿದೆ ಅಂತ ಜಿಮ್ಸ್ ವಿರುದ್ಧ ಬಾಣಂತಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದ್ಲೆ ಬಡತನದಲ್ಲಿ ಒದ್ದಾಡುವ ನಾವು ಹಣ ಕೊಟ್ಟು ಕುಡಿಯುವ ನೀರು ತರುವ ಸ್ಥಿತಿ ಬಂದಿದೆ ಅಂತ ಬಾಣಂತಿಯರು ಕಿಡಿಕಾರಿದ್ದಾರೆ. ಇಷ್ಟೋಂದು ಗಂಭೀರ ಸಮಸ್ಯೆಗಳಿದ್ರೂ ಜಿಮ್ಸ್ ಆಡಳಿತ ಮಾತ್ರ ಕ್ಯಾರೇ ಎನ್ನುತ್ತಿಲ್ಲ ಅಂತ ಬಾಣಂತಿಯರ ಆರೋಪಿಸಿದ್ದಾರೆ. ಈ ಬಗ್ಗೆ ಜಿಮ್ಸ್ ಆಡಳಿತಕ್ಕೆ ಕೇಳಿದ್ರೆ, ಕುಡಿಯುವ ನೀರಿನ ಸಮಸ್ಯೆ ಇರೋದು ನಿಜ. ಆಸ್ಪತ್ರೆಗೆ ನೀರು ಪೂರೈಕೆಯಾಗುವ ಪೈಪ್ ಒಡೆದು ಸಮಸ್ಯೆಯಾಗಿದೆ. ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ, ಆಯುಕ್ತರ ಗಮನಕ್ಕೆ ತಂದು 15 ದಿನಗಳಾಗಿವೆ. 15 ದಿನಗಳಾದ್ರೂ ಆಸ್ಪತ್ರೆಗೆ ಪೂರೈಕೆ ಆಗುವ ಪೈಪ್ ರಿಪೇರಿ ಮಾಡಿಲ್ಲ ಅಂತ ನಗರಸಭೆ ಆಡಳಿತ ವಿರುದ್ಧ ಜಿಮ್ಸ್ ಆಡಳಿತಾಧಿಕಾರಿ ಡಾ ಜಿಎಸ್ ಪಲ್ಲೇದ ಹೇಳಿದ್ದಾರೆ. ಆರೋಪ ಮಾಡಿ ಜವಾಬ್ದಾರಿ ಮರೆಯುವ ಕೆಲಸ ಮಾಡಿದೆ.
ಅಧಿಕಾರಿಗಳು ಮನಸ್ಸು ಮಾಡಿದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು ತರಬಹುದು. ಒಳ್ಳೆಯ ಹೆಸರೂ ತರಬಹುದು. ಆದ್ರೆ, ಸರ್ಕಾರ ಗದಗ ಜಿಮ್ಸ್ ಗೆ ಕೋಟ್ಯಾಂತರ ಅನುದಾನ ನೀಡಿದ್ರೂ ಕೂಡ ಇಲ್ಲಿ ಆಡಳಿತ ಮಾತ್ರ ಅವ್ಯವಸ್ಥೆ ಮಾಡುವ ಮೂಲಕ ಜನ್ರು ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದೆ. ಜಿಮ್ಸ್ ಆಸ್ಪತ್ರೆಗೆ ಬುದ್ದಿ ಹೇಳಬೇಕಾದ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮರಳು ಮಾಫಿಯಾ ವಿಷಯದಲ್ಲಿ ಕಚ್ಚಾಡುತ್ತಿದ್ದಾರೆ. ಹೀಗಾಗಿ ನಾವೂ ಆಡಿದ್ದೇ ಆಟ ಮಾಡಿದ್ದೇ ಕಾನೂನು ಅನ್ನೋ ರೀತಿ ಜಿಮ್ಸ್ ಆಡಳಿತ ವರ್ತನೆ ಮಾಡುತ್ತಿದೆ. ಇನ್ನಾದ್ರೂ ಸರ್ಕಾರ, ಸಂಬಂಧಪಟ್ಟ ಸಚಿವರು ಜಿಮ್ಸ್ ಆಡಳಿತಕ್ಕೆ ಬುದ್ದಿ ಹೇಳಿ ಬಡ ಜನ್ರಿಗೆ ಒಳ್ಳೆಯ ಸೇವೆ ನೀಡುವಂತೆ ಮಾಡಬೇಕು ಅನ್ನೋದು ಜನ್ರ ಒತ್ತಾಯ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಆರ್ಥಿಕ ಬಿಕ್ಕಟ್ಟಿನತ್ತ ಚೀನಾ: ಕೊವಿಡ್ನಿಂದ ಮತ್ತೆ ಸರಣಿ ಸಾವು, ತತ್ತರಿಸಿವೆ ರಿಯಲ್ ಎಸ್ಟೇಟ್, ಆಟೊ ವಲಯ