ಸಚಿವರ ತವರು ಜಿಲ್ಲೆಯಲ್ಲೇ ನೈಸರ್ಗಿಕ ಸಂಪತ್ತು ಲೂಟಿ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಗದಗ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತವರು ಜಿಲ್ಲೆ ಗದಗದಲ್ಲಿ ಭೂಮಿಯ ಒಡಲನ್ನ ಪಾತಳ ಮುಟ್ಟೋವರೆಗೂ ಮನಸೋ ಇಚ್ಛೆ ಅಗೆದು, ಬಗೆದಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮಣ್ಣು ಮಾಫಿಯಾದ ವಾಸನೆ ಎಲ್ಲೆಲ್ಲೂ ಸದ್ದು ಮಾಡ್ತಿದೆ. ಜಿಲ್ಲೆಯಲ್ಲಿ ನಡೀತಿರೋ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಎಗ್ಗಿಲ್ಲದೇ ಮಣ್ಣನ್ನ ಸಾಗಿಸಲಾಗಿದೆಯಂತೆ. ತಲೆ ಎತ್ತಿರುವ ಮಣ್ಣು ಮಾಫಿಯಾ ಗ್ಯಾಂಗ್: ಕಳಸಾಪೂರ ಗ್ರಾಮದ ವ್ಯಾಪ್ತಿಯಲ್ಲಿ ಮಣ್ಣು ಮಾಫಿಯಾ ಗ್ಯಾಂಗ್ ತಲೆ ಎತ್ತಿದೆ. ಅದ್ರಲ್ಲೂ ಇನ್ನೊಂದು ಶಾಕಿಂಗ್ ವಿಷ್ಯ ಅಂದ್ರೆ, ರೈತರ ಜಮೀನು […]

ಸಚಿವರ ತವರು ಜಿಲ್ಲೆಯಲ್ಲೇ ನೈಸರ್ಗಿಕ ಸಂಪತ್ತು ಲೂಟಿ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು
Follow us
ಸಾಧು ಶ್ರೀನಾಥ್​
|

Updated on:Dec 23, 2019 | 5:40 PM

ಗದಗ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ತವರು ಜಿಲ್ಲೆ ಗದಗದಲ್ಲಿ ಭೂಮಿಯ ಒಡಲನ್ನ ಪಾತಳ ಮುಟ್ಟೋವರೆಗೂ ಮನಸೋ ಇಚ್ಛೆ ಅಗೆದು, ಬಗೆದಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮಣ್ಣು ಮಾಫಿಯಾದ ವಾಸನೆ ಎಲ್ಲೆಲ್ಲೂ ಸದ್ದು ಮಾಡ್ತಿದೆ. ಜಿಲ್ಲೆಯಲ್ಲಿ ನಡೀತಿರೋ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಎಗ್ಗಿಲ್ಲದೇ ಮಣ್ಣನ್ನ ಸಾಗಿಸಲಾಗಿದೆಯಂತೆ.

ತಲೆ ಎತ್ತಿರುವ ಮಣ್ಣು ಮಾಫಿಯಾ ಗ್ಯಾಂಗ್: ಕಳಸಾಪೂರ ಗ್ರಾಮದ ವ್ಯಾಪ್ತಿಯಲ್ಲಿ ಮಣ್ಣು ಮಾಫಿಯಾ ಗ್ಯಾಂಗ್ ತಲೆ ಎತ್ತಿದೆ. ಅದ್ರಲ್ಲೂ ಇನ್ನೊಂದು ಶಾಕಿಂಗ್ ವಿಷ್ಯ ಅಂದ್ರೆ, ರೈತರ ಜಮೀನು ಸಮತಟ್ಟು ಮಾಡೋ ಹೆಸ್ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೀತಾರಂತೆ. ಬಳಿಕ ಮಣ್ಣು ಲೂಟಿ ಹೊಡೆಯಲಾಗ್ತಿದೆ ಅಂತ ಗ್ರಾಮಸ್ಥರು ಆರೋಪ ಮಾಡ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಬೃಹತ್ ಹೊಂಡಕ್ಕೆ 2 ಜೀವ ಬಲಿ: ಇನ್ನು, ಈ ಮಣ್ಣು ಮಾಫಿಯಾ ಅನ್ನೋದು ಎಷ್ಟರ ಮಟ್ಟಿಗೆ ಆವರಿಸಿದೆ ಅಂದ್ರೆ, ಅಕ್ರಮ ‌ಮಣ್ಣು ಲೂಟಿಯಾದ ಬೃಹತ್ ಹೊಂಡಕ್ಕೆ 2 ಜೀವಗಳು ಬಲಿಯಾಗಿವೆ. ಇಷ್ಟಾದ್ರೂ ಜಿಲ್ಲಾಡಳಿತ, ಗಣಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಅಕ್ರಮ ದಂಧೆಯಲ್ಲಿ ಪೊಲೀಸ್ ಇಲಾಖೆ ಕೂಡ ಶಾಮೀಲಾಗಿದೆ ಅಂತ ಜನರು ಆರೋಪ ಮಾಡ್ತಿದ್ದಾರೆ. ನೈಸರ್ಗಿಕ ಸಂಪತ್ತು ಕೊಳ್ಳೆ ಹೊಡೀತಿದ್ರೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಸೈಲೆಂಟಾಗಿರೋದು ದೊಡ್ಡ ಅನುಮಾನ ಸೃಷ್ಟಿಸಿದೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ ಬಾಯಿಂದ ಮಾತೇ ಹೊರಡದೇ ಗಡ ಗಡ ನಡುಗ್ತಿದ್ದಾರೆ.

ಒಟ್ನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತವರು ಜಿಲ್ಲೆಯಲ್ಲೇ ಭೂಮಿಗೆ ಖದೀಮರು ಕನ್ನ ಹಾಕಿರೋದು ದುರಂತ. ಇನ್ನೊಂದ್ಕಡೆ ದಂಧೆಕೋರರು ಕೊಡೋ ಎಂಜಲು ಕಾಸಿಗೆ ಅಧಿಕಾರಿಗಳು ಕೈಯೊಡ್ಡಿ ಅಕ್ರಮಕ್ಕೆ ಸಾಥ್ ನೀಡಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಈ ಸಾವಿನ ಗುಂಡಿಗಳು ಮತ್ತಷ್ಟು ಬಲಿ ಪಡೆಯೋ ಮುನ್ನ ಅಧಿಕಾರಿಗಳು ಎಚ್ಚೆತ್ತು ಕೊಳ್ಬೇಕಿದೆ.

Published On - 5:39 pm, Mon, 23 December 19