AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag: ಗದಗ ಜಿಲ್ಲೆಯಲ್ಲಿ ಮಹಿಳಾ ಮಣಿಗಳದ್ದೇ ಪಾರುಪತ್ಯ! ಎದೆಗುಂದದೇ ಆಯಕಟ್ಟಿನ ಸ್ಥಾನಗಳ ನಿಭಾಯಿಸುತ್ತಿರುವ ಮಹಿಳಾಮಣಿಗಳು ಇವರೇ!

Women's Day: ಇವತ್ತು ವಿಶ್ವ ಮಹಿಳಾ ದಿನಾಚರಣೆ. ಅಂದಹಾಗೇ ಗದಗ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆಯೇ ಅತೀ ಹೆಚ್ಚು.

Gadag: ಗದಗ ಜಿಲ್ಲೆಯಲ್ಲಿ ಮಹಿಳಾ ಮಣಿಗಳದ್ದೇ ಪಾರುಪತ್ಯ! ಎದೆಗುಂದದೇ ಆಯಕಟ್ಟಿನ ಸ್ಥಾನಗಳ ನಿಭಾಯಿಸುತ್ತಿರುವ ಮಹಿಳಾಮಣಿಗಳು ಇವರೇ!
ಗದಗ ಜಿಲ್ಲೆಯಲ್ಲಿ ಮಹಿಳಾ ಮಣಿಗಳದ್ದೇ ಪಾರುಪತ್ಯ!
TV9 Web
| Edited By: ಸಾಧು ಶ್ರೀನಾಥ್​|

Updated on: Mar 08, 2023 | 4:06 PM

Share

ಗದಗ (Gadag) ಜಿಲ್ಲೆಯಲ್ಲಿ ಮಹಿಳಾ ಮಣಿಗಳ (Women) ಪಾರುಪತ್ಯ ಬಲು ಜೋರಾಗಿದೆ. ಇಡೀ ಜಿಲ್ಲೆಯ ಆಯಕಟ್ಟಿನ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಮಣಿಗಳು ಕಾರುಬಾರು ನಡೆಸುತ್ತಾ ಇದ್ದಾರೆ. ಡಿಸಿ, ಸಿಇಓ, ಎಸಿ, ಆರ್‌ಎಫ್‌‌ಓ, ತಹಶೀಲ್ದಾರ್​ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲೂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಮಹಿಳೆಯರೇ ಹೆಚ್ಚಾಗಿದ್ದಾರೆ. ಪುರುಷರಿಗಿಂತ ನಾವೇನೂ ಕಮ್ಮಿಯಿಲ್ಲ ಅಂತ ಅಚ್ಚುಕಟ್ಟಾಗಿ ದಕ್ಷ ಆಡಳಿತ ನಡೆಸುತ್ತಿದ್ದಾರೆ. ಎಂಥ ಪರಿಸ್ಥಿತಿಯಲ್ಲೂ ಎದೆಗುಂದದೇ ನಿಭಾಯಿಸುವ ಮೂಲಕ ಈ ಮಹಿಳಾ ಮಣಿಗಳು ಜಿಲ್ಲೆಯಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ‌. ಅಷ್ಟಕ್ಕೂ ಈ ಮಹಿಳಾ ಮಣಿಗಳ ಆಡಳಿತ ಇರೋ ಜಿಲ್ಲೆ ಯಾವುದು ಅಂತ ಮಹಿಳಾ ದಿನಾಚರಣೆ (Women’s Day 2023) ವಿಶೇಷ ಸಂದರ್ಭದಲ್ಲಿ ನೋಡುವುದಾದರೆ… ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡುತ್ತಿರುವ ಜಿಲ್ಲಾಧಿಕಾರಿ ಮೇಡಂ. ಮುಂಬರುವ ಚುನಾವಣೆ ಎದುರಿಸಲು ಮಹಿಳಾ ಮಣಿಗಳಿಂದ ಭರ್ಜರಿ ತಯಾರಿ. ಯಾವುದೇ ದೋಷ ಇಲ್ಲದೇ ವಿಧಾನಸಭೆ ಚುನಾವಣೆಗೆ ಮಹಿಳಾ ಆಡಳಿತ ಸಜ್ಜಾಗಿದೆ. ಏನಿದು ಮಹಿಳಾ ಅಧಿಕಾರಿಗಳ ಬಗ್ಗೆಯೇ ಹೇಳ್ತಾಯಿದ್ದೀರಿ ಅಂತೀರಾ. ಹೌದು ಇದು ಮುದ್ರಣ ಕಾಶಿ ಗದಗ ಜಿಲ್ಲೆಯ ಮಹಿಳಾ ಅಧಿಕಾರಿಗಳ ಆಡಳಿತ ಪರಿ.

ಇವತ್ತು ವಿಶ್ವ ಮಹಿಳಾ ದಿನಾಚರಣೆ. ಮಹಿಳಾ ದಿನಾಚರಣೆ ದಿನವೂ ಮಹಿಳಾ ಅಧಿಕಾರಿಗಳು ಚುನಾವಣೆಗೆ ಸಜ್ಜಾಗಿ ಅಂತ ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ. ಅಂದಹಾಗೇ ಗದಗ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆಯೇ ಅತೀ ಹೆಚ್ಚು. ಹೌದು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಅಧಿಕಾರ ಸ್ವೀಕಾರ ಮಾಡಿದ್ದೇ ತಡ ಗದಗ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಅತಿವೃಷ್ಠಿ ಉಂಟಾಯಿತು. ಆ ವೇಳೆಯಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ಮಾಡುವ ಮ‌ೂಲಕ ಜಿಲ್ಲೆಯ ಜನ್ರ ಮೆಚ್ಚುಗೆ ಪಾತ್ರರಾಗಿದ್ದಾರೆ. ಪುರುಷರಗಿಂತಲೂ ನಾವೇನೂ ಕಮ್ಮಿ ಇಲ್ಲ ಅಂತ ತೋರಿಸಿಕೊಟ್ಟಿದ್ದಾರೆ.

ಇನ್ನು ಜಿಲ್ಲಾ ಪಂಚಾಯತ್ ಸಿಇಓ ಡಾ. ಸುಶೀಲಾ ಬಿ ಅವರು ನರೇಗಾ ಸೇರಿದಂತೆ ಹತ್ತಾರು ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಹಾಗೆಯೇ, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮಣ್ಣವರ ಕೂಡಾ ಕೆಲವು ದಿನ ಎಡಿಸಿ ಹಾಗೂ ಎಸಿ ಯಾಗಿ ಕರ್ತವ್ಯ ಮಾಡಿದರು. ಎರಡೂ ಹುದ್ದೆಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಈವಾಗ ಪೂರ್ಣ ಪ್ರಮಾಣದಲ್ಲಿ ಎಸಿಯಾಗಿ ಕೆಲಸ ಮಾಡ್ತಾಯಿದ್ದು, ಸರ್ಕಾರಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡ್ತಾಯಿದ್ದಾರೆ. ರೋಣ, ಗಜೇಂದ್ರಗಡ, ಮುಂಡರಗಿಯಲ್ಲಿ ಮೂವರು ಮಹಿಳೆಯರು ತಹಶೀಲ್ದಾರ್​​ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ.

ಮಹಿಳೆಯರು ಶಿಕ್ಷಣ, ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಡಿಸಿ ವೈಶಾಲಿ

ಮಹಿಳಾ ಅಧಿಕಾರಿಗಳು ದಕ್ಷ ಆಡಳಿತ ನೀಡ್ತಾಯಿದ್ದು, ಅಧಿಕಾರಿಗಳು ಹಾಗೂ ಜಿಲ್ಲೆಯ ಜನರು ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಇದ್ದಾರೆ. ಜಿಲ್ಲೆಯಲ್ಲಿ ಹೆಚ್ಚಾಗಿ ಮಹಿಳಾ ಅಧಿಕಾರಿಗಳು ಇದ್ದಾರೆ. ಕುಟುಂಬ ಜವಾಬ್ದಾರಿಯೊಂದಿಗೆ ಒಳ್ಳೆಯ ಸೇವೆ ಮಾಡ್ತಾರೆ. ಮಹಿಳೆಯರು ಶಿಕ್ಷಣ, ಆರೋಗ್ಯ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಡಿಸಿ ವೈಶಾಲಿ ಎಂ ಎಲ್ ಅವ್ರು ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

ಪುರುಷರಿಗೆ ಸರಿಸಮಾನ ಸೇವೆ

ಈಗಿನ ದಿನಮಾನಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಸೇವೆ ಮಾಡ್ತಾಯಿದ್ದಾರೆ. ಇದಕ್ಕೆ ಗದಗ ಜಿಲ್ಲೆ ಉದಾಹರಣೆ. ಜಿಲ್ಲೆಯ ಡಿಸಿ ವೈಶಾಲಿ ಮೇಡಂ, ಸಿಇಒ ಸುಶೀಲಾ ಮೇಡಂ ಹಾಗೂ ಡಿಎಫ್ಓ ದೀಪಿಕಾ ಮೇಡಂ ಸೇರಿದಂತೆ ಹಲವಾರು ಮಹಿಳಾ ಅಧಿಕಾರಿಗಳು ಅಚ್ಚುಕಟ್ಟಾಗಿ ಅತ್ಯುತ್ತಮ ಸೇವೆ ಮಾಡ್ತಾ ಇದ್ದಾರೆ. ಎಲ್ಲ ಜಿಲ್ಲೆಯಂತೆ ಸರಿಸಮಾನ ಪ್ರಗತಿ ಕಾಣುತ್ತಿದ್ದೇವೆ ಅಂತಾರೆ ಗದಗ ಎಸಿ‌ ಅನ್ನಪೂರ್ಣ ಅವ್ರು.

ಗದಗ ಜಿಲ್ಲೆ ವಿಶಿಷ್ಟ ಮಹಿಳಾ ಆಡಳಿತ

ಗದಗ ಜಿಲ್ಲೆಯಲ್ಲಿ ಒಂದೇ ದಿನ ಅಂತಾ ಅಲ್ಲ, ಪ್ರತಿ ನಿತ್ಯ ಮಹಿಳಾ ದಿನಾಚರಣೆ ನಡೆಸುತ್ತಿದ್ದೇವೆ. ಎಲ್ಲ ಮಹಿಳಾ ಅಧಿಕಾರಿಗಳು ಸೇರಿ ಜಿಲ್ಲೆಗೆ ಒಳ್ಳೆಯ ಆಡಳಿತ ನೀಡುತ್ತಿದ್ದೇವೆ ಅಂತ ಜಿಲ್ಲಾ ಪಂಚಾಯತ್​​ ಸಿಇಓ ಡಾ. ಸುಶೀಲಾ ಹೇಳಿದ್ದಾರೆ.

ಇನ್ನು ಗದಗ ಬೆಟಗೇರಿ ಅವಳಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಸೇರಿದಂತೆ ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಯಲ್ಲಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಾಗಿ ಮಹಿಳೆಯರು ಅಧಿಕಾರ ನಡೆಸುತ್ತಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ, ಅಧಿಕಾರ ಚಲಾವಣೆ ಮಾಡ್ತಾಯಿದ್ದಾರೆ. ಇನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಅಂತಾ ಕರೆಸಿಕೊಳ್ಳುವ ಕಪ್ಪತ್ತಗುಡ್ಡದ ರಕ್ಷಣೆಗೆ ಆರ್ ಎಫ್ ಓ ದೀಪಿಕಾ ಬಾಜಪೇಯಿ ಕಂಕಣಬದ್ದರಾಗಿದ್ದಾರೆ.

ಕಪ್ಪತ್ತಗುಡ್ಡಕ್ಕೆ ಬೆಂಕಿ ಬಿದ್ದಾಗ ಹಗಲು ರಾತ್ರಿ ಎನ್ನದೇ ತಾವೇ ಸ್ವತಃ ನಿಂತು ಬೆಂಕಿಯನ್ನು ನಂದಿಸಿದ್ದಾರೆ. ಹಾಗೇ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಹುನ್ನಾರ ನಡೆಸುತ್ತಿರುವವರಿಗೆ ಸಿಂಹಿಣಿಯಾಗಿ ಕಾಡ್ತಾಯಿದ್ದಾರೆ. ಇದರ ಜೊತೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡ್ತಾಯಿದ್ದಾರೆ ಅಂತ ಮಹಿಳಾ ಆಡಳಿತದ ಬಗ್ಗೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಹೇಳಿದ್ದಾರೆ.

ನೆರೆ ಪರಿಸ್ಥಿತಿ, ಲಕ್ಕುಂಡಿ ಉತ್ಸವ ಸೇರಿದಂತೆ ಜಿಲ್ಲೆಯಲ್ಲಿ ನಡೆದ ಪ್ರಮುಖ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಈ ಮಹಿಳಾ ಮಣಿಗಳು ಸೈ ಅನಿಸಿಕೊಂಡಿದ್ದಾರೆ. ಯಾವುದೇ ಪುರುಷರಿಗೆ ನಾವೂ ಏನೂ ಕಡಿಮೆ ಇಲ್ಲಾ ಎನ್ನುವ ಹಾಗೇ ಆಡಳಿತ ನಡೆಸುವ ಮೂಲಕ, ಜಿಲ್ಲೆಯ ಜನ್ರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ

Follow Us