AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌರಿ- ಗಣೇಶ ಹಬ್ಬ: ಬೆಂಗಳೂರಿನಿಂದ ರಾಜ್ಯ, ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್

ಗೌರಿ- ಗಣೇಶ ಹಬ್ಬ ಪ್ರಯುಕ್ತ ಕೆಎಸ್​ಆರ್​ಟಿಸಿ ಕರ್ನಾಟಕ ಮತ್ತು ನೆರೆ ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚುವರಿ 1500 ಬಸ್​ಗಳನ್ನು ನಿಯೋಜಿಸಿದೆ. ಯಾವೆಲ್ಲ ಊರಿಗಳಿಗೆ ವಿಶೇಷ ಬಸ್​ ಸೌಕರ್ಯ ಇದೆ? ಟಿಕೆಟ್ ಬುಕಿಂಗ್ ಹೇಗೆ? ಮುಂಗಡ ಕಾಯ್ದಿರಿಸುವಿಕೆಗೆ ರಿಯಾಯಿತಿ ಇದೆಯೇ? ಎಂಬ ಇತ್ಯಾದಿ ವಿವರ ಇಲ್ಲಿದೆ.​

ಗೌರಿ- ಗಣೇಶ ಹಬ್ಬ: ಬೆಂಗಳೂರಿನಿಂದ ರಾಜ್ಯ, ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್
ಕೆಎಸ್​ಆರ್​ಟಿಸಿ
Kiran Surya
| Edited By: |

Updated on:Aug 22, 2025 | 5:47 PM

Share

ಬೆಂಗಳೂರು, ಆಗಸ್ಟ್​ 22: ಗೌರಿ- ಗಣೇಶ ಹಬ್ಬ (Gauri-Ganesha Festival) ಅಂತ ಬೆಂಗಳೂರಿನಿಂದ (Bengaluru) ಅನೇಕ ಜನರು ತಮ್ಮ ಊರಿಗೆ ಹೋಗಲು ಸಜ್ಜಾಗಿದ್ದಾರೆ. ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಆಗಸ್ಟ್ 25 ರಿಂದ 31ರವರೆಗೆ ಹೆಚ್ಚುವರಿ ವಿಶೇಷ ಬಸ್​ಗಳ ವ್ಯವಸ್ಥೆಯನ್ನು ಮಾಡಿದೆ. ಸೋಮವಾರ (ಆಗಸ್ಟ್​ 25) ರಿಂದ ಬೆಂಗಳೂರಿನಿಂದ ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ 1500 ಬಸ್​ಗಳನ್ನು ಓಡಿಸಲಾಗುವುದು ಎಂದು ಕೆಎಸ್​ಆರ್​​ಟಿಸಿ ತಿಳಿಸಿದೆ.

ಆಗಸ್ಟ್​ 26 ಮಂಗಳವಾರ ಸ್ವರ್ಣಗೌರಿ ಹಬ್ಬ, 27 ಎಂದು ಬುಧವಾರ ಗಣೇಶ ಚತುರ್ಥಿ ಹಬ್ಬ ಇರುವುದರಿಂದ ರಜೆ ಇರುತ್ತದೆ. ಬೆಂಗಳೂರು, ಮಂಗಳೂರು, ಪುಣೆ, ಮುಂಬೈ, ಗೋವಾ ಮತ್ತಿತರ ಪ್ರಮುಖ ಊರುಗಳಲ್ಲಿ ನೆಲೆಸಿರುವ ಹಲವರು ಹಬ್ಬದ ಆಚರಣೆಗಾಗಿ ಸ್ವಂತ ಊರುಗಳಿಗೆ ತೆರಳುತ್ತಾರೆ. ಬೆಂಗಳೂರಿಗೆ ವಾಪಸ್ಸು ಬರಲು 27 ಬುಧವಾರ ದಿಂದ 31 ಭಾನುವಾರದವರೆಗೆ ವಿಶೇಷ ವಾಹನಗಳನ್ನು ಓಡಿಸಲಾಗುತ್ತದೆ.

ಕೆಂಪೇಗೌಡ ಬಸ್ ನಿಲ್ದಾಣ

ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಬಸ್​ಗಳು ತೆರಳುತ್ತವೆ.

ಮೈಸೂರು ರಸ್ತೆ ಬಸ್ ನಿಲ್ದಾಣ

ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗವಾಗಿ ತೆರಳುತ್ತವೆ.

ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ

ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕಲ್ಲಿಕೋಟೆಗೆ ತೆರಳುತ್ತವೆ.

ಇದನ್ನೂ ಓದಿ: BMTC ಬಸ್‌ ಚಾಲಕರಿಗೆ ಹೊಸ ನಿಯಮ: 2 ಸಲ ಅಪಘಾತವೆಸಗಿದ್ರೆ ಕೆಲಸದಿಂದಲೇ ವಜಾ

ಟಿಕೆಟ್​ನಲ್ಲಿ ವಿಶೇಷ ರಿಯಾತಿ

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟು ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ ಅನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Fri, 22 August 25

Follow Us
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ