ಜಯನಗರ ಅನುದಾನ ಜಟಾಪಟಿ: ಸರ್ಕಾರದ ವಿರುದ್ಧ ಸಿಡಿದೆದ್ದ ಸಂಘಟನೆಗಳು

ಜಯನಗರ ಕ್ಷೇತ್ರಕ್ಕೆ ಅನುದಾನ ಜಟಾಪಟಿ ಮುಂದುವರಿದಿದೆ. ಕ್ಷೇತ್ರಕ್ಕೆ ಅನುದಾನ ನೀಡದ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ವಿರುದ್ಧ ಜಯನಗರ ನಿವಾಸಿಗಳ ಆಕ್ರೋಶದ ಕಟ್ಟೆಯೊಡೆದಿದೆ. ಈ ಅನ್ಯಾಯ ಖಂಡಿಸಿ ಜಯನಗರ ಕ್ಷೇತ್ರದ ನಾಗರೀಕ ಸಂಘ ಸಂಸ್ಥೆಗಳ ಒಕ್ಕೂಟವು ʻನಮ್ಮ ತೆರಿಗೆ ನಮ್ಮ ಹಕ್ಕುʼ ಘೋಷವಾಕ್ಯದ ಅಡಿಯಲ್ಲಿ ಸಭೆ ಮಾಡಿ ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿವೆ.

ಜಯನಗರ ಅನುದಾನ ಜಟಾಪಟಿ: ಸರ್ಕಾರದ ವಿರುದ್ಧ ಸಿಡಿದೆದ್ದ ಸಂಘಟನೆಗಳು
ಜಯನಗರಕ್ಕೆ ನೀಡದ ಅನುದಾನ: ನಮ್ಮ ತೆರಿಗೆ ನಮ್ಮ ಹಕ್ಕು ಹೆಸರಿನಲ್ಲಿ ಸಭೆ, ಯಾರು ಏನು ಹೇಳಿದ್ರು?
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 17, 2024 | 4:51 PM

ಬೆಂಗಳೂರು, ನವೆಂಬರ್​ 17: ಜಯನಗರ (Jayanagar) ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಬೆಂಗಳೂರಿನ ಉಳಿದೆಲ್ಲ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿರುವ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಯನಗರಕ್ಕೆ ಅನುದಾನ ನೀಡದಿರುವುದಕ್ಕೆ ಕ್ಷೇತ್ರದ ಶಾಸಕ ಮಾತ್ರವಲ್ಲದೇ ವಿವಿಧ ಸಂಘ-ಸಂಘಟನೆಗಳು ಸಿಡಿದೆವೆ. ಕ್ಷೇತ್ರದ ಶಾಸಕ ರಾಮಮೂರ್ತಿ ಅವರ ಬೆನ್ನಿಗೆ ನಿಂತಿರುವ ಸಂಘಟನೆಗಳು ಅನುದಾನ ಕೊಡಲೇಬೇಕೆಂದು ಪಟ್ಟುಹಿಡಿದಿವೆ. ಈ ಸಂಬಂಧ ಇಂದು (ನವೆಂಬರ್ 17) ನಮ್ಮ ತೆರಿಗೆ ನಮ್ಮ ಹಕ್ಕು ಹೆಸರಿನಡಿಯಲ್ಲಿ ಸಭೆ ಮಾಡಿದ್ದು, ಬೆಂಗಳೂರಿನಲ್ಲೇ ಜಯನಗರ ತನ್ನದೇ ಮಹತ್ವ ಹೊಂದಿದೆ. ವಾಣಿಜ್ಯ, ವಾಪಾರ-ವಹಿವಾಟುಗಳಿಂದಲೇ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ಹೋಗುತ್ತದೆ. ಆದ್ರೆ, ಇದೀಗ ಅನುದಾನ ಕೊಡದಿದ್ದರೆ ಹೇಗೆಂದು ಸಂಘಟನೆಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಡಿಕೆ ಶಿವಕುಮಾರ್​ 10 ಕೋಟಿ ರೂ. ಅನುದಾನ ತಕ್ಷಣವೇ ಬಿಡುಗಡೆ ಮಾಡಲಿ

ಸಭೆ ಬಳಿಕ ಮಾತನಾಡಿದ ಶಾಸಕ ಸಿ.ಕೆ.ರಾಮಮೂರ್ತಿ, ಡಿಸಿಎಂ ಡಿಕೆ ಶಿವಕುಮಾರ್​ ನಮಗೆ ತಗ್ಗಿಬಗ್ಗಿ ಇರಬೇಕು ಎಂದಿದ್ದಾರೆ. ನಾವು ಅದೇ ರೀತಿಯಾಗಿ ತಗ್ಗಿ ಬಗ್ಗಿ ನಡೆದುಕೊಳ್ಳುತ್ತೇವೆ. ಯಾರಿಗೆ ತಗ್ಗಿ ಬಗ್ಗಿ ನಡೀಬೇಕು ಎಂದು ಹೇಳಬೇಕು, ಅವರ ಮುಂದೆಯೂ ಹಾಗೆಯೇ ತಗ್ಗಿಬಗ್ಗಿ ಇರುತ್ತೇವೆ. ಡಿಕೆ ಶಿವಕುಮಾರ್​ ಅವರು ದೊಡ್ಡವರು, ನಾವು ಚಿಕ್ಕವರು. ಹೀಗಾಗಿ ಅವರು ನಮಗೆ ಅನುದಾನ ಬಿಡುಗಡೆ ಮಾಡಲಿ. 10 ಕೋಟಿ ರೂ. ಅನುದಾನ ತಕ್ಷಣವೇ ಬಿಡುಗಡೆ ಮಾಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಶಾಸಕರಿರುವ ಜಯನಗರ ಬಿಟ್ಟು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ಅನುದಾನ: ಡಿಕೆಶಿ ನಡೆಗೆ ಬಿಜೆಪಿ ಕೆಂಡ

ನಾನು ಡಿ.ಕೆ.ಶಿವಕುಮಾರ್​​​ ಭೇಟಿ ಮಾಡುತ್ತೇನೆ. ಅವರು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಇದ್ದಾರೆ. ಎಲ್ಲ ಒಕ್ಕೂಟ ಸೇರಿ ಭೇಟಿ ಮಾಡಿ ಮನವಿ ಮಾಡುತ್ತೇನೆ. ಕ್ಷೇತ್ರದ ಮತದಾರರ ಮುಂದೆ ನಾನು ತಲೆಬಾಗಬೇಕು ಎಂದು ಹೇಳಿದ್ದಾರೆ.

ಕರೆದರೂ ನೀವು ಬಂದಿಲ್ಲ

ಅಭಿವೃದ್ಧಿ ಆಗಬೇಕು. ಆದರೆ ಎಲ್ಲರಿಗೂ ಅನುದಾನ ಕೊಟ್ಟು ನಮಗೆ ಮಾತ್ರ ಕೊಟ್ಟುಲ್ಲ ಅಂದ್ರೆ ಹೇಗೆ? ಬ್ರ್ಯಾಂಡ್ ಬೆಂಗಳೂರು ಹೇಗಾಗುತ್ತದೆ? ಕ್ಷೇತ್ರದಲ್ಲಿ ಹಾಳಾದ ರಸ್ತೆ ಇದೆ, 4ನೇ ಬಡಾವಣೆ ಕಾಂಪ್ಲೆಕ್ಸ್ ಸ್ಥಿತಿ ಹೇಗಿದೆ. ನಾನು ವೈಯಕ್ತಿಕವಾಗಿ ನಿಮಗೆ ಏನೂ ಕೂಡ ಮಾತಾಡಿಲ್ಲ. ನಾನು ಜಯನಗರಕ್ಕೆ ನಿಮಗೆ ಕರೆದರೂ ನೀವು ಬಂದಿಲ್ಲ. ಹಾಗಾಗಿ ಯಾರನ್ನ ಕೇಳಬೇಕು. ನೀವು ಬೆಂಗಳೂರು ನಗರಾಭಿವೃದ್ಧಿ ಸಚಿವರು ಅದಕ್ಕೆ ಕೇಳಿದ್ದು, ಕ್ಷೇತ್ರದಲ್ಲಿ ಏನಾಗುತ್ತಿದೆ ಅನ್ನೋದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಕ್ಷೇತ್ರದ ಜನ ಏಕೆ ಹೋರಾಟ ಮಾಡುತ್ತಿಲ್ಲ ಎಂದು ಕೇಳಿದ್ದಾರೆ. ನಾವು ರಸ್ತೆಗಿಳಿದು ಹೋರಾಟ ಮಾಡುತ್ತಿಲ್ಲ. ನಾನು ನಮ್ಮ ನೋವು ತೋಡಿಕೊಳ್ಳುತ್ತಿದ್ದೇವೆ. ಕ್ಷೇತ್ರದ ಜನರ ಸಮಸ್ಯೆ ಕುರಿತು ಇಲ್ಲಿ ನಾವು ಸೇರಿದ್ದೇವೆ. ಜನ ಅವರ ಸಮಸ್ಯೆ ಹೇಳುತ್ತಾರೆ. ನಾನು ನನ್ನ ಸಮಸ್ಯೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಹುಕ್ಕಾ ಬಾರ್ ಕುರಿತು ಧ್ವನಿ ಎತ್ತಿದ್ದೇನೆ

ಕ್ಷೇತ್ರದ ಸಮಸ್ಯೆ ಕುರಿತು ಒಂದು ಒಕ್ಕೂಟ ಮಾಡಬೇಕು. ಇಡೀ ಜಯನಗರವನ್ನ ಮಾದರಿ ಜಯನಗರ ಮಾಡಬೇಕು. ಕ್ಷೇತ್ರದಲ್ಲಿ ಸಮಸ್ಯೆ ಬಗೆಹರಿಸಲು ಏನು ಮಾಡಬೇಕು ಯೋಚನೆ ಮಾಡಬೇಕು. ಕಸ, ಟ್ರಾಫಿಕ್‌ ಸಮಸ್ಯೆ ಪಾರ್ಕ್ ಅಭಿವೃದ್ಧಿ ಮಾಡಬೇಕು. ನಾನು ಮೊದಲ ಸಲ ಗೆದ್ದಿದ್ದಾರೂ ನಾನು ಎಲ್ಲಾ ಕಡೆ ಮಾತನಾಡುತ್ತೇನೆ. ಹುಕ್ಕಾ ಬಾರ್ ಕುರಿತು ಧ್ವನಿ ಎತ್ತಿದ್ದೇನೆ. ಬಾರ್, ಪಬ್ ವಿರುದ್ದ ಹೋರಾಟ ಮಾಡಿದ್ದೇವೆ. ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ಆದರೆ ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಅದರ ಬಗ್ಗೆ ಕೇಳಿದ್ದಕ್ಕೆ ಅವರು ಅಸಮಾಧಾನ ಗೊಂಡಿದ್ದಾರೆ ಎಂದರು.

ಇದನ್ನೂ ಓದಿ: ಬಿಜೆಪಿ ಶಾಸಕರಿರುವ ಜಯನಗರ ಕ್ಷೇತ್ರಕ್ಕೆ ಅನುದಾನ ಕೊಡದಿರುವುದಕ್ಕೆ ಕಾರಣ ಕೊಟ್ಟ ಡಿಕೆಶಿ

ಜಯನಗರ ಬ್ಲಾಕ್​ಗಳಲ್ಲಿ ಮರ್ಡರ್ ಆಗುತ್ತಿವೆ. ರಸ್ತೆಗಳು ಹದಗೆಟ್ಟಿವೆ. ನಾನು ಯಾರ ಮನೆ ಆಸ್ತಿ ಬಗ್ಗೆ ಮಾತಾಡಿಲ್ಲ. ಆದರೆ ಅವರು ತಗ್ಗಿ ಬಗ್ಗಿ ಮಾತನಾಡಬೇಕು ಎನ್ನುತ್ತಾರೆ. ನಾನು ಅವರ ಮನೆ ಬಾಗಿಲಿಗೆ‌ ಹೋಗಿದ್ದೇನೆ. ನಾನು ಮತದಾರರ ಮುಂದೆ ತಲೆ ಬಾಗಬೇಕು. ಅನುದಾನ ಕೊಡಿ ಎಂದು ತಲೆಬಾಗಿದ್ದೇನೆ. ಇದು ನನಗೆ ಮಾಡಿದ ಅವಮಾನ ಅಲ್ಲ, ಕ್ಷೇತ್ರದ ಜನರಿಗೆ ಮಾಡಿದ ಅವಮಾನ ಎಂದು‌ ಹೇಳಿದ್ದೇನೆ ಎಂದಿದ್ದಾರೆ.

230 ಕೋಟಿ ರೂ. ತೆರೆಗೆ ಕಟ್ಟುತ್ತೇವೆ. ನಮಗೆ ಅದರಲ್ಲಿ 10 ರಷ್ಟು ಕೊಡುತ್ತಿಲ್ಲ. ಹೀಗಾದರೆ ಎಲ್ಲಿ ಅಭಿವೃದ್ಧಿ ಆಗುತ್ತೆ. ಆದರೆ ನೀವು ಮಾಡುತ್ತಿರೋದು ತಪ್ಪು, ಅದನ್ನ ಹೇಳಿದ್ರೆ ತಪ್ಪಾ? ಪ್ರಮಾಣ ಸ್ವೀಕರಿಸುವವಾಗ ಎಲ್ಲರೂ ಒಂದೇ, ಆದರೆ ಈಗ ಏನು ಮಾಡಿದ್ದೀರಿ ನೀವು ಎಂದು ಪ್ರಶ್ನಿಸಿದ್ದಾರೆ.

ದಯಮಾಡಿ ಅನುದಾನ ಕೊಡಿ

ಹಿಂದೆ ಬಂದಿರುವ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಆಗಿದೆ. ರಸ್ತೆ, ಬೋರ್ ಪಾರ್ಕ್ ನಿರ್ಮಾಣ ಮಾಡಿದ್ದೇನೆ. ಆದರೆ ಈಗ ನೀವು ಮಾತಾಡಿದ್ದಕ್ಕೆ ಸ್ಪಷ್ಟೀಕರಣ ಕೊಡಿ. ನಾನು ಅಗೌರವ ನೀಡದಂತಹ ಕೆಲಸ ಏನು ಮಾಡಿದ್ದೀನಿ? ನಮ್ಕ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡೋಣ, ಅಭಿವೃದ್ಧಿ ಮಾಡಬೇಕು. ಈಗ ತಲೆ ಬಗ್ಗಿಸಬೇಕಾಗಿರುವುದು ಜನರ ಮುಂದೆ. ನೀವು ಮತ ಹಾಕಿದ್ದಕ್ಕೆ ನಾವು ಹೋರಾಟ ಮಾಡಲ್ಲ. ಆದರೆ ನಾವೇ ನಿಮ್ಮ ಮುಂದೆ ಬರುತ್ತೇನೆ. ದಯಮಾಡಿ ಅನುದಾನ ಕೊಡಿ ಎಂದಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:57 pm, Sun, 17 November 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ