ಬಿಜೆಪಿ ಶಾಸಕರಿರುವ ಜಯನಗರ ಬಿಟ್ಟು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ಅನುದಾನ: ಡಿಕೆಶಿ ನಡೆಗೆ ಬಿಜೆಪಿ ಕೆಂಡ

ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಮಂಜೂರು ಮಾಡಿ ಡಿಸಿಎಂ ಡಿಕೆ ಶಿವಕುಮಾರ್ ಹೊರಡಿಸಿರುವ ಆದೇಶ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಅವರ ಜಯನಗರ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅನುದಾನ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದು ದ್ವೇಷದ ರಾಜಕಾರಣ ಎಂದು ಬಿಜೆಪಿ ಆರೋಪಿದೆ.

ಬಿಜೆಪಿ ಶಾಸಕರಿರುವ ಜಯನಗರ ಬಿಟ್ಟು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ಅನುದಾನ: ಡಿಕೆಶಿ ನಡೆಗೆ ಬಿಜೆಪಿ ಕೆಂಡ
ಬಿಜೆಪಿ ಶಾಸಕರಿರುವ ಜಯನಗರ ಬಿಟ್ಟು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ಅನುದಾನ: ಡಿಕೆಶಿ ನಡೆಗೆ ಬಿಜೆಪಿ ಕೆಂಡ
Follow us
|

Updated on: Oct 29, 2024 | 2:06 PM

ಬೆಂಗಳೂರು, ಅಕ್ಟೋಬರ್ 29: ಬೆಂಗಳೂರು ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ತಲಾ 10 ಕೋಟಿ ರೂ. ಮಂಜೂರು ಮಾಡಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಇತ್ತೀಚೆಗೆ ಹೊರಡಿಸಿರುವ ಆದೇಶ ಇದೀಗ ವಿವಾದಕ್ಕೆ ಗ್ರಾಸವಾಗಿದೆ. ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಅವರ ಕ್ಷೇತ್ರವೊಂದನ್ನು ಬಿಟ್ಟು ಉಳಿದೆಲ್ಲ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ಆದೇಶಿಸಿರುವುದು ದ್ವೇಷದ ರಾಜಕಾರಣವಲ್ಲದೆ ಮತ್ತಿನ್ನೇನೂ ಅಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರದ ಕ್ರಮಗಳು ಸೇಡಿನ ರಾಜಕಾರಣದಿಂದ ಕೂಡಿವೆ. ಕಾಂಗ್ರೆಸ್‌ಗೆ ಮತ ಹಾಕದ ನಾಗರಿಕರನ್ನು ಶಿಕ್ಷಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

‘ಬ್ರ್ಯಾಂಡ್ ಬೆಂಗಳೂರಿನಲ್ಲಿ ಜಯನಗರ ಇಲ್ಲವೇ?’

ಡಿಸಿಎಂ ಡಿಕೆ ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಅವರ ಬ್ರ್ಯಾಂಡ್ ಬೆಂಗಳೂರು ಕನಸಿನಲ್ಲಿ ಜಯನಗರ ಇಲ್ಲವೇ ಎಂದು ಜಯನಗರ ಶಾಸಕ ಸಿಕೆ ರಾಮಮೂರ್ತಿ ಪ್ರಶ್ನಿಸಿದ್ದಾರೆ. ತಮ್ಮ ಕ್ಷೇತ್ರಕ್ಕೆ ಉದ್ಯಾನವನಗಳು, ರಸ್ತೆಗಳು ಮತ್ತು ಚರಂಡಿಗಳನ್ನು ನಿರ್ವಹಿಸಲು ಹಣದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಡಿಸಿಎಂ ತಮ್ಮ ವಿವೇಚನಾ ಅಧಿಕಾರ ಬಳಸಿ ಹೊರಡಿಸಿರುವ ಆದೇಶದ ಪ್ರಕಾರ ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ರೂ., ಬೆಂಗಳೂರು ನಗರ ಜಿಲ್ಲೆಯ ಭಾಗವಾಗಿರುವ ಆನೇಕಲ್‌ಗೆ 5 ಕೋಟಿ ರೂ. ಒಟ್ಟು 265 ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ಆರ್ ಅಶೋಕ್ ವಾಗ್ದಾಳಿ

ಬೆಂಗಳೂರಿನ ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 17 ಮತದಿಂದ ರಾಮಮೂರ್ತಿ ಗೆದ್ದಿದ್ದಕ್ಕೆ ದ್ವೇಷದ ರಾಜಕೀಯ ಮಾಡಲಾಗುತ್ತಿದೆ ಎಂದಿದ್ದಾರೆ. ನಾವು ರಾಮಲಿಂಗಾರೆಡ್ಡಿ, ಕೆಜೆ ಜಾರ್ಜ್​ಗೆ 80 ಕೋಟಿ ರೂ. ಅನುದಾನ ಕೊಟ್ಟಿದ್ದೆವು. ಅನುದಾನ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್​​ಗೆ ನಾನು ಪತ್ರ ಬರೆಯುತ್ತೇನೆ. ದ್ವೇಷದ ರಾಜಕಾರಣ ‌ಮಾಡಬೇಡಿ ಎಂದು ಪತ್ರ ಬರೆಯುತ್ತೇನೆ ಎಂದು ವಿಧಾನಸೌಧದಲ್ಲಿ ಅಶೋಕ್ ಹೇಳಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಹೇಳಿದ್ದೇನು?

ಅನುದಾನ ವಿಚಾರದಲ್ಲಿ ಕೆಲವು ಗೊಂದಲಗಳಿದ್ದು, ತಾರತಮ್ಯವಿಲ್ಲದೆ ಹಣ ಮಂಜೂರು ಮಾಡಲಾಗುವುದು ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಆದೇಶದಲ್ಲಿ, ಯಲಹಂಕ ವಿಧಾನಸಭೆ ಕ್ಷೇತ್ರವನ್ನು ಎರಡು ಬಾರಿ ಉಲ್ಲೇಖಿಸಲಾಗಿದೆ. ಇದು ಕಣ್ತಪ್ಪಿನಿಂದ ಆಗಿದೆ ಎಂದು ಭಾವಿಸುತ್ತೇನೆ. ಡಿಸಿಎಂ ಬೆಂಗಳೂರಿನ ಅಭಿವೃದ್ಧಿ ಗುರಿ ಹೊಂದಿದ್ದು, ತಾರತಮ್ಯ ಮಾಡುವುದಿಲ್ಲ. ದೋಷಗಳಿಲ್ಲದ ಪರಿಷ್ಕೃತ ಆದೇಶವನ್ನು ಶೀಘ್ರದಲ್ಲೇ ಹೊರಡಿಸುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್​​ನಿಂದ ಮತ್ತೆ ಬಿಗ್ ಆಪರೇಷನ್

ಬೆಂಗಳೂರಿನ ಕಳಪೆ ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡುವ ಸಂಬಂಧ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಕಳೆದ ವಾರದ ದಾಖಲೆಯ ಮಳೆಯ ನಂತರ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಇದು ಸಾಮಾನ್ಯ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ವಿಶೇಷವಾಗಿ ಉತ್ತರ ಬೆಂಗಳೂರು ಮತ್ತು ಮಹದೇವಪುರ, ಬೊಮ್ಮನಹಳ್ಳಿ ಮತ್ತು ಸರ್ಜಾಪುರ ರಸ್ತೆಯ ಐಟಿ ಬೆಲ್ಟ್‌ಗಳಲ್ಲಿ ಭಾರಿ ಅವ್ಯವಸ್ಥೆಯಾಗಿದೆ. ಹೀಗಾಗಿ ಅನುದಾನ ಘೋಷಣೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ಸಿಎಂ ಶೆಡ್ಯೂಲ್​ನಲ್ಲಿ 10 ಗಂಟೆ ಲೋಕಾಯುಕ್ತ 12 ಕ್ಕೆ ಚನ್ನಪಟ್ಟಣ ಅಂತಿತ್ತು!
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ
ಸಿಎಂ ಕಾನೂನಿಗಿಂತ ದೊಡ್ಡವರಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಿದ್ದಾರೆ: ಸಿಂಹ
ವ್ಲಾಗ್ ಮಾಡುವಾಗ ಎದೆ ಸ್ಪರ್ಶಿಸಿ ಓಡಿ ಹೋದ ಬಾಲಕ, ಕಣ್ಣೀರಿಟ್ಟ ಯುವತಿ
ವ್ಲಾಗ್ ಮಾಡುವಾಗ ಎದೆ ಸ್ಪರ್ಶಿಸಿ ಓಡಿ ಹೋದ ಬಾಲಕ, ಕಣ್ಣೀರಿಟ್ಟ ಯುವತಿ
ರಾಜ್ಯ ವಕ್ಫ್ ಬೋರ್ಡ್​ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು: ಜಮೀರ್
ರಾಜ್ಯ ವಕ್ಫ್ ಬೋರ್ಡ್​ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು: ಜಮೀರ್
ಚಿಕ್ಕಮಗಳೂರು: ಈ ಗ್ರಾಮಗಳಲ್ಲಿ ಹಿಂಡುಹಿಂಡಾಗಿ ಓಡಾಡುತ್ತಿವೆ ಆನೆಗಳು, ಎಚ್ಚರ
ಚಿಕ್ಕಮಗಳೂರು: ಈ ಗ್ರಾಮಗಳಲ್ಲಿ ಹಿಂಡುಹಿಂಡಾಗಿ ಓಡಾಡುತ್ತಿವೆ ಆನೆಗಳು, ಎಚ್ಚರ
ಮೋಕ್ಷಿತಾ ಪ್ರಶ್ನೆಗೆ ನಡುಗಿ ಕಣ್ಣೀರು ಹಾಕಿದ ಧನರಾಜ್
ಮೋಕ್ಷಿತಾ ಪ್ರಶ್ನೆಗೆ ನಡುಗಿ ಕಣ್ಣೀರು ಹಾಕಿದ ಧನರಾಜ್
ಕನಸಿನಲ್ಲಿ ದೇವರು, ದೇವಾಲಯಗಳು ಬಂದ್ರೆ ಏನರ್ಥ? ಇಲ್ಲಿದೆ ವಿವರ
ಕನಸಿನಲ್ಲಿ ದೇವರು, ದೇವಾಲಯಗಳು ಬಂದ್ರೆ ಏನರ್ಥ? ಇಲ್ಲಿದೆ ವಿವರ
ಈ ಒಂದು ರಾಶಿಯವರಿಗಿಂದು ಆರೋಗ್ಯ ಭಾಗ್ಯ, 12 ರಾಶಿಗಳ ದಿನಭವಿಷ್ಯ ಇಲ್ಲಿದೆ
ಈ ಒಂದು ರಾಶಿಯವರಿಗಿಂದು ಆರೋಗ್ಯ ಭಾಗ್ಯ, 12 ರಾಶಿಗಳ ದಿನಭವಿಷ್ಯ ಇಲ್ಲಿದೆ
ಕಾಲು ಜಾರಿ ಬಾವಿಗೆ ಬಿದ್ದ ಆನೆಮರಿ ಬದುಕುಳಿದಿದ್ದು ಹೇಗೆ?
ಕಾಲು ಜಾರಿ ಬಾವಿಗೆ ಬಿದ್ದ ಆನೆಮರಿ ಬದುಕುಳಿದಿದ್ದು ಹೇಗೆ?