AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯದ ಮೇಲೆ ಬರೆ: ತರಕಾರಿ ಬೆನ್ನಲ್ಲೇ ದಿನಸಿ ಸಾಮಗ್ರಿಗಳ ಬೆಲೆಯಲ್ಲೂ ಏರಿಕೆ; ಇಲ್ಲಿದೆ ಮಾರುಕಟ್ಟೆ ದರ

ಈಗಾಗಲೆ ತರಕಾರಿ ಬೆಲೆ ದುಪ್ಪಟ್ಟಾಗಿದ್ದು, ಇದರ ಬೆನ್ನಲ್ಲೇ ದಿನಸಿ ಸಾಮಾಗ್ರಿಗಳ ಬೆಲೆ ಕೂಡ ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೇ ಈ ವಾರ ದಿನಸಿ ಸಾಮಗ್ರಿಗಳ ಬೆಲೆ 5 ರಿಂದ 10 ರುಪಾಯಿ ಏರಿಕೆಯಾಗಿದೆ.

ಗಾಯದ ಮೇಲೆ ಬರೆ: ತರಕಾರಿ ಬೆನ್ನಲ್ಲೇ ದಿನಸಿ ಸಾಮಗ್ರಿಗಳ ಬೆಲೆಯಲ್ಲೂ ಏರಿಕೆ; ಇಲ್ಲಿದೆ ಮಾರುಕಟ್ಟೆ ದರ
ಸಾಂದರ್ಭಿಕ ಚಿತ್ರ
Follow us
Poornima Agali Nagaraj
| Updated By: ವಿವೇಕ ಬಿರಾದಾರ

Updated on:Jul 03, 2023 | 11:54 AM

ಬೆಂಗಳೂರು: ಕರ್ನಾಟಕಕ್ಕೆ ಮುಂಗಾರು (Monsoon) ಕಾಲಿಟ್ಟಿದ್ದರೂ, ಅಂದುಕೊಂಡಷ್ಟು ಮಳೆಯಾಗುತ್ತಿಲ್ಲ. ಇದರಿಂದ ರೈತ (Farmer) ಕಂಗಾಲ ಆಗಿದ್ದು, ತಾನು ಅಂದುಕೊಂಡಷ್ಟು ಇಳುವರಿ ಬಾರದೆ ನಷ್ಟ ಅನುಭವಿಸುತ್ತಿದ್ದಾನೆ. ಇದರಿಂದ ಮಾರುಕಟ್ಟೆಗೆ (Market) ಸಮರ್ಪಕವಾಗಿ ತರಕಾರಿ (Vegetables) ಬಾರದ ಹಿನ್ನೆಲೆ ಬೆಲೆಗಳು ಗಗನಕ್ಕೆ ಏರುತ್ತಿವೆ. ಈಗಾಗಲೆ ತರಕಾರಿ ಬೆಲೆ ದುಪ್ಪಟ್ಟಾಗಿದ್ದು, ಇದರ ಬೆನ್ನಲ್ಲೇ ದಿನಸಿ ಸಾಮಗ್ರಿಗಳ (Groceries) ಬೆಲೆ ಕೂಡ ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೇ ಈ ವಾರ ದಿನಸಿ ಸಾಮಗ್ರಿಗಳ ಬೆಲೆ 5 ರಿಂದ 10 ರುಪಾಯಿ ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ 50 ರೂ ಇದ್ದ ಸ್ಟೀಮ್ ಹಾಗೂ ಸೋನೆ ಮುಸುರಿ ರಾ ರೈಸ್ ಈ ವಾರ 50 ರಿಂದ 60 ರೂ. ಆಗಿದೆ.

ದಿನಸಿ ಸಾಮಗ್ರಿಗಳ ಬೆಲೆ ಏರಿಕೆ
ಸಾಮಗ್ರಿ ಹಿಂದಿನ‌ ದರ (ರೂ.) ಈಗಿನ ದರ (ರೂ.)
ಅಕ್ಕಿ 40 60
ತೂರ್ ದಾಲ್ 96 145 – 150
ಉದ್ದಿನಬೇಳೆ 110 140
ಮಸೂರ್‌ದಾಲ್ 74 88
ಹೆಸರು ಬೇಳೆ 95 120
ಜೀರಾ 350 750
ಅರಿಶಿಣ ಪುಡಿ 126 307
ಚಿಲ್ಲಿ ಪೌಡರ್ 186 425
ದನಿಯಾ ಪೌಡರ್ 150 218
ಪೆಪ್ಪರ್ 380 580
ಬ್ಯಾಡಗಿ ಮೆಣಸು 330 850
ಅವರೆಬೇಳೆ 130 190
ಅವರೆಕಾಳು 110 150
ಅಲಸಂದೆ ಕಾಳು 70 110
ಹುರುಳಿಕಾಳು 60 90
ಅವಲಕ್ಕಿ 35 48
ರಾಗಿ 30 38

ಇದನ್ನೂ ಓದಿ: ಮತ್ತೆ ಜಿಗಿದ ತರಕಾರಿ ದರ; ಯಾವ ಜಿಲ್ಲೆಯಲ್ಲಿ ಎಷ್ಟಿದೆ ಇಲ್ಲಿದೆ ಮಾಹಿತಿ

ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಆಸೆ ತೋರಿಸಿ ಬೆಲೆ ಏರಿಕೆಯ ಬರೆ ಹಾಕುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಟೊಮೇಟೊ ಬೆಲೆ ದಶಕ ದಾಟಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ. ಹಾಗೇ ದಿನಸಿ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:54 am, Mon, 3 July 23

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ