Hunger has no Religion | ಹಸಿದ ಜೀವಗಳಿಗೆ ಹೊಟ್ಟೆ ತುಂಬಿಸುತ್ತಿರುವ ಹುಬ್ಬಳ್ಳಿಯ ಯುವಕರ ತಂಡ!

Hunger has no Religion | ತಾವು ತಮ್ಮ ಕಷ್ಟ ಜೀವನದಲ್ಲಿ ಉಪವಾಸ ಇದ್ದೆವು. ಹೀಗಾಗಿಯೇ ನಾವು ಅನುಭವಿಸಿದ ಕಷ್ಟ ಯಾರಿಗೂ ಬರಬಾರದು ಎನ್ನುವ ಸದುದ್ದೇಶದಿಂದ ಹಸಿವು ಮುಕ್ತ ನಗರವನ್ನಾಗಿಸುವ ಧ್ಯೇಯದೊಂದಿಗೆ ಹೋರಾಟ ನಡೆಸುತ್ತಿದ್ದಾರೆ.

Hunger has no Religion | ಹಸಿದ ಜೀವಗಳಿಗೆ ಹೊಟ್ಟೆ ತುಂಬಿಸುತ್ತಿರುವ ಹುಬ್ಬಳ್ಳಿಯ ಯುವಕರ ತಂಡ!
ಕರ್ನಾಟಕ ವೆಲ್ಫೆರ್ ಪೀಸ್ ಕೌಂಸಿಲ್ ಸಂಸ್ಥೆಯಿಂದ ಹಸಿದವರಿಗೆ ಊಟ
Follow us
preethi shettigar
| Updated By: ಸಾಧು ಶ್ರೀನಾಥ್​

Updated on:Feb 22, 2021 | 2:26 PM

ಧಾರವಾಡ: ಹಸಿದಾಗ ಅನ್ನ, ದಣಿದಾಗ ನೀರು ಕೊಡದಿದ್ದ ಮೇಲೆ ಏನ ಚಂದವೋ… ಎನ್ನುವ ಕನ್ನಡ ಸಿನಿಮಾ ಹಾಡಿನಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಸಿದ್ಧಾರೂಢರ ರೇಲ್ವೆ ನಿಲ್ದಾಣದ ಆವರಣದಲ್ಲಿನ ಚಿಕ್ಕ ಮೈದಾನದಲ್ಲಿ ಕರ್ನಾಟಕ ವೆಲ್​ಫೇರ್​ ಪೀಸ್ ಕೌನ್ಸಿಲ್​  ಸಂಸ್ಥೆಯ ಯುವಕರ ತಂಡ ಕಳೆದ ಹಲವಾರು ತಿಂಗಳಿನಿಂದ ಹಸಿವು ಮುಕ್ತ ನಗರವನ್ನ ಮಾಡುವುದಕ್ಕೆ ಶ್ರಮ ಪಡುತ್ತಿದ್ದಾರೆ. ಹಂಗರ್ ಹ್ಯಾಸ್ ನೋ ರಿಲಿಜನ್ ಎಂಬ ಧ್ಯೇಯವನ್ನು ಇಟ್ಟುಕೊಂಡು, ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಹಸಿದ ಬಡವರಿಗೆ, ಅನಾಥರಿಗೆ, ಕಾರ್ಮಿಕರಿಗೆ ಹಸಿವು ನೀಗಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿರುವ ಕರ್ನಾಟಕ ವೆಲ್​ಫೇರ್​ ಪೀಸ್ ಕೌನ್ಸಿಲ್​ 

ಸಂಸ್ಥೆಯ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. Hunger has no Religion

ದಿನಕ್ಕೆ ನೂರಾರು ಜನರು ಉದ್ಯೋಗ ಅರಿಸಿ, ಹಳ್ಳಿಯಿಂದ ಹುಬ್ಬಳ್ಳಿಗೆ ಆಗಮಿಸುತ್ತಾರೆ. ಹೀಗೆ ಬರುವ ಜನರು ಕೆಲಸ ಸಿಗದೇ ತುತ್ತು ಅನ್ನಕ್ಕಾಗಿ ಪರದಾಟವನ್ನು ನಡೆಸುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ, ಮಧ್ಯಾಹ್ನದ ವೇಳೆಯಲ್ಲಿ ಅನ್ನ, ಬೆಳೆ ಸಾರು, ಜೊತೆಗೆ ಶೀರಾ ಸಹ ನೀಡಿ ಹೊಟ್ಟೆ ತುಂಬಿಸುವ ಕಾರ್ಯವನ್ನು ಈ ತಂಡ ಮಾಡುತ್ತಿದೆ.ಇನ್ನು ಇವರ ಈ ಸಹಾಯಹಸ್ತಕ್ಕೆ ಹಸಿದ ಜೀವಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಅನ್ನ ನೀಡುವ ಕೆಲಸದ ಹಿಂದಿದೆ ಹಸಿವಿನ ಮಹತ್ವ:

ಈ ಸಂಸ್ಥೆಯ ಸದಸ್ಯರು ಮಾಡಿರುವ ನಿರ್ಧಾರವೇ ಅನ್ನ ನೀಡುವ ಕೆಲಸದ ಹಿಂದಿದೆ ಹಸಿವಿನ ಮಹತ್ವ ಎಂಬ ಉದ್ದೇಶದಿಂದ. ಇದರ ಅರ್ಥ ಯಾರು ಕೂಡ ಹಸಿವಿನಿಂದ ನರಳಬಾರದು, ಹಸಿವಿನಿಂದ ಮಲಗಬಾರದು ಎನ್ನುವುದಾಗಿದೆ. ಹೀಗಾಗಿ ನಗರದ ತುಂಬೆಲ್ಲಾ ಎರಡೂ ಹೊತ್ತು ಓಡಾಟ ನಡೆಸುವ ಈ ಗುಂಪು ಭಿಕ್ಷುಕರು, ಕಡುಬಡವರಿಗೆ ಅನ್ನ ಹಾಕುವ ಕಾರ್ಯ ಮಾಡುತ್ತಿದೆ.

Hunger Has No Religion

ಹಂಗರ್ ಹ್ಯಾಸ್ ನೋ ರಿಲಿಜನ್ ಧ್ಯೇಯದ ಅಡಿಯಲ್ಲಿ ಅನ್ನದಾನ

ಈ ತಂಡದಿಂದ ನಗರದ ರೈಲ್ವೇ ನಿಲ್ದಾಣ, ಬಸ್ ನಿಲ್ದಾಗಳಲ್ಲಿ ಹಸಿವಿನಿಂದ ಬಳಲುವ ಎಲ್ಲರಿಗೂ ಒಂದು ತುತ್ತು ಅನ್ನ ನೀಡಿ ಅನ್ನದಾತರಾಗುತ್ತಿದ್ದಾರೆ. ತಾವು ತಮ್ಮ ಕಷ್ಟ ಜೀವನದಲ್ಲಿ ಉಪವಾಸ ಇದ್ದೆವು. ಹೀಗಾಗಿಯೇ ನಾವು ಅನುಭವಿಸಿದ ಕಷ್ಟ ಯಾರಿಗೂ ಬರಬಾರದು ಎನ್ನುವ ಸದುದ್ದೇಶದಿಂದ ಹಸಿವು ಮುಕ್ತ ನಗರವನ್ನಾಗಿಸುವ ಧ್ಯೇಯದೊಂದಿಗೆ ಹೋರಾಟ ನಡೆಸುತ್ತಿದ್ದಾರೆ.

Hunger Has No Religion

ಸರತಿ ಸಾಲಿನಲ್ಲಿ ನಿಂತು ಊಟ ಪಡೆಯುತ್ತಿರುವ ದೃಶ್ಯ

ಒಟ್ಟಿನಲ್ಲಿ ದೇಶದ ಹಲವೆಡೆ ಜಾತಿ ಭೇದ ಭಾವ ಮಾಡಿಕೊಂಡು ಗುದ್ದಾಟ ನಡೆಸಿದರೆ, ಇಲ್ಲೊಂದು ಮುಸ್ಲಿಂ ಯುವಕ ಸಂಸ್ಥೆ ಹಸಿದವರಿಗೆ ಯಾವ ಜಾತಿ, ನಾವೆಲ್ಲರೂ ಒಂದೇ ಎಂಬ ಜಾಗೃತಿಯ ಜೊತೆಗೆ, ಹಸಿವು ನೀಗಿಸುತ್ತಿರುವ ಈ ಸಂಸ್ಥೆಗೆ, ಹ್ಯಾಟ್ಸಾಪ್ ಹೇಳಲೆಬೇಕು. ಇಂತಹ ಸಾಮಾಜಿಕ ಕಾರ್ಯ ಇನ್ನಷ್ಟು ವ್ಯಾಪಿಸಲಿ ಎಂಬುವುದೇ ನಮ್ಮೆಲ್ಲರ ಆಶಯವಾಗಿದೆ.

Hunger Has No Religion

ಊಟ ಸೇವಿಸುತ್ತಿರುವ ಚಿತ್ರಣ

ಇದನ್ನೂ ಓದಿ: ಹಣ ಕೊಡದೆ ನಿರ್ಗತಿಕರ ಹೊಟ್ಟೆ ತುಂಬಿಸಲು ಹೊಸ ಐಡಿಯಾ.. ‘ಡಿಎಫ್’ ಫುಡ್ ಕಾರ್ಡ್ ಕೊಟ್ಟರೆ ಊಟ ಉಚಿತ

Published On - 2:26 pm, Mon, 22 February 21

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ