ಅಂದು ಅಧಿಕಾರಿ ಮೇಲೆ ಅಟ್ಯಾಕ್: ಇಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ!
ಹಾಸನ: ಚೆಸ್ಕಾಂನ ಹಿರಿಯ ಅಧಿಕಾರಿ ಮೇಲೆ ಹಲ್ಲೆ ಮಾಡಿ ಜೈಲುಪಾಲಾಗಿದ್ದ ವ್ಯಕ್ತಿ ತಡರಾತ್ರಿ ರೈಲಿಗೆ ತಲೆಕೊಟ್ಟ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನದ ರೈಲ್ವೆ ನಿಲ್ದಾಣ ಸಮೀಪವೇ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿದ್ಯುತ್ ಪ್ರಸರಣ ಪ್ಲಾಂಟ್ ಸ್ವಚ್ಛಗೊಳಿಸುವ ಕೆಲಸ ಹೇಳಿದ್ದಕ್ಕೆ 2019ರ ಜೂನ್ 14ರಂದು ಚೆಸ್ಕಾಂ ಸಹಾಯಕ ಕಾರ್ಯಪಾಲಕಿ ಸ್ವಾತಿ ದೀಕ್ಷಿತ್ ಮೇಲೆ ದಾಳಿ ಮಾಡಿದ್ದ. ಅಂದು ಅಧಿಕಾರಿ ಮೇಲೆ ಕತ್ತಿಯಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದ. ಗಂಭೀರ ಗಾಯಗೊಂಡಿದ್ದ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದರು. ಪ್ರಕರಣ ಸಂಬಂಧ ಆರೋಪಿ ಮಂಜುನಾಥ್ […]
ಹಾಸನ: ಚೆಸ್ಕಾಂನ ಹಿರಿಯ ಅಧಿಕಾರಿ ಮೇಲೆ ಹಲ್ಲೆ ಮಾಡಿ ಜೈಲುಪಾಲಾಗಿದ್ದ ವ್ಯಕ್ತಿ ತಡರಾತ್ರಿ ರೈಲಿಗೆ ತಲೆಕೊಟ್ಟ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನದ ರೈಲ್ವೆ ನಿಲ್ದಾಣ ಸಮೀಪವೇ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿದ್ಯುತ್ ಪ್ರಸರಣ ಪ್ಲಾಂಟ್ ಸ್ವಚ್ಛಗೊಳಿಸುವ ಕೆಲಸ ಹೇಳಿದ್ದಕ್ಕೆ 2019ರ ಜೂನ್ 14ರಂದು ಚೆಸ್ಕಾಂ ಸಹಾಯಕ ಕಾರ್ಯಪಾಲಕಿ ಸ್ವಾತಿ ದೀಕ್ಷಿತ್ ಮೇಲೆ ದಾಳಿ ಮಾಡಿದ್ದ. ಅಂದು ಅಧಿಕಾರಿ ಮೇಲೆ ಕತ್ತಿಯಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದ. ಗಂಭೀರ ಗಾಯಗೊಂಡಿದ್ದ ಅಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದರು. ಪ್ರಕರಣ ಸಂಬಂಧ ಆರೋಪಿ ಮಂಜುನಾಥ್ ಜೈಲು ಪಾಲಾಗಿದ್ದ.
ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬೇಲ್ ಮೇಲೆ ಮಂಜುನಾಥ್ ಬಿಡುಗಡೆಯಾಗಿದ್ದ. ತಡರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈಲು ಮಂಜುನಾಥ್ ಕುತ್ತಿಗೆ ಮೇಲೆ ಹರಿದು ರುಂಡ ಮುಂಡ ಬೇರ್ಪಟ್ಟಿದೆ. ಘಟನಾ ಸ್ಥಳಕ್ಕೆ ಹಾಸನ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 9:56 am, Sat, 25 January 20