ಅಚ್ಚರಿ ಎನಿಸಿದರೂ ನಿಜ; ನಾಗಾರ್ಜುನ, ನಾಗ ಚೈತನ್ಯ, ಅಖಿಲ್ ಬಾಳಲ್ಲಿ ಇಬ್ಬರು ಹುಡುಗಿಯರು
ಅಕ್ಕಿನೇನಿ ನಾಗಾರ್ಜುನ ಅವರು ಮೊದಲು ಮದುವೆ ಆಗಿದ್ದು 1984ರಲ್ಲಿ. ಆ ಬಳಿಕ ವಿಚ್ಛೇದನ ಕೊಟ್ಟು 1990ರಲ್ಲಿ ಇವರು ಎರಡನೇ ಮದುವೆ ಆದರು. ನಾಗ ಚೈತನ್ಯ ಕೂಡ ಇತ್ತೀಚೆಗೆ ಎರಡನೇ ಮದುವೆ ಆಗಿದ್ದಾರೆ. ಅಖಿಲ್ ಅಕ್ಕಿನೇನಿ ಈವರೆಗೆ ಮದುವೆ ಆಗಿಲ್ಲ. ಆದರೆ, ಇವರ ಬಾಳಲ್ಲೂ ಇಬ್ಬರು ಹುಡುಗಿಯರು ಬಂದು ಹೋಗಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಅಕ್ಕಿನೇನಿ ಕುಟುಂಬ ಇತ್ತೀಚೆಗೆ ಸಾಕಷ್ಟು ಚರ್ಚೆಯಲ್ಲಿ ಇದೆ. ಇವರು ಸಿನಿಮಾ ರಂಗದಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ. ಅದೇ ರೀತಿ ವೈಯಕ್ತಿಕ ವಿಚಾರ ಕೂಡ ಸಾಕಷ್ಟು ಚರ್ಚೆ ಆಗುತ್ತಿದೆ. ನಾಗಾರ್ಜುನ ಮಾತ್ರವಲ್ಲ ಅವರ ಮಕ್ಕಳಾದ ನಾಗ ಚೈತನ್ಯ ಹಾಗೂ ಅಖಿಲ್ ಅಕ್ಕಿನೇನಿ ಬಾಳಲ್ಲಿ ಎರಡು ಹುಡುಗಿಯರ ಆಗಮನ ಆಗಿದೆ. ಆ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ.
ಅಕ್ಕಿನೇನಿ ನಾಗಾರ್ಜುನ
ಅಕ್ಕಿನೇನಿ ನಾಗಾರ್ಜುನ ಅವರು ಮೊದಲು ಮದುವೆ ಆಗಿದ್ದು 1984ರಲ್ಲಿ. ಇವರು ಲಕ್ಷ್ಮೀ ದಗ್ಗುಬಾಟಿ ಅವರನ್ನು ವಿವಾಹ ಆದರು. ದಗ್ಗುಬಾಟಿ ಕುಟುಂಬ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದೆ. ಹೀಗಾಗಿ, ಈ ಮದುವೆ ಸಾಕಷ್ಟು ಅದ್ದೂರಿಯಾಗಿ ನಡೆಯಿತು. ಆದರೆ, 1990ರಲ್ಲಿ ಇವರು ಬೇರೆ ಆದರು. ಈ ದಂಪತಿಗೆ ಜನಿಸಿದ್ದೇ ನಾಗ ಚೈತನ್ಯ. ಆ ಬಳಿಕ 1992ರಲ್ಲಿ ಅಮಲಾ ಅವರನ್ನು ವಿವಾಹ ಆದರು ನಾಗಾರ್ಜುನ. ಈ ದಂಪತಿಗೆ ಅಖಿಲ್ ಜನಿಸಿದರು. ನಾಗಾರ್ಜುನ ಮಕ್ಕಳ ಬಾಳಲ್ಲೂ ಇಬ್ಬರು ಹುಡುಗಿಯರ ಆಗಮನ ಆಗಿದೆ.
ನಾಗ ಚೈತನ್ಯ
ನಾಗ ಚೈತನ್ಯ ಅವರು 2017ರಲ್ಲಿ ಸಮಂತಾ ಅವರನ್ನು ಮದುವೆ ಆದರು. ಈ ಮದುವೆ ಹೆಚ್ಚು ದಿನ ಉಳಿದುಕೊಳ್ಳಲಿಲ್ಲ. ನಾಲ್ಕೇ ವರ್ಷಗಳಲ್ಲಿ ಇವರು ಬೇರೆ ಆದರು. ಆದರೆ, ಇವರ ಬೇರೆ ಆಗುವಿಕೆಗೆ ಕಾರಣ ಏನು ಎಂಬುದನ್ನು ರಿವೀಲ್ ಮಾಡಿಲ್ಲ. ಈಗ ನಾಗ ಚೈತನ್ಯ ಅವರು ಶೋಭಿತಾ ಧುಲಿಪಾಲ್ನ ವಿವಾಹ ಆಗಿದ್ದಾರೆ. ಈ ಕಾರಣಕ್ಕೆ ನಾಗ ಚೈತನ್ಯ ಅವರು ಸಾಕಷ್ಟು ಟ್ರೋಲ್ಗಳನ್ನು ಎದುರಿಸುತ್ತಾ ಇದ್ದಾರೆ. ಆದರೆ, ಈ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇತ್ತೀಚೆಗಷ್ಟೇ ಅದ್ದೂರಿಯಾಗಿ ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹ ಜರುಗಿದೆ.
ಇದನ್ನೂ ಓದಿ: ಟ್ರೋಲ್ ಆಗುತ್ತಿರುವ ನಾಗ ಚೈತನ್ಯ 2ನೇ ಪತ್ನಿ ಶೋಭಿತಾ ಧುಲಿಪಾಲ
ಅಖಿಲ್ ಅಕ್ಕಿನೇನಿ
ಅಖಿಲ್ ಅಕ್ಕಿನೇನಿ ಈವರೆಗೆ ಮದುವೆ ಆಗಿಲ್ಲ. ಆದರೆ, ಇವರ ಬಾಳಲ್ಲೂ ಇಬ್ಬರು ಹುಡುಗಿಯರು ಬಂದು ಹೋಗಿದ್ದಾರೆ. 2016ರ ಡಿಸೆಂಬರ್ನಲ್ಲಿ ಅಖಿಲ್ ಅವರು ಶ್ರಿಯಾ ಭೂಪಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. 2017ರಲ್ಲಿ ಇಟಲಿಯಲ್ಲಿ ಇವರ ವಿವಾಹ ಅದ್ದೂರಿಯಾಗಿ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಇವರು ಬೇರೆ ಆದರು. ಈಗ ಅಖಿಲ್ ಅವರು ಝೈನಾಬ್ ರಾವ್ಡ್ಜೀ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2025ರಲ್ಲಿ ಇವರ ವಿವಾಹ ನೆರವೇರುವ ನಿರೀಕ್ಷೆ ಇದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.