ಹಾಸನ: ಕಾಡಾನೆಯೊಂದು ಮರ ಮುರಿದು ತಂತಿ ಮೇಲೆ ಹಾಕಿ ಬೇಲಿ ದಾಟಲು ಪ್ರಯತ್ನ ಪಟ್ಟಿರುವ ದೃಶ್ಯ ಸಕಲೇಶಪುರ ತಾಲ್ಲೂಕಿನ ಆಲೆಬೇಲೂರಿನಲ್ಲಿ ಕಂಡು ಬಂದಿದೆ. ಸಕಲೇಶಪುರ ಸುತ್ತಾ ಮುತ್ತಾ ಆನೆಗಳ ಹಾವಳಿ ಅತಿಯಾಗಿರುವುದರಿಂದ ಆನೆ ನಿಯಂತ್ರಣಕ್ಕೆ ಅಲ್ಲಿನ ಜನ ಸೋಲಾರ್ ಬೇಲಿ ಅಳವಡಿಸಿದ್ದರು.
ಆದರೆ ಒಂಟಿ ಸಲಗ ಬಹಳ ಚಾಣಾಕ್ಷತೆಯಿಂದ ವಿದ್ಯುತ್ ಸಂಪರ್ಕವಿರೋ ಸೋಲಾರ್ ಬೇಲಿಯನ್ನ ಮುಟ್ಟಿ ನೋಡಿ, ಕರೆಂಟ್ ಇರೋದನ್ನ ದೃಡಪಡಿಸಿಕೊಂಡು ಅಲ್ಲೆ ಇದ್ದ ಮರ ಮುರಿದು ಅದನ್ನು ತಂತಿಮೇಲೆ ಹಾಕಿ ವಿದ್ಯುತ್ ಸಂಪರ್ಕ ತಪ್ಪಿಸಿ ಚಾಲಾಕಿತನದಿಂದ ಬೇಲಿ ದಾಟಿದೆ. ರೈತರು ಸೋಲಾರ್ ಬೇಲಿ ಅಳವಡಿಸಿದರೂ ಆನೆ ಹಾವಳಿ ನಿಯಂತ್ರಣಕ್ಕೆ ಬಾರದೆ ಕಂಗಾಲಾಗಿದ್ದಾರೆ.