Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜುನನ ಸಾವಿನ ನೋವಿನೊಂದಿಗೆ ಸ್ಥಗಿತಗಿಂಡಿದ್ದ ಕಾಡಾನೆ ಕಾರ್ಯಾಚರಣೆ ನಾಳೆಯಿಂದ ಮತ್ತೆ ಆರಂಭ

ದಸರಾ ಧೀರ, ಇಡೀ ಕರುನಾಡೇ ಮೆಚ್ಚಿದ್ದ ಅರ್ಜುನನ ಸಾವಿನ ನೋವಿನೊಂದಿಗೆ ಸ್ಥಗಿತಗಿಂಡಿದ್ದ ಕಾಡಾನೆ ಕಾರ್ಯಾಚರಣೆ ನಾಳೆಯಿಂದ ಮತ್ತೆ ಪ್ರಾರಂಭವಾಗುತ್ತಿದೆ. ಮಲೆನಾಡಲ್ಲಿ ಮತ್ತೆ ಕಾಡಾನೆ ಉಪಟಳ ಹೆಚ್ಚಾಗಿದೆ. ಈ ಹಿನ್ನಲೆ ನಾಳೆಯಿಂದ ಕಾರ್ಯಾಚರಣೆ ಪ್ರಾರಂಭವಾಗುತ್ತಿದೆ. ನಾಳೆ ಬೇಲೂರು ಭಾಗದಲ್ಲಿ ಕಾಡಾನೆ ಕಾರ್ಯಾಚರಣೆ ನಡೆಯಲಿದೆ.

ಅರ್ಜುನನ ಸಾವಿನ ನೋವಿನೊಂದಿಗೆ ಸ್ಥಗಿತಗಿಂಡಿದ್ದ ಕಾಡಾನೆ ಕಾರ್ಯಾಚರಣೆ ನಾಳೆಯಿಂದ ಮತ್ತೆ ಆರಂಭ
ಬಿಕ್ಕೋಡು ಆನೆ ಕ್ಯಾಂಪ್‌
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 10, 2024 | 3:57 PM

ಹಾಸನ, ಜನವರಿ 10: ದಸರಾ ಧೀರ, ಇಡೀ ಕರುನಾಡೇ ಮೆಚ್ಚಿದ್ದ ಅರ್ಜುನ (Arjuna) ನ ಸಾವಿನ ನೋವಿನೊಂದಿಗೆ ಸ್ಥಗಿತಗಿಂಡಿದ್ದ ಕಾಡಾನೆ ಕಾರ್ಯಾಚರಣೆ ನಾಳೆಯಿಂದ ಮತ್ತೆ ಪ್ರಾರಂಭವಾಗುತ್ತಿದೆ. ಮಲೆನಾಡಲ್ಲಿ ಮತ್ತೆ ಕಾಡಾನೆ ಉಪಟಳ ಹೆಚ್ಚಾಗಿದೆ. ಈ ಹಿನ್ನಲೆ ನಾಳೆಯಿಂದ ಕಾರ್ಯಾಚರಣೆ ಪ್ರಾರಂಭವಾಗುತ್ತಿದೆ. ಕಳೆದ ಬಾರಿ ನ.23 ರಿಂದ ಕಾಡಾನೆ ಕಾರ್ಯಾಚರಣೆ ಪ್ರಾರಂಭಿಸಿದ್ದ ಅರಣ್ಯಾಧಿಕಾರಿಗಳು, ಡಿ. 4ರಂದು ಅರ್ಜುನನ ಸಾವಿನಿಂದ ಸ್ಥಗಿತಗಿಂಡಿತ್ತು. ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ವಲಯದಲ್ಲಿ ಅರ್ಜುನ ಸಾವನ್ನಪ್ಪಿದ್ದ. ಅರ್ಜುನನ ಸಾವಿಗೆ ಕೋಟ್ಯಂತರ ಜನರು ಮರುಕ ವ್ಯಕ್ತಪಡಿಸಿದ್ದರು.

ನಾಳೆ ಬೇಲೂರು ಭಾಗದಲ್ಲಿ ಕಾಡಾನೆ ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಬೇಲೂರು ತಾಲೂಕಿನ ಬಿಕ್ಕೋಡು ಆನೆ ಕ್ಯಾಂಪ್‌ಗೆ ಸಾಕಾನೆಗಳಾದ ಹರ್ಷ, ಸುಗ್ರೀವ, ಧನಂಜಯ, ಅಶ್ವತ್ಥಾಮ, ಪ್ರಶಾಂತ ಆಗಮಿಸಿದ್ದು, ನಾಳೆ ಕರ್ನಾಟಕ ಭೀಮ, ಅಭಿಮನ್ಯು ಸೇರಿ ಇನ್ನೂ ಕೆಲವು ಸಾಕಾನೆಗಳು ಬರುವ ನಿರೀಕ್ಷೆಯಿದೆ. ಈ ಬಾರಿ 10 ಸಾಕಾನೆಗಳ ಮೂಲಕ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲಿದೆ.

ಇದನ್ನೂ ಓದಿ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಂಬಾರಿ ಅರ್ಜುನ ಆನೆ ಹುತಾತ್ಮ ಪ್ರಕರಣ; ತನಿಖೆ ಆರಂಭಿಸಿದ ತನಿಖಾ ತಂಡ

ಡಿ.4 ರಂದು ಕಾಡಾನೆ ದಾಳಿಯಿಂದ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿದ್ದ. ಅರ್ಜುನನನ್ನು ಕೊಂದ ಕಾಡಾನೆ ಹಿಡಿದೇ ತೀರುತ್ತೇವೆಂದು ಮಾವುತರು ಶಪಥ ಮಾಡಿದ್ದರು. ಆ ನಿಟ್ಟಿನಲ್ಲಿ ಅಭಿಮನ್ಯು ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಲಿದೆ.

ಇದನ್ನೂ ಓದಿ: ಅರ್ಜುನನ ಸಮಾಧಿ ಎದುರು ಮುಗಿಲು ಮುಟ್ಟಿದ ಮಾವುತನ ಆಕ್ರಂಧನ; ಹನ್ನೊಂದು ದಿನ ಕಳೆದ್ರು ನಿಲ್ಲುತ್ತಿಲ್ಲ ಕಣ್ಣೀರು

ವೀರಮರಣವನ್ನಪ್ಪಿದ ದಸರಾ ವೀರ ಅರ್ಜುನನ 11ನೇ ದಿನದ ಕಾರ್ಯಯನ್ನು ಇತ್ತೀಚೆಗೆ ನೆರವೇರಿಸಲಾಗಿದೆ. ತವರು ಬಳ್ಳೆ ಕ್ಯಾಂಪ್​ನಿಂದ ಬಂದಿದ್ದ ಮಾವುತ ವಿನು, ಕುಟುಂಬ ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಅರ್ಜುನ ಆನೆಗೆ ಪ್ರಿಯವಾದ ಅಹಾರಗಳನ್ನ ಸಮಾಧಿ ಬಳಿ ಇಟ್ಟು ನಮಿಸಿದ್ದರು. ಮಗನಂತೆ ಸಾಕಿದ್ದ ಅರ್ಜುನನ ಸಮಾಧಿ ಬಳಿ ಬರುತ್ತಿದ್ದಂತೆ ತಂದೆ ದೊಡ್ಡಪ್ಪಾಜಿ, ತಾಯಿ ಚಿಕ್ಕಮ್ಮಣ್ಣಿ ಹಾಗೂ ಮಕ್ಕಳು ಕಣ್ಣೀರು ಕಟ್ಟೆಯೊಡೆದಿತ್ತು. ಸಮಾಧಿ ಮೇಲೆ ಮಲಗಿ ಮಾವುತ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದಿದ್ದವರ ಮನಕಲಕುವಂತಿತ್ತು.

ಸುತ್ತಮುತ್ತಲ ಗ್ರಾಮಸ್ಥರು ಕಬ್ಬು, ಬೆಲ್ಲ ಇಟ್ಟು ಅರ್ಜನನ ಸಮಾಧಿಗೆ ಪೂಜೆ ಸಲ್ಲಿಸಿದ್ದರು. ತಾಯಿ ಚಾಮುಂಡೇಶ್ವರಿಯನ್ನ ಹೊತ್ತು ಮೆರೆಸಿದ ಅರ್ಜುನನ ಸಮಾಧಿ ಬಳಿಯೇ ಸ್ಮಾರಕ ನಿರ್ಮಾಣವಾಗಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ