ಹಾವೇರಿ: ಎಣ್ಣೆ ಪ್ರಿಯರನ್ನು ಕೊರೊನಾ ಸೋಂಕು ಪರಿ ಪರಿಯಾಗಿ ಕಾಡತೊಡಗಿದೆ. ಹಾವೇರಿ ನಗರದ ಹೃದಯ ಭಾಗದಲ್ಲಿ ಪಿ.ಬಿ. ರಸ್ತೆಯಲ್ಲಿ ಮೇಲ್ಛಾವಣಿ ಕೊರೆದು ವೈನ್ ಶಾಪ್ ಗೆ ಕನ್ನ ಹಾಕಿದ್ದಾರೆ.
ಮುತ್ತುರಾಜ ಎಂಬುವರಿಗೆ ಸೇರಿದ ಲಕ್ಷ್ಮೀ ವೆಂಕಟೇಶ್ವರ ವೈನ್ ಸೆಂಟರ್ ನಲ್ಲಿ ಕಳ್ಳತನ ವರದಿಯಾಗಿದೆ. ಎಷ್ಟು ಪ್ರಮಾಣದ ಮದ್ಯ ಕಳ್ಳತನ ಆಗಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಲಾಕ್ ಡೌನ್ ನಿಂದಾಗಿ ಅಂಗಡಿಯನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಲಾಕ್ ಮಾಡಿ, ಸೀಲ್ ಹಾಕಿದ್ದರು. ಆದರೂ ಮೇಲ್ಛಾವಣಿ ಮೂಲಕ ಕಳ್ಳತನ ನಡೆದಿದೆ. ಸ್ಥಳಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.