‘ರೇವಣ್ಣ ಮೇಲೆ ಗೂಬೆ ಕೂರಿಸ್ತಿದ್ರಿ, ಈಗ ಗೊತ್ತಾಯ್ತಾ ಯಾರು ಅಂತ ಸಿದ್ರಾಮಣ್ಣಾ?’
ಮೈಸೂರು: ನಾನು ಅಂದೂ ಇದೇ ಹೇಳಿದ್ದೆ, ಈಗ್ಲೂ ಇದನ್ನೇ ಹೇಳುತ್ತೇನೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಪಕ್ಷದ ವಿರೋಧಿ. ಮೈತ್ರಿ ಸರ್ಕಾರ ಪತನವಾಗಲು ಏನು ಕಾರಣಗಳಿದ್ದವು ಎಂದು ರಮೇಶ್ ಜಾರಕಿಹೊಳಿ ಬಿಡಿಸಿ ಹೇಳಿದ್ದಾರೆ. ಸಿದ್ದರಾಮಯ್ಯರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಮೈಸೂರಿನ ಹುಣಸೂರಿನಲ್ಲಿ ಹೇಳಿದ್ದಾರೆ. ನನ್ನ ಮತ್ತು ಹೆಚ್.ಡಿ ರೇವಣ್ಣ ವರ್ತನೆಯೇ ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಎಂದು ಗೂಬೆ ಕೂರಿಸುತ್ತಿದ್ದರು. ಆದರೆ ಈಗ ರಮೇಶ್ ಜಾರಕಿಹೊಳಿಯಿಂದ ಸತ್ಯ ಹೊರಗೆ ಬಂದಿದೆ ಎಂದು ಹಿಂದೆ ಸರ್ಕಾರ ಪತನದ […]
ಮೈಸೂರು: ನಾನು ಅಂದೂ ಇದೇ ಹೇಳಿದ್ದೆ, ಈಗ್ಲೂ ಇದನ್ನೇ ಹೇಳುತ್ತೇನೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಪಕ್ಷದ ವಿರೋಧಿ. ಮೈತ್ರಿ ಸರ್ಕಾರ ಪತನವಾಗಲು ಏನು ಕಾರಣಗಳಿದ್ದವು ಎಂದು ರಮೇಶ್ ಜಾರಕಿಹೊಳಿ ಬಿಡಿಸಿ ಹೇಳಿದ್ದಾರೆ. ಸಿದ್ದರಾಮಯ್ಯರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಮೈಸೂರಿನ ಹುಣಸೂರಿನಲ್ಲಿ ಹೇಳಿದ್ದಾರೆ.
ನನ್ನ ಮತ್ತು ಹೆಚ್.ಡಿ ರೇವಣ್ಣ ವರ್ತನೆಯೇ ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಎಂದು ಗೂಬೆ ಕೂರಿಸುತ್ತಿದ್ದರು. ಆದರೆ ಈಗ ರಮೇಶ್ ಜಾರಕಿಹೊಳಿಯಿಂದ ಸತ್ಯ ಹೊರಗೆ ಬಂದಿದೆ ಎಂದು ಹಿಂದೆ ಸರ್ಕಾರ ಪತನದ ವೇಳೆ ತಮ್ಮನ್ನು ದೂರಿದ್ದವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಉಪಚುನಾವಣೆ ನಡೆಯಲಿರುವ ಎಲ್ಲಾ 15 ಕ್ಷೇತ್ರಗಳಿಗೂ ಜೆಡಿ ಎಸ್ ಅಭ್ಯರ್ಥಿಗಳನ್ನು ಹಾಕುತ್ತೇವೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದರು.
Published On - 3:02 pm, Sat, 16 November 19