Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಮಾನಹಾನಿ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

ಬಿಜೆಪಿ ವಿರುದ್ಧ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಮಾನಹಾನಿ ಕೇಸ್ ರದ್ದತಿಗೆ ಹೈಕೋರ್ಟ್​ ನಕಾರವೆತ್ತಿದ್ದು, ಭಾರತೀಯ ಜನತಾ ಪಕ್ಷ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದೆ. ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್​ ರಾಜಕೀಯ ಪಕ್ಷದ ವಿರುದ್ಧ ಕೇಸ್ ಮುಂದುವರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದು, ಕೇಸ್ ರದ್ದುಪಡಿಸಲು ನ್ಯಾ.ಕೃಷ್ಣ ದೀಕ್ಷಿತ್​ರಿದ್ದ ಹೈಕೋರ್ಟ್ ಪೀಠ ನಿರಾಕರಿಸಿದೆ. 

ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಮಾನಹಾನಿ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ
ರಿಜ್ವಾನ್ ಅರ್ಷದ್
Follow us
Ramesha M
| Updated By: ಗಂಗಾಧರ​ ಬ. ಸಾಬೋಜಿ

Updated on:Feb 22, 2024 | 9:45 PM

ಬೆಂಗಳೂರು, ಫೆಬ್ರವರಿ 22: ಬಿಜೆಪಿ ವಿರುದ್ಧ ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಮಾನಹಾನಿ ಕೇಸ್ ರದ್ದತಿಗೆ ಹೈಕೋರ್ಟ್ (High Court)​ ನಕಾರವೆತ್ತಿದ್ದು, ಭಾರತೀಯ ಜನತಾ ಪಕ್ಷ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದೆ. ನಕಲಿ ವೋಟರ್ ಐಡಿ ಕುರಿತಂತೆ ಭಾರತೀಯ ಜನತಾ ಪಕ್ಷ 2019ರ ಟ್ವೀಟ್​ ಮಾಡಿತ್ತು. ಆ ಟ್ವೀಟ್​ನಿಂದ ಮಾನಹಾನಿಯಾಗಿದೆ ಎಂದು ಬಿಜೆಪಿ ವಿರುದ್ಧ ಶಾಸಕ ರಿಜ್ವಾನ್ ಅರ್ಷದ್ ದೂರು ದಾಖಲಿಸಿದ್ದರು. ಈ ಕೇಸ್ ಪ್ರಶ್ನಿಸಿ ಅಂದಿನ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅರ್ಜಿ ಸಲ್ಲಿಸಿದ್ದರು. ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್​ ರಾಜಕೀಯ ಪಕ್ಷದ ವಿರುದ್ಧ ಕೇಸ್ ಮುಂದುವರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದು, ಕೇಸ್ ರದ್ದುಪಡಿಸಲು ನ್ಯಾ.ಕೃಷ್ಣ ದೀಕ್ಷಿತ್​ರಿದ್ದ ಹೈಕೋರ್ಟ್ ಪೀಠ ನಿರಾಕರಿಸಿದೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 499 ಮತ್ತು 500 ರಲ್ಲಿ ಮಾನನಷ್ಟ ಪಠ್ಯ ಆಧರಿಸಿ ರಾಜಕೀಯ ಪಕ್ಷದ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇರುವಂತಿಲ್ಲ ಎಂದು ಅರ್ಜಿದಾರರು ವಾದ ಮಂಡಿಸಿದ್ದಾರೆ. ಕಾನೂನಿನ ಮೂಲಕ ಜಾರಿಗೊಳಿಸದ ಹೊರತು ಮತ್ತು ಅಂತಹ ಕ್ರಮವನ್ನು ರಾಜಕೀಯ ಪಕ್ಷದ ವಿರುದ್ಧ ತೆಗೆದುಕೊಳ್ಳಲಾಗುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಭುಗಿಲೆದ್ದ ಆಕ್ರೋಶ: ಕೊನೆಗೂ ಬಜರಂಗದಳ ಕಾರ್ಯಕರ್ತರಲ್ಲಿ‌ ಕ್ಷಮೆಯಾಚಿಸಿದ ಅಶೋಕ್​​!

ರಾಜಕೀಯ ಪಕ್ಷವು ಸಾಮಾಜಿಕ ನೋಂದಣಿ ಕಾಯಿದೆಯಡಿಯಲ್ಲಿ ನೋಂದಾಯಿಸಲ್ಪಟ್ಟ ಒಂದು ಸಾಮಾಜಿಕ ವ್ಯವಸ್ಥೆಯಾಗಿದೆಯೇ ಹೊರತು ಕಂಪನಿಯಲ್ಲ. ಆದ್ದರಿಂದ ಅದು ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಕಾರ್ಪೊರೇಟ್ ಕಾನೂನು ವ್ಯಕ್ತಿತ್ವವನ್ನು ಹೊಂದಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಿಸಿದೆ.

ರಿಜ್ವಾನ್ ಅರ್ಷದ್ ಬೆಂಬಲಿಗರಿಂದ ಗೂಂಡಾಗಿರಿ ಆರೋಪ

ಇತ್ತೀಚೆಗೆ ಶಾಸಕ ರಿಜ್ವಾನ್​​ ಅರ್ಷದ್​ ಬೆಂಬಲಿಗರು ಗೂಂಡಾಗಿರಿ ನಡೆಸಿರುವ ಆರೋಪ ಕೇಳಿಬಂದಿತ್ತು. ರಿಜ್ವಾನ್​​ ಅರ್ಷದ್ ಬೆಂಬಲಿಗರು ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿನ, ರಿಚರ್ಡ್ಸ್ ಪಾರ್ಕ್ ಬಳಿಯ ಹರ್ಮನ್​ ರಿಗಾಲಿಯಾ ಅಪಾರ್ಟ್​ಮೆಂಟ್​​ನಲ್ಲಿ ನಲೆಸಿರುವ ದೆಹಲಿ ಮೂಲದ ಸೋನಂ ಮಿಶ್ರಾ ಎಂಬ ಮಹಿಳೆಯ ಮನೆಗೆ ರಾತ್ರೋರಾತ್ರಿ ನುಗ್ಗಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ: ದಿಲ್ಲಿಯಿಂದ ಬೆಂಗಳೂರಿಗೆ ಕುಮಾರಸ್ವಾಮಿ ವಾಪಸ್: ಸೀಟು ಹಂಚಿಕೆ ಬಗ್ಗೆ ಹೇಳಿದ್ದಿಷ್ಟು

ನಂತರ ಮಹಿಳೆ ಮೇಲೆ ದೌರ್ಜನ್ಯವೆಸಗಿ ಮನೆಯಲ್ಲಿನ ಚಿನ್ನಾಭರಣ, ಹಣ, ದೋಚಿ ನಂತರ ಮನೆಗೆ ಬೀಗ ಹಾಕಿ ಸೋನಂ ಮಿಶ್ರಾರನ್ನು ಹೊರಹಾಕಿರುವ ಆರೋಪ ಕೇಳಿಬಂದಿತ್ತು. ಪುಲಿಕೇಶಿನಗರ ಪೊಲೀಸ್​ ಠಾಣೆ ಪೊಲೀಸರು ಘಟನೆ ಕುರಿತು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆಂದು ಸೋನಂ ಆರೋಪಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:26 pm, Thu, 22 February 24