ಕೊರೊನಾ ಎರಡನೇ ಅಲೆಯಿಂದಾಗಿ ಆರ್ಥಿಕ ಸಂಕಷ್ಟ; ಹು-ಧಾ ಮಹಾನಗರ ಪಾಲಿಕೆಯ ಆದಾಯದಲ್ಲಿ ಕುಸಿತ
ಒಂದು ಕಡೆ ಕೇಲಸವಿಲ್ಲದೆ ಜನರು ಆರ್ಥಿಕವಾಗಿ ಜರ್ಜರಿತರಾಗಿದ್ದು, ಮತ್ತೊಂದೆಡೆ ಲಾಕ್ಡೌನ್ ಪರಿಣಾಮ ಮನೆಯಿಂದ ಹೊರ ಬಂದು ತೆರಿಗೆ ಕಟ್ಟಲು ಸಾಧ್ಯವಾಗದೆ ಇರುವುದು ತೆರಿಗೆ ಸಂಗ್ರಹದಲ್ಲಿನ ಹಿನ್ನೆಡೆಗೆ ಕಾರವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದ್ದಾರೆ.
ಧಾರವಾಡ: ಕೊರೊನಾ ಎರನಡನೇ ಅಲೆಯ ಭೀತಿಯಿಂದ ಇನ್ನು ದೇಶ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಸಾಕಷ್ಟು ಸಾವು ನೋವುಗಳ ಮಧ್ಯೆ ಇಡೀ ದೇಶ ಮತ್ತೊಮ್ಮೆ ಆರ್ಥಿಕ ಸಂಕಷ್ಟದತ್ತ ಬಂದಿದೆ. ಪ್ರತಿಯೊಂದು ಜಿಲ್ಲೆ ಕೂಡ ಈಗ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು, ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳ ಮಾಹೆಯಲ್ಲಿ 22.87 ಕೋಟಿ ತೆರಿಗೆ ಸಂಗ್ರಹವಾಗಿದೆ. ಆ ಮೂಲಕ ಕಳೆದ ಲಾಕ್ಡೌನ್ಗಿಂತಲೂ ಈ ಬಾರಿ ಹು-ಧಾ ಮಹಾನಗರ ಪಾಲಿಕೆಗೆ ಆದಾಯದಲ್ಲಿ ಹೊಡೆತ ಎದುರಾಗಿದೆ.
ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿನ ಲಾಕ್ಡೌನ್ನಲ್ಲಿ 36 ಕೋಟಿಯಷ್ಟು ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಆದಾಯದಲ್ಲಿ ಕುಸಿತ ಕಂಡುಬಂದಿದ್ದು, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಂಗ್ರಹವಾದ ಒಟ್ಟು ತೆರಿಗೆಯ ಪ್ರಮಾಣ 22.87 ಕೋಟಿ ರೂಪಾಯಿಯಷ್ಟಾಗಿದೆ. ಲಾಕ್ಡೌನ್ನಿಂದಾಗಿ ಆದಾಯದಲ್ಲಿ ಏರುಪೇರಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹೇಳಿದ್ದಾರೆ.
ಕೊರೋನಾ ಎರಡನೇ ಅಲೆಯ ತೀವ್ರತೆಯನ್ನು ತಗ್ಗಿಸಲು ಜನತಾ ಕರ್ಫ್ಯೂ ಹಾಗೂ ಲಾಕ್ಡೌನ್ ನಿರ್ಬಂಧಗಳಿಂದ ಹುಬ್ಬಳ್ಳಿ-ಧಾರವಾಡ ಅವಳಿನಗರದ ಜನರಿಗೆ ಆಸ್ತಿ ಕರ ಹಾಗೂ ಇನ್ನಿತರ ತೆರಿಗೆ ಪಾವತಿಸಲು ಅನುಕೂಲಕರವಾಗುವಂತೆ ಸ್ಥಾಪಿಸಿದ್ದ ಎಚ್-ಡಿ- 01 ಕೇಂದ್ರಗಳನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಹಿನ್ನೆಡೆಯಾಗಿದೆ. ಒಂದು ಕಡೆ ಕೇಲಸವಿಲ್ಲದೆ ಜನರು ಆರ್ಥಿಕವಾಗಿ ಜರ್ಜರಿತರಾಗಿದ್ದು, ಮತ್ತೊಂದೆಡೆ ಲಾಕ್ಡೌನ್ ಪರಿಣಾಮ ಮನೆಯಿಂದ ಹೊರ ಬಂದು ತೆರಿಗೆ ಕಟ್ಟಲು ಸಾಧ್ಯವಾಗದೆ ಇರುವುದು ತೆರಿಗೆ ಸಂಗ್ರಹದಲ್ಲಿನ ಹಿನ್ನೆಡೆಗೆ ಕಾರವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದ್ದಾರೆ.
ಒಟ್ಟಿನಲ್ಲಿ ಎಲ್ಲರಿಗೂ ಆರ್ಥಿಕ ಸಂಕಷ್ಟ ತಂದೊಡ್ಡಿರುವ ಕೊರೋನಾ ಈಗ ಮಹಾನಗರ ಪಾಲಿಕೆ ಆದಾಯಕ್ಕೂ ಕೊಡಲಿ ಪೆಟ್ಟು ಹಾಕಿದೆ. ಮೊದಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಲಿಕೆ ಈಗ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದ್ದು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಲಿದೆ.
ಇದನ್ನೂ ಓದಿ:
GST ಸಂಗ್ರಹದಲ್ಲಿ ಗಣನೀಯ ಹೆಚ್ಚಳ: ಡಿಸೆಂಬರ್ನಲ್ಲೇ ಹೆಚ್ಚು ತೆರಿಗೆ ಕಲೆಕ್ಟ್ ಆಗಿರೋದು!
ಕೊರೊನಾ ಮೂರನೇ ಅಲೆಯ ಮುನ್ನವೇ ನಡೆಯಲಿದೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ