ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಿದ್ದ ಆರೋಪಿಗಳು ಅಂದರ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಠಾಣೆ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಿದ್ದ ವಂಚಕರನ್ನ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳು ರಾಮೇಶ್ವರ ಗ್ರಾಮದ ರುದ್ರೇಗೌಡ ಅನ್ನೋರ 2 ಎಕರೆ ಜಮೀನು ಮಾರಿದ್ರು. ವಿಷಯ ತಿಳಿದು ರೈತ ರುದ್ರೇಗೌಡ ಪೊಲೀಸರಿಗೆ ದೂರು ಕೊಟ್ಟಿದ್ರು. ಬೀದಿ ಕಾಮಣ್ಣನಿಗೆ ಕಜ್ಜಾಯ: ಬೆಳಗಾವಿ ನಗರದ ಶಿವಾಜಿನಗರದಲ್ಲಿ ಯುವತಿ ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ದೆಹಲಿ ಮೂಲದ ಫಿರೋಜ್ ಎಂಬಾತ ಹುಡುಗಿಯರನ್ನ ಚುಡಾಯಿಸ್ತಿದ್ದ. ಇದನ್ನ ಕಂಡ ಸ್ಥಳೀಯರು ಆರೋಪಿಗೆ ಧರ್ಮದೇಟು […]
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಠಾಣೆ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಿದ್ದ ವಂಚಕರನ್ನ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳು ರಾಮೇಶ್ವರ ಗ್ರಾಮದ ರುದ್ರೇಗೌಡ ಅನ್ನೋರ 2 ಎಕರೆ ಜಮೀನು ಮಾರಿದ್ರು. ವಿಷಯ ತಿಳಿದು ರೈತ ರುದ್ರೇಗೌಡ ಪೊಲೀಸರಿಗೆ ದೂರು ಕೊಟ್ಟಿದ್ರು.
ಬೀದಿ ಕಾಮಣ್ಣನಿಗೆ ಕಜ್ಜಾಯ: ಬೆಳಗಾವಿ ನಗರದ ಶಿವಾಜಿನಗರದಲ್ಲಿ ಯುವತಿ ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ದೆಹಲಿ ಮೂಲದ ಫಿರೋಜ್ ಎಂಬಾತ ಹುಡುಗಿಯರನ್ನ ಚುಡಾಯಿಸ್ತಿದ್ದ. ಇದನ್ನ ಕಂಡ ಸ್ಥಳೀಯರು ಆರೋಪಿಗೆ ಧರ್ಮದೇಟು ಕೊಟ್ಟು ಮಾರ್ಕೆಟ್ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಚಲಿಸುತ್ತಿದ್ದ ಕಾರು ಭಸ್ಮ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಬಳಿ ಚಲಿಸುತ್ತಿದ್ದ ಕಾರೊಂದು ಭಸ್ಮವಾಗಿದೆ. ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ರಿಂದ ಕಾರಿನಲ್ಲಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟೈರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಬೆಂಗಳೂರಿನ ಚಾಮರಾಜಪೇಟೆಯ ಟಿ.ಆರ್.ಮಿಲ್ ಸಮೀಪದ ಟೈರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿದ್ದು, ಅಗ್ನಿ ಕೆನ್ನಾಲಿಗೆಗೆ ಅಪಾರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಮೀನುಗಳ ಮಾರಣ ಹೋಮ: ಕೋಲಾರ ತಾಲೂಕಿನ ನರಸಾಪುರ ಬಳಿಯ ಕುರ್ಕಿ ಕೆರೆಯಲ್ಲಿ ಲಕ್ಷಾಂತರ ಮೀನುಗಳು ಅಸುನೀಗಿವೆ. ಕೆರೆ ಸಮೀಪದ ಪ್ರಕಾಶ್ ಬಸ್ ತಯಾರಿಕಾ ಘಟಕದಿಂದ ಕಲುಷಿತ ನೀರು ಕೆರೆ ಸೇರಿದೆ ಎನ್ನಲಾಗಿದೆ. ಇದ್ರಿಂದ ಕೆರೆಯಲ್ಲಿ ಸಾಕಾಣಿಕೆ ಮಾಡಿದ್ದ ಮೀನುಗಳು ಕೊನೆಯುಸಿರೆಳೆದಿವೆ.
ಭದ್ರತಾ ಕೋಣೆಯಲ್ಲಿ ಬುಸ್.. ಬುಸ್… ಹಾಸನದ ವಿದ್ಯಾನಗರದಲ್ಲಿರುವ ದಿವ್ಯ ಚೈತನ್ಯ ಕ್ಯಾಂಪಸ್ನ ಭದ್ರತಾ ಕೋಣೆಯಲ್ಲಿದ್ದ 2 ಹಾವುಗಳನ್ನ ರಕ್ಷಿಸಲಾಗಿದೆ. ಕೋಣೆ ಸೇರಿದ್ದ ಮಂಡಲದ ಹಾವುಗಳು ‘ಬುಸ್ ಬುಸ್’ ಅಂತಾ ಶಬ್ದ ಮಾಡ್ತಿದ್ವು. ಆಗ ಅನುಮಾನಗೊಂಡ ಸಿಬ್ಬಂದಿ ಕೋಣೆ ಪರಿಶೀಲಿಸಿದಾಗ ಹಾವು ಕಾಣಿಸಿದ್ದು, ಸ್ನೇಕ್ ಶೇಷಪ್ಪ ಹಾವುಗಳನ್ನ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಕುಸಿದ ಗೋಡೆ, ಕಾರ್ಮಿಕನಿಗೆ ಗಾಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನಸಮುದ್ರದಲ್ಲಿ ಕಟ್ಟಡದ ಗೋಡೆ ಕುಸಿದು ಕಾರ್ಮಿಕ ಗಾಯಗೊಂಡಿದ್ದಾನೆ. ಕೆಪಿಸಿಎಲ್ ವತಿಯಿಂದ ಭದ್ರತಾ ಸಿಬ್ಬಂದಿಗಾಗಿ ಕಟ್ಟಡ ನಿರ್ಮಿಸಲಾಗ್ತಿದೆ. ಈ ವೇಳೆ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಸಿದ್ದರಾಮು ಎಂಬಾತನ ಮೇಲೆ ಗೋಡೆ ಬಿದ್ದಿದೆ.
ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ: ಬಳ್ಳಾರಿ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಚಾಲನೆ ನೀಡಿದ್ರು. ಈ ವೇಳೆ ನೆರೆದಿದ್ದ ಗಣ್ಯರಿಗೆ ಪೊಲೀಸ್ ಸಿಬ್ಬಂದಿ ಪಥ ಸಂಚಲನದ ಮೂಲಕ ಗೌರವ ಸಲ್ಲಿಸಿದ್ರು. ಎಸ್ಪಿ, ಹೆಚ್ಚುವರಿ ಎಸ್ಪಿ ಸೇರಿ ಹಲವರು ಉಪಸ್ಥಿತರಿದ್ರು. ಡಿಎಆರ್ ಗ್ರೌಂಡ್ನಲ್ಲಿ ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ.
Published On - 3:38 pm, Fri, 13 December 19