ಇಂಡಿಯನ್ ಕೋಸ್ಟ್ ಗಾರ್ಡ್ ನೇಮಕಾತಿ: 2027ರ ಬ್ಯಾಚ್‌ಗೆ ಅರ್ಜಿ ಆಹ್ವಾನ!
ಭಾರತೀಯ ಕೋಸ್ಟ್ ಗಾರ್ಡ್ 2027ರ ಬ್ಯಾಚ್ ಸಿಬ್ಬಂದಿ ನೇಮಕಾತಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅಕ್ಟೋಬರ್ 06 ರಿಂದ ಅಕ್ಟೋಬರ್ 21ರವರೆಗೆ SSC.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಮಧ್ಯವರ್ತಿಗಳಿಂದ ಎಚ್ಚರಿಕೆಯಿಂದಿರಿ. ಅಧಿಕೃತ ವೆಬ್‌ಸೈಟ್ ಸೂಚನೆಗಳನ್ನು ಅನುಸರಿಸಿ, ಅರ್ಹತೆಯ ಮೇಲೆ ಆಯ್ಕೆ ನಡೆಯುತ್ತದೆ.

ಇಂಡಿಯನ್ ಕೋಸ್ಟ್ ಗಾರ್ಡ್ (ಭಾರತೀಯ ಕರಾವಳಿ ರಕ್ಷಕ ಪಡೆ) 2027ರ ಬ್ಯಾಚ್‌ನ ನೊಂದಾಯಿತ ಸಿಬ್ಬಂದಿ ಹುದ್ದೆಗಳ ಆಯ್ಕೆಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಕರಾವಳಿ ಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಆನ್‌ಲೈನ್ ನೋಂದಣಿ ದಿನಾಂಕಗಳು:
ನೇಮಕಾತಿಗೆ ಸಂಬಂಧಿಸಿದ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಅಕ್ಟೋಬರ್ 06 (ಬೆಳಿಗ್ಗೆ 11:00 ಗಂಟೆ) ಯಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 21 (ಸಂಜೆ 17:30 ಗಂಟೆ) ಯವರೆಗೆ ಲಭ್ಯವಿರುತ್ತದೆ. ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ಅಧಿಕೃತ ವೆಬ್‌ಸೈಟ್ ಮತ್ತು ಸೂಚನೆಗಳು:
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ಸವಿಸ್ತಾರವಾದ ಜಾಹೀರಾತನ್ನು ವೀಕ್ಷಿಸಲು www.ssc.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಿಮ್ಮ ಆನ್‌ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸುವ ಮೊದಲು ವೆಬ್‌ಸೈಟ್‌ನಲ್ಲಿ ನೀಡಲಾದ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳುವುದು ಕಡ್ಡಾಯ. ವಿವಿದ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಮಾಹಿತಿಯು ಕೇವಲ ಮಾರ್ಗದರ್ಶನಕ್ಕಾಗಿ ಮಾತ್ರವಾಗಿದ್ದು, ಅರ್ಹತಾ ಮಾನದಂಡಗಳು, ಪರೀಕ್ಷೆಯ ದಿನಾಂಕ, ಸಮಯ ಮತ್ತು ಇತರೆ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ https://www.ssc.gov.in ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯೇ ಅಂತಿಮವಾಗಿರುತ್ತದೆ.
ಇದನ್ನೂ ಓದಿ: ಎಸ್‌ಬಿಐ ನೇಮಕಾತಿ: ವಾರ್ಷಿಕ 97 ಲಕ್ಷ ರೂ.ವರೆಗೆ ವೇತನ; 207 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಅಭ್ಯರ್ಥಿಗಳಿಗೆ ಜಾಗೃತಿ ಮತ್ತು ಸಂಪರ್ಕ ವಿವರಗಳು:
ಕೋಸ್ಟ್ ಗಾರ್ಡ್‌ನಲ್ಲಿ ಆಯ್ಕೆಯು ಸಂಪೂರ್ಣವಾಗಿ ನ್ಯಾಯಸಮ್ಮತವಾಗಿ ಮತ್ತು ಅಭ್ಯರ್ಥಿಯ ಅರ್ಹತೆಯ ಆಧಾರದ ಮೇಲೆ ಮಾತ್ರ ನಡೆಯುತ್ತದೆ. ಯಾವುದೇ ನೇಮಕಾತಿ ಏಜೆಂಟ್‌ಗಳು ಅಥವಾ ಮಧ್ಯವರ್ತಿಗಳ ಮಾತುಗಳನ್ನು ನಂಬಿ ಮೋಸ ಹೋಗಬಾರದು ಎಂದು ಎಚ್ಚರಿಸಲಾಗಿದೆ. ಮಧ್ಯವರ್ತಿಗಳು ಅಥವಾ ಅಕ್ರಮಗಳ ವಿರುದ್ಧ ದೂರು ನೀಡಲು ನೇಮಕಾತಿ ನಿರ್ದೇಶನಾಲಯ, ಕರಾವಳಿ ರಕ್ಷಕ ದಳದ ಪ್ರಧಾನ ಕಚೇರಿ (ನೋಯ್ಡಾ) ಅನ್ನು ಕೆಳಗಿನ ಮಾಧ್ಯಮಗಳ ಮೂಲಕ ಸಂಪರ್ಕಿಸಬಹುದು.
- ದೂರವಾಣಿ ಸಂಖ್ಯೆ: 0120-2201340
- ಇಮೇಲ್ ಐಡಿ: dte-rect@indiancoastguard.nic.in
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




