AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಯ್ತು. ಬಳಿಕ ಆ ದಿನಾಂಕ ಡಿಸೆಂಬರ್​​​ಗೆ ಹೋಯ್ತು. ಬಳಿಕ ಮುಂದಿನ ವರ್ಷ ಸಂಕ್ರಾಂತಿಗೆ ರಿಲೀಸ್ ಆಗಲಿದೆ ಎಂಬ ಮಾತುಗಳು ಕೇಳಿ ಬಂದವು. ಆದರೆ ಇದೆಲ್ಲವೂ ಸುಳ್ಳಾಗಿದ್ದು, ಇದೀಗ ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ನಿಗದಿಪಡಿಸಿದೆ.

ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್
Fauji Movie
ಮಂಜುನಾಥ ಸಿ.
|

Updated on: Oct 09, 2026 | 1:01 PM

Share

ಮುಖ್ಯಾಂಶಗಳು

  • ಪ್ರಭಾಸ್ ನಟನೆಯ ಹೊಸ ಸಿನಿಮಾ ‘ಫೌಜಿ’
  • ಭಾರತೀಯ ಸೈನಿಕನ ಕತೆ ಹೊಂದಿರುವ ಸಿನಿಮಾ ಇದು
  • ಸಿನಿಮಾದ ರಿಲೀಸ್ ಡೇಟ್ ಅನ್ನು ನಿಗದಿಪಡಿಸಲಾಗಿದೆ.

ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾ ಈ ವೇಳೆಗಾಗಲೇ ರಿಲೀಸ್ ಆಗಿರಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇದೆ. ಈ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಯ್ತು. ಬಳಿಕ ಆ ದಿನಾಂಕ ಡಿಸೆಂಬರ್​​​ಗೆ ಹೋಯ್ತು. ಬಳಿಕ ಮುಂದಿನ ವರ್ಷ ಸಂಕ್ರಾಂತಿಗೆ ರಿಲೀಸ್ ಆಗಲಿದೆ ಎಂಬ ಮಾತುಗಳು ಕೇಳಿ ಬಂದವು. ಆದರೆ ಇದೆಲ್ಲವೂ ಸುಳ್ಳಾಗಿದ್ದು, ಇದೀಗ ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ನಿಗದಿಪಡಿಸಿದೆ.

‘ಫೌಜಿ’ ಸಿನಿಮಾವು ಮಾರ್ಚ್ 18ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್​​ನಲ್ಲಿ ಸಾಕಷ್ಟು ಸಮಯ ಹಿಡಿದಿದ್ದರಿಂದ ಹಾಗೂ ಸಿನಿಮಾದ ಚಿತ್ರೀಕರಣ ಇನ್ನೂ ಪೂರ್ಣಗೊಳ್ಳದೇ ಇರುವ ಕಾರಣದಿಂದಾಗಿ ಸಿನಿಮಾದ ರಿಲೀಸ್ ತಡವಾಗುತ್ತಿದೆ. ಈ ಮೊದಲು ಬಂದಿದ್ದ ಸುದ್ದಿಯ ಪ್ರಕಾರ, ಸಿನಿಮಾದ ಚಿತ್ರೀಕರಣ ಸಂಪೂರ್ಣ ಆಗಿದೆ ಎನ್ನಲಾಗಿತ್ತು. ಆದರೆ ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸಿನಿಮಾದ ಇಂಟರ್ವೆಲ್ ಭಾಗ ಮತ್ತು ಕ್ಲೈಮ್ಯಾಕ್ಸ್​​ನ ಕೆಲ ಭಾಗದ ಚಿತ್ರೀಕರಣವನ್ನು ಮಾಡಲಾಗುತ್ತಿದೆಯಂತೆ.

ಕೆಲ ಮೂಲಗಳ ಪ್ರಕಾರ, ಸಿನಿಮಾದ ಮೂಡಿಬಂದಿರುವ ರೀತಿಯಿಂದ ಪ್ರಭಾಸ್ ಅಸಂತುಷ್ಟರಾಗಿದ್ದು, ಇದೇ ಕಾರಣಕ್ಕೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್​​ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆಯಂತೆ. ಜೊತೆಗೆ ಸಿನಿಮಾಕ್ಕೆ ಹೆಚ್ಚುವರಿ ವಿಎಫ್​​ಎಕ್ಸ್ ಸೇರಿಸಲಾಗುತ್ತಿದೆ. ಇವುಗಳ ಜೊತೆಗೆ ಸಿನಿಮಾದ ಕೆಲ ಭಾಗಗಳನ್ನು ಮರು ಚಿತ್ರೀಕರಣವನ್ನು ಸಹ ಮಾಡಲಾಗುತ್ತಿದೆ. ಸಿನಿಮಾದ ಹಿನ್ನೆಲೆ ಸಂಗೀತವನ್ನು ಸಹ ಬದಲಾವಣೆ ಮಾಡಲಾಗುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ಸಿನಿಮಾದ ರಿಲೀಸ್ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ:ಮತ್ತೆ ಮುಂದಕ್ಕೆ ಹೋಯ್ತು ಪ್ರಭಾಸ್ ಸಿನಿಮಾ ರಿಲೀಸ್

ಸಿನಿಮಾ ಅನ್ನು ರಘು ಹನುಪುಡಿ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ‘ಸೀತಾ ರಾಮಂ’ ಸಿನಿಮಾ ಅನ್ನು ಇವರೇ ನಿರ್ದೇಶಿಸಿದ್ದರು. ಸಿನಿಮಾನಲ್ಲಿ ಇಮಾನ್ವಿ ಇಸ್ಮಾಯಿಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾನಲ್ಲಿ ಕನ್ನಡದ ನಟಿ ಚೈತ್ರಾ ಆಚಾರ್ ಸಹ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.

‘ಫೌಜಿ’ ಸಿನಿಮಾ ಬಿಡುಗಡೆ ಮುಂದೂಡಿಕೆ ಆಗಿರುವುದು ಪ್ರಭಾಸ್ ಅವರ ಇನ್ನರೆಡು ಸಿನಿಮಾಗಳ ಮೇಲೆ ಪರಿಣಾಮ ಬೀರಲಿದೆ. ಪ್ರಭಾಸ್ ಅವರು ಜೊತೆ-ಜೊತೆಯಾಗಿ ‘ಸ್ಪಿರಿಟ್’ ಮತ್ತು ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿ ಸಹ ನಟನೆ ಮಾಡುತ್ತಿದ್ದು. ಈ ಸಿನಿಮಾಗಳ ಬಿಡುಗಡೆ ಮೇಲೆ ‘ಫೌಜಿ‘ ಸಿನಿಮಾದ ರಿಲೀಸ್ ಪರಿಣಾಮ ಬೀರುತ್ತಿದೆ. ‘ಫೌಜಿ’ ರಿಲೀಸ್ ತಡವಾದ ಕಾರಣ ಈ ಸಿನಿಮಾದ ರಿಲೀಸ್ ಸಹ ತಡವಾಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More